ISL 7: ಹೈದರಾಬಾದ್ ತಂಡಕ್ಕೆ ಜೆಮ್‌ಶೆಡ್‌ಪುರ ಎದುರಾಳಿ; ಯಾರಿಗೆ ಗೆಲುವು!
ಒಂದು ಗೆಲುವು ಒಂದು ಸೋಲಿನ ಮೂಲಕ 4 ಅಂಕ ಗಳಿಸಿರುವ ಹೈದರಾಬಾದ್ ತಂಡಕ್ಕೆ ಇದೀಗ ಗೆಲುವನ್ನೇ ಕಾಣದ ಜೆಮ್‌ಶೆಡ್‌ಪುರ್ ತಂಡದ ಸವಾಲು ಎದುರಾಗಿದೆ. ಈ ಮಹತ್ವದ ಪಂದ್ಯದಲ್ಲಿ ಗೆಲುವು ಯಾರಿಗೆ?
ಗೋವಾ(ಡಿ.01): ಅಜೇಯವಾಗಿದ್ದು, ಇದುವರೆಗೂ ಎದುರಾಳಿ ತಂಡಕ್ಕೆ ಗೋಲು ನೀಡದಿರುವ ಹೈದರಾಬಾದ್ ಎಫ್ ಸಿ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿದೆ, ಆದರೆ ಎರಡು ಪಂದ್ಯಗಳಲ್ಲಿ ಕೇವಲ ಎರಡು ಬಾರಿ ಗೋಲ್ ಬಾಕ್ಸ್ ಕಡೆಗೆ ಗುರಿ ಇಟ್ಟಿರುವ ತಂಡ ಬುಧವಾರ ಇಲ್ಲಿನ ತಿಲಕ ಮೈದಾನದಲ್ಲಿ ಜೆಮ್ಷಡ್ಪುರ ಎಫ್ ಸಿ ವಿರುದ್ಧ ಸೆಣಸಲಿದೆ, ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಗೆ ತಂಡದ ಸ್ಥಿತಿಯ ಬಗ್ಗೆ ಕೊಂಚ ಚಿಂತೆ ಕಾಡಿರುವುದು ಸಹಜ.
ಹೈದರಾಬಾದ್ ತಂಡ ಎರಡು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸುವ ಮೂಲಕ ಈ ಋತುವನ್ನು ಉತ್ತಮ ರೀತಿಯಲ್ಲಿ ಆರಂಭಿಸಿದೆ. ಆದರೆ ತಂಡ ಗಳಿಸಿದ್ದು ಕೇವಲ ಒಂದು ಗೋಲು ಅದು ಕೂಡ ಪೆನಾಲ್ಟಿ ಮೂಲಕ. ತಮ್ಮ ತಂಡ ಸುಧಾರಣೆ ಕಂಡುಕೊಳ್ಳಬೇಕಾದ ಅಗತ್ಯ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. “ನಾವು ಡಿಫೆನ್ಸ್ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿರುವುದು ಮಾತ್ರವಲ್ಲ, ಎದುರಾಳಿ ತಂಡದ ಪೆನಾಲ್ಟಿ ಬಾಕ್ಸ್ ಭಾಗದಲ್ಲೂ ಉತ್ತಮ ಪ್ರದರ್ಶನ ತೋರಬೇಕಾಗಿದೆ. ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕಾಗಿದೆ, ಪೆನಾಲ್ಟಿ ಮೂಲಕ ನಾವು ಗಳಿಸಿರುವುದ ಒಂದು ಗೋಲು ಮಾತ್ರ,’’ ಎಂದು ಹೇಳಿದರು.
ಚಿಂತೆ ಮಾಡಬೇಕಾಗಿರುವುದು ಅದೊಂದೇ ವಿಷಯವಲ್ಲ, ಜೊಯೆಲ್ ಚೈನಿಸ್ ಮತ್ತು ಲೂಯಿಸ್ ಸಾಸ್ಟ್ರೆ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಕೇವಲ ಭಾರರತೀಯ ಆಟಗಾರರ ಮೇಲೆಯೇ ಹೆಚ್ಚು ಅವಲಂಬಿತವಾಗಬೇಕಿದೆ. ಇಬ್ಬರೂ ಆಟಗಾರರು ಗಾಯಗೊಂಡಿರುವುದನ್ನು ಮಾರ್ಕ್ವೇಸ್ ಖಚಿತಪಡಿಸಿದ್ದಾರೆ.
ಜೆಮ್ಷೆಡ್ಪುರ ಸ್ಟಟ್ರೈಕರ್ ನಿರಿಜಸ್ ವಾಸ್ಕಿಸ್ ಈಗಾಗಲೇ ಮೂರು ಗೋಲು ಗಳಿಸಿದ್ದು, ಲಿಥುವೇನಿಯಾದ ಆಟಗಾರ ಇನ್ನೂ ಉತ್ತಮವಾಗಿ ಆಡಬಲ್ಲ ಎಂಬುದು ಮಾರ್ಕ್ವೇಸ್ ಅವರಿಗೆ ಅರಿವಿದೆ. “ಕಳೆದ ಮೂರು ಪಂದ್ಯಗಳಲ್ಲಿ ಅವರು ವಿಭಿನ್ನ ರೀತಿಯ ಮೂರು ಗೋಲುಗಳನ್ನು ಗಳಿಸಿದ್ದಾರೆ. ಸ್ಪರ್ಧೆಯಲ್ಲಿ ನಾವು ಇತರ ಆಟಗಾರರೂ ಗೋಲು ಗಳಿಸುವುದನ್ನು ಗಮನಿಸಬೇಕಾಗಿದೆ,’’ ಎಂದರು.
ISL 7: ಮುಂಬೈ ಸಿಟಿ ವಿರುದ್ಧ ಕಂಗಾಲಾದ ಈಸ್ಟ್ ಬೆಂಗಾಲ್ !
ಜೆಮ್ಷೆಡ್ಪುರ ತಂಡ ಸೇರಿದ ನಂತರ ಇನ್ನೂ ಜಯದ ರುಚಿ ಕಂಡಿರದ ಕೋಚ್ ಓವೆನ್ ಕೊಯ್ಲ್, ಎದುರಾಳಿ ತಂಡವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಎದುರಾಳಿ ತಂಡದ ಸಾಮರ್ಥ್ಯದ ಬಗ್ಗೆ ಅರಿವಿರುವುದಾಗಿ ಹೇಳಿದ್ದಾರೆ. , “ಹೈದರಾಬಾದ್ ತಂಡದ ಗುಣಮಟ್ಟದ ಬಗ್ಗೆ ಗೌರವವಿದೆ. ಅರಿದಾನೆ ಒಬ್ಬ ಅದ್ಭುತ ಆಟಗಾರ. ಅವರು ನೀಡುವ ಅಪಾಯದ ಬಗ್ಗೆ ನಮಗೆ ಅರಿವಿದೆ. ಒಡಿಶಾ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ನಾವು ತೋರಿದ ಪ್ರದರ್ಶನವನ್ನೇ ಇಲ್ಲಿ ತೋರಿದರೆ, ನಾವು ಮೂರು ಅಂಕಗಳನ್ನು ಗಳಿಸಬಲ್ಲೆವು,’’ ಎಂದು ಕೊಯ್ಲ್ ಹೇಳಿದರು.
“ನಮ್ಮಿಂದ ಏನು ಮಾಡಲು ಸಾಧ್ಯವಿದೆ, ಆ ಬಗ್ಗೆ ನಾವು ಗಮನಹರಿಸಲಿದ್ದೇವೆ, ನಾವು ಹಂತ ಹಂತವಾಗಿ ಬೆಳೆಯುತ್ತಿದ್ದೇವೆ. ಅದೇ ರೀತಿ ಸುಧಾರಣೆ ಕಾಣುತ್ತಿದ್ದೇವೆ,’’ ಎಂದರು. ಅಟ್ಯಾಕಿಂಗ್ ವಿಭಾಗದಲ್ಲಿ ಜೆಮ್ಷೆಡ್ಪುರ ಇದುವರೆಗೂ ಉತ್ತಮ ರೀತಿಯಲ್ಲಿ ಕಾರ್ಯನಿರರ್ವಹಿಸಿದೆ. ಆದರೆ ಡೆಫೆನ್ಸ್ ವಿಭಾಗ ಇನ್ನೂ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಹೈದರಾಬಾದ್ ವಿರುದ್ಧ ಮೂರು ಅಂಕ ಗಳಿಸಬೇಕಾದರೆ ಡಿಫೆನ್ಸ್ ವಿಭಾಗ ಪುಟಿದೇಳಬೇಕಿದೆ ಎಂಬ ಆಶಯವನ್ನು ಕೋಯ್ಲ್ ವ್ಯಕ್ತಪಡಿಸಿದ್ದಾರೆ.