ISL 2021-22‌: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮಣಿಸಿ ಬೆಂಗಳೂರು ಎಫ್‌ಸಿ ಶುಭಾರಂಭ

* 8ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಶುಭಾರಂಭ

* ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 4-2 ಗೋಲುಗಳಿಂದ ಜಯಭೇರಿ

* ಸುನಿಲ್‌ ಚೆಟ್ರಿ ಪಡೆ 2ನೇ ಪಂದ್ಯವನ್ನು ನವೆಂಬರ್ 24ರಂದು ಒಡಿಶಾ ವಿರುದ್ಧ ಆಡಲಿದೆ  

ISL Sunil Chhetri Led Bengaluru FC Beat NorthEast United FC in Athletic Stadium in Bambolim kvn

ಬಾಂಬೊಲಿನ್‌(ನ.21): ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ (Bengaluru FC) ತಂಡ 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super Kings) ಫುಟ್ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 4-2 ಗೋಲುಗಳಿಂದ ಜಯಭೇರಿ ಬಾರಿಸಿತು.

ಕ್ಲೀಟನ್‌ ಸಿಲ್ವಾ 14ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಬಿಎಫ್‌ಸಿ (BFC) ಗೋಲಿನ ಖಾತೆ ತೆರೆದರೆ, ಡೆಶ್ಹಾರ್ನ್‌ ಬ್ರೌನ್‌ 17ನೇ ನಿಮಿಷದಲ್ಲಿ ಗೋಲು ಗಳಿಸಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ (NorthEast United FC) ಸಮಬಲ ಸಾಧಿಸಲು ನೆರವಾದರು. ಆದರೆ 22ನೇ ನಿಮಿಷದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ನ ಮಶೂರ್‌ ಸ್ವಂತ ಗೋಲು ಬಾರಿಸಿ ಬಿಎಫ್‌ಸಿ 2-1ರ ಮುನ್ನಡೆ ಪಡೆಯುವಂತೆ ಮಾಡಿದರು. 

ISL 2021-22: ಕೇರಳ ವಿರುದ್ದ ಎಟಿಕೆಗೆ 4-2ರಿಂದ ಭರ್ಜರಿ ಗೆಲುವು

ಇನ್ನು 25ನೇ ನಿಮಿಷದಲ್ಲಿ ಮಥಿಯಾಸ್‌ ಕೌರೆರ್‌ ಬಾರಿಸಿದ ಗೋಲಿನ ನೆರವಿನಿಂದ ನಾರ್ತ್‌ಈಸ್ಟ್‌ ಯುನೈಟೆಡ್‌ ಮತ್ತೆ ಸಮಬಲ ಸಾಧಿಸಿತು. 42ನೇ ನಿಮಿಷದಲ್ಲಿ ಜಯೇಶ್‌ ರಾಣೆ, 82ನೇ ನಿಮಿಷದಲ್ಲಿ ಪ್ರಿನ್ಸ್‌ ಇಬಾರ ಗೋಲು ಗಳಿಸಿ ಬಿಎಫ್‌ಸಿಗೆ 2 ಗೋಲುಗಳ ಅಂತರದಲ್ಲಿ ಜಯಿಸಲು ನೆರವಾದರು. ಸುನಿಲ್‌ ಚೆಟ್ರಿ ಪಡೆ 2ನೇ ಪಂದ್ಯವನ್ನು ನವೆಂಬರ್ 24ರಂದು ಒಡಿಶಾ ವಿರುದ್ಧ ಆಡಲಿದೆ.

ಆಸ್ಪ್ರೇಲಿಯನ್‌ ಓಪನ್‌ಗೆ ಜೋಕೋವಿಚ್‌ ಅನುಮಾನ?

ಮೆಲ್ಬರ್ನ್‌: 2022ರ ಆಸ್ಪ್ರೇಲಿಯನ್‌ ಓಪನ್‌ (Australian Open) ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆಯುವುದು ಕಡ್ಡಾಯ ಎಂದು ಟೂರ್ನಿಯ ಮುಖ್ಯಸ್ಥ ಕ್ರೇಗ್‌ ಟೈಲಿ ಶನಿವಾರ ಸ್ಪಷ್ಪಡಿಸಿದ್ದಾರೆ. ಈ ನಿಯಮವು ಲಸಿಕೆ ಕಡ್ಡಾಯಗೊಳಿಸಿದರೆ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲ ಎಂದಿದ್ದ ದಾಖಲೆಯ 9 ಬಾರಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ರನ್ನು (Novak Djokovic) ಇಕ್ಕಟ್ಟಿಗೆ ಸಿಲುಕಿಸಿದೆ. 

ಲಸಿಕೆ (Covid Vaccine) ಪಡೆಯುವುದು ವೈಯಕ್ತಿಕ ನಿರ್ಧಾರವಾಗಬೇಕು. ಅದನ್ನು ಯಾರ ಮೇಲೂ ಹೇರಬಾರದು ಎಂದು ಜೋಕೊವಿಚ್‌ ಹೇಳಿದ್ದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ್ದ ಆಸ್ಪ್ರೇಲಿಯಾ ಸರ್ಕಾರ ‘2 ಡೋಸ್‌ ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರ ನೀಡದಿದ್ದರೆ ಟೂರ್ನಿಗೆ ಪ್ರವೇಶವಿಲ್ಲ’ ಎಂದು ತಿಳಿಸಿತ್ತು. ಇದೀಗ ಟೂರ್ನಿಯ ಆಯೋಜಕರು ಸಹ ಲಸಿಕೆ ಕಡ್ಡಾಯಗೊಳಿಸಿದ್ದು, ಜೋಕೋವಿಚ್‌ ಸ್ಪರ್ಧೆ ಅನುಮಾನವೆನಿಸಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯು ಜನವರಿ 17ಕ್ಕೆ ಆರಂಭವಾಗಲಿದೆ.

ಕಾಣೆಯಾಗಿದ್ದ ಚೀನಾ ಟೆನಿಸ್‌ ಆಟಗಾರ್ತಿ ಶುವಾಯ್‌ ಸುರಕ್ಷಿತ

ಬೀಜಿಂಗ್‌: ಚೀನಾದ ಮಾಜಿ ಉಪಪ್ರಧಾನಿ ಜಾಂಗ್‌ ಗೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಳಿಕ ಹಲವು ದಿನಗಳಿಂದ ಕಾಣೆಯಾಗಿರುವ ಚೀನಾದ ತಾರಾ ಟೆನಿಸ್‌ ಆಟಗಾರ್ತಿ, ಗ್ರ್ಯಾನ್‌ ಸ್ಲಾಂ ವಿಜೇತೆ ಪೆಂಗ್‌ ಶುವಾಯ್‌ (Peng Shuai) ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. 

Peng Shuai Missing ಕಮ್ಯುನಿಷ್ಟ್ ನಾಯಕನ ಮೇಲೆ ಆರೋಪ ಮಾಡಿದ ಚೀನಾ ಟೆನಿಸ್ ಆಟಗಾರ್ತಿ ನಾಪತ್ತೆ..!

ಶನಿವಾರ ಚೀನಾದ ದಿನಪತ್ರಿಕೆಯ ಸಂಪಾದಕರು ಸಾಮಾಜಿಕ ತಾಣದಲ್ಲಿ ಶುವಾಯ್‌ ಅವರ ಫೋಟೊ ಪ್ರಕಟಿಸಿದ್ದು, ‘ಶುವಾಯ್‌ ಕೆಲ ದಿನಗಳಿಂದ ಅವರ ಮನೆಯಲ್ಲೇ ಸುರಕ್ಷಿತವಾಗಿದ್ದಾರೆ. ಶೀಘ್ರದಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ. ಗೌಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ ಬಳಿಕ ಶುವಾಯ್‌ ಕಾಣೆಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸೆರೆನಾ, ಜೋಕೋವಿಚ್‌ ಸೇರಿದಂತೆ ನೂರಾರು ಟೆನಿಸ್‌ ಆಟಗಾರರು ಶುವಾಯ್‌ ಸುರಕ್ಷತೆ ಬಗ್ಗೆ ಮಾಹಿತಿ ಒದಗಿಸುವಂತೆ ಆಗ್ರಹಿಸಿದ್ದರು.

ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೆಮೀಸ್‌ನಲ್ಲಿ ಸೋತ ಸಿಂಧು, ಶ್ರೀಕಾಂತ್‌

ಬಾಲಿ(ಇಂಡೋನೇಷ್ಯಾ): 2 ಬಾರಿ ಒಲಿಂಪಿಕ್‌ ಪದಕ ವಿಜೇತೆ, ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಇಂಡೋನೇಷ್ಯಾ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಇವರಿಬ್ಬರು ಹೊರಬಿದ್ದ ಕಾರಣ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.

ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸಿಂಧು, ಅಗ್ರ ಶ್ರೇಯಾಂಕಿತೆ ಜಪಾನ್‌ನ ಅಕನೆ ಯಮಗುಚಿ ವಿರುದ್ಧ 13-21, 9-21 ನೇರ ಗೇಮ್‌ಗಳಲ್ಲಿ ಕೇವಲ 32 ನಿಮಿಷಗಳಲ್ಲಿ ಸೋಲುಂಡರು. ಯಮಗುಚಿ ವಿರುದ್ಧ 12-7ರ ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ ಸಿಂಧು ಮೇಲುಗೈ ಸಾಧಿಸಲು ಆಗಲಿಲ್ಲ. ಇನ್ನು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌, ಡೆನ್ಮಾರ್ಕ್ನ ಆ್ಯಂಡ​ರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ 14-21, 9-21 ಗೇಮ್‌ಗಳಲ್ಲಿ ಪರಾಭವಗೊಂಡರು.

Latest Videos
Follow Us:
Download App:
  • android
  • ios