ISL 7: 3ನೇ ಪಂದ್ಯ ಡ್ರಾಮಾಡಿಕೊಂಡ ಬೆಂಗಳೂರು FC!
ಬೆಂಗಳೂರು ಎಫ್‌ಸಿ ತಂಡ ಇದೀಗ 3ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ನಾರ್ಥ್ ಈಸ್ಟ್ ವಿರುದ್ಧದ ಕಠಿಣ ಹೋರಾಟ ನೀಡಿದ ಬೆಂಗಳೂರು ತಂಡ ಆರಂಭದಲ್ಲಿ ಅಬ್ಬರಿಸಿ ಬಳಿಕ ಹಿಡಿತ ಸಡಿಲಗೊಳಿಸುವ ಸಂಪ್ರದಾಯ ಮುಂದುವರಿಸಿದೆ.
ಗೋವಾ(ಡಿ.8) : ನಾರ್ಥ್ ಈಸ್ಟ್ ಯುನೈಟೆಡ್ ಪರ ಲೂಯಿಸ್ ಮಚಾಡೋ ( 4 ಮತ್ತು 78ನೇ ನಿಮಿಷ) ಮತ್ತು ಬೆಂಗಳೂರು ಎಫ್ ಸಿ ಪರ ಜುವಾನ್ (13 ನೇ ನಿಮಿಷ) ಹಾಗೂ ಉದಾಂತ್ ಸಿಂಗ್ (70ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 21ನೇ ಪಂದ್ಯ 2-2 ಗೋಲಿನಿಂದ ಸಮಬಲಗೊಂಡಿತು.
ಐಎಸ್ಎಲ್ 7: ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಬಿಎಫ್‌ಸಿ.
ಸಮಬಲದ ಹೋರಾಟ:
ಲೂಯಿಸ್ ಮಚಾಡೋ (4ನೇ ನಿಮಿಷ)ದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಪರ ಗಳಿಸಿದ ಗೋಲು ಹಾಗೂ ಜುವಾನ್ ಗೊನ್ಸಾಲೀಸ್ ಫೆರ್ನಾಂಡೀಸ್ (13ನೇ ನಿಮಿಷ) ಬೆಂಗಳೂರು ಪರ ಗಳಿಸಿದ ಗೋಲಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 21ನೇ ಪಂದ್ಯದ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.
ನಾರ್ಥ್ ಈಸ್ಟ್ ಪಂದ್ಯದ ಆರಂಭದಲ್ಲೇ ಬೆಂಗಳೂರಿಗೆ ಆಘಾತ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ 4ನೇ ನಿಮಿಷದಲ್ಲಿ ಚಾರ್ ತುಳಿದ ಚೆಂಡು ಮಚಾಡೋ ಅವರ ಬುಜಕ್ಕೆ ತಗಲಿ ಗೋಲ್ ಕೀಪರ್ ಸಂಧೂ ಅವರನ್ನು ವಂಚಿಸಿತು. ನಾರ್ಥ್ಈಸ್ಟ್ ನ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜುವಾನ್ ಗಳಿಸಿದ ಗೋಲು ಸಮಬಲಗೊಳಿಸಿತು. ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬೆಂಗಳೂರಿಗೆ ಬಳಿಕ ನಾಲ್ಕೈದು ಅವಕಾಶಗಳು ಸಿಕ್ಕರೂ ಗೋಲಾಗಿ ರೂಪುಗೊಳ್ಳಲಿಲ್ಲ.