ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ!
ಐಎಸ್ಎಲ್ ಟೂರ್ನಿಯ ಆರಂಭಿಕ 2 ಪಂದ್ಯದಲ್ಲಿ ಒಂದೊಂದು ಗೋಲು ಕಂಡ ಅಭಿಮಾನಿಗಳಿಗೆ ಬೆಂಗಳೂರು FC ಹಾಗೂ ಗೋವಾ FC ಪಂದ್ಯ ಗೋಲಿನ ಸುರಿಮಳೆ ಸುರಿಸಿತು. ಆದರೆ 4 ಗೋಲು ದಾಖಲಾದರೂ ಬೆಂಗಳೂರು ಗೆದ್ದಿಲ್ಲ, ಗೋವಾ ಸೋತಿಲ್ಲ.
ಗೋವಾ(ನ.22): ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 3ನೇ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ವಿಶೇಷವಾಗಿ ಕನ್ನಡಿಗರಿಗೆ ಇದು ಮಹತ್ವದ ಪಂದ್ಯವಾಗಿತ್ತು. ಬೆಂಗಳೂರು ಎಫ್‌ಸಿ ತಂಡಕ್ಕೆ ಗೋವಾ ಸವಾಲು ಒಡ್ಡಿತ್ತು. ರೋಚಕ ಹೋರಾಟದಲ್ಲಿ ಬೆಂಗಳೂರು ತಂಡ 2 ಗೋಲು ಸಿಡಿಸಿದರೆ, ಗೋವಾ ಕೂಡ 2 ಗೋಲು ಸಿಡಿಸ ಸಮಬಲ ಸಾಧಿಸಿತು.
ISL 7: ಮುಂಬೈಗೆ ಶಾಕ್ ನೀಡಿದ ನಾರ್ಥ್ ಈಸ್ಟ್; ಹೊಸ ಉತ್ಸಾಹದಲ್ಲಿ ತಂಡ!..
ಬೆಂಗಳೂರು ಎಫ್ ಸಿ ಪರ ಕ್ಲೈಟನ್ ಸಿಲ್ವಾ (27ನೇ ನಿಮಿಷ) ಮತ್ತು ಜುವಾನನ್ ಫೆರ್ನಾಂಡೀಸ್ (57ನೇ ನಿಮಿಷ), ಎಫ್ ಸಿ ಗೋವಾ ಪರ ಐಗರ್ ಏಂಗುಲೊ (66 ಮತ್ತು 69ನೇ ನಿಮಿಷ) ಗೋಲು ಗಳಿಸುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೂರನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು.
ISL 7: ಕೇರಳ ಬ್ಲಾಸ್ಟರ್ಸ್ ಮಣಿಸಿ ಶುಭಾರಂಭ ಮಾಡಿದ ATK ಮೋಹನ್ ಬಗಾನ್!.
ಬೆಂಗಳೂರಿಗೆ ಮುನ್ನಡೆ ನೀಡಿದ ಕ್ಲೈಟನ್
ಗೋವಾ ವಿರುದ್ಧ ಬೆಂಗಳೂರು ತಂಡ ಕಳೆದ ಆರು ಪಂದ್ಯಗಳಲ್ಲಿ ಸೋತಿರಲಿಲ್ಲ. ಅದೇ ಆತ್ಮವಿಶ್ವಾಸದಿಂದ ಅಂಗಣಕ್ಕಿಳಿದ ಬೆಂಗಳೂರು ತಂಡ ಚೆಂಡಿನ ಮೇಲೆ ಉತ್ತಮ ರೀತಿಯಲ್ಲಿ ನಿಯಂತ್ರಣ ಸಾಧಸಿತ್ತು. 27ನೇ ನಿಮಿಷದಲ್ಲಿ ಕ್ಲೈಟನ್ ಸಿಲ್ವಾ ಹೆಡರ್ ಮೂಲಕ ಗಳಿಸಿದ ಗೋಲು ಬೆಂಗಳೂರು ತಂಡಕ್ಕೆ ಮುನ್ನಡೆ ಕಲ್ಪಿಸಿತು. ನಂತರ 43ನೇ ನಿಮಿಷದಲ್ಲಿ ಬೆಂಗಳೂರು ತಂಡಕ್ಕೆ ಎರಡನೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಸುನಿಲ್ ಛೆಟ್ರಿಗೆ ಆ ಅವಕಾಶವನ್ನು ಗೋವಾದ ಡಿಫೆನ್ಸ್ ವಿಭಾಗ ನೀಡಲಿಲ್ಲ. ಗೋವಾದ ನೈಜ ಆಟ ಈ ಬಾರಿ ಕಂಡು ಬಂದಿಲ್ಲ. ಹೊಸ ಕೋಚ್ ಅವರ ರಣತಂತ್ರಕ್ಕೆ ಆಟಗಾರರು ಇನ್ನೂ ಹೊಂದಿಕೊಂಡಂತೆ ಕಾಣುತ್ತಿಲ್ಲ. ಗೋವಾ ವಿರುದ್ಧ ಬೆಂಗೂರು ಇಷ್ಟು ಸುಲಭವಾಗಿ ಇದುವರೆಗೂ ಗೋಲು ಗಳಿಸಿರಲಿಲ್ಲ. ಕ್ಲೈಟನ್ ಗಳಿಸಿದದ ಗೋಲು ಬೆಂಗೂರಿಗೆ ಆರಂಭಿಕ ಮುನ್ನಡೆ ಕಲ್ಪಿಸಿದ್ದು ಮಾತ್ರವಲ್ಲ, ಈ ಋತುವಿನಲ್ಲಿ ಪ್ರಥಮಾರ್ಧದಲ್ಲಿ ಗೋಲು ಗಳಿಸಿದ ಮೊದಲ ತಂಡವೆನಸಿತು.
ದ್ವಿತಿಯಾರ್ಧದಲ್ಲಿ ಗೋವಾ ತಿರುಗೇಟು!!!
57ನೇ ನಿಮಿಷದಲ್ಲಿ ಜುವಾನನ್ ಫೆರ್ನಾಂಡೀಸ್ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ 2-0 ಅಂತರದಲ್ಲಿ ಮೇಲುಗೈ ಸಾಧಿಸಿಕೊಂಡಿತು. ಆದರೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದ ಗೋವಾ ತಂಡ ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಎರಡು ಗೋಲುಗಳನ್ನು ಗಳಿಸಿ ಸಮಬಲಗೊಳಿಸಿತು. ಐಗರ್ ಏಂಗುಲೊ ಅಲ್ಬೊನಿಗಾ (66 ಮತ್ತು 69ನೇ ನಿಮಿಷ) ಗಳಿಸಿದ ಎರಡು ಗೋಲು ಬೆಂಗಳೂರು ತಂಡವನ್ನು ಬೆಚ್ಚಿಬೀಳಿಸುವಂತೆ ಮಾಡಿತು. ಪಂದ್ಯ ಕುತೂಹಲದತ್ತ ಸಾಗಿತು.