ISL ಫುಟ್ಬಾಲ್: ಬಿಎಫ್‌ಸಿಗಿಂದು ಜೆಮ್ಶೆಡ್‌ಪುರ ಚಾಲೆಂಜ್
ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವು ತವರಿನಲ್ಲಿ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಇಂದು[ಜನವರಿ 09] ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆಟ್ರಿ ಪಡೆ ಗೆಲುವಿನ ಜತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು[ಜ.09]: ಇಂಡಿಯನ್ ಸೂಪರ್ ಲೀಗ್ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಜಯದ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಸುನಿಲ್ ಚೆಟ್ರಿ ಆಬ್ಬರ, ಗೋವಾ ವಿರುದ್ಧ BFCಗೆ ಗೆಲುವು!
ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ, ಜೆಮ್ಶೆಡ್‌ಪುರ ಎಫ್‌ಸಿ ಸವಾಲನ್ನು ಎದುರಿಸಲಿದೆ. ತವರಲ್ಲಿ ನಡೆದ ಕಳೆದ ಪಂದ್ಯದಲ್ಲಿ ಗೋವಾ ಎಫ್‌ಸಿಯನ್ನು 2-1 ರಿಂದ ಬಗ್ಗು ಬಡಿದಿದ್ದ ಬಿಎಫ್‌ಸಿ, ಜೆಮ್ಶೆಡ್‌ಪುರ ವಿರುದ್ಧವೂ ಜಯಿಸುವ ವಿಶ್ವಾಸದಲ್ಲಿದೆ.
ISL 2019: ನಾರ್ತ್ ಈಸ್ಟ್ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಬೆಂಗಳೂರು FC!
ಆಡಿರುವ 11 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿರುವ ಬೆಂಗಳೂರು 19 ಅಂಕ ಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಜೆಮ್ಶೆಡ್‌ಪುರ ಎದುರು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿ ಸುನಿಲ್ ಚೆಟ್ರಿ ಪಡೆ ಇದೆ. ಟೂರ್ನಿಯಲ್ಲಿ ಬಿಎಫ್‌ಸಿ 13 ಗೋಲುಗಳಿಸಿದೆ. ಇದರಲ್ಲಿ ಚೆಟ್ರಿ ಖಾತೆಯಲ್ಲಿ 7 ಗೋಲುಗಳಿವೆ. ಚೆಟ್ರಿ, ಉದಾಂತ ಸಿಂಗ್, ಎರಿಕ್ ಪಾರ್ತಲು ಬಿಎಫ್‌ಸಿ ಪರ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇನ್ನು ಜೆಮ್ಶೆಡ್‌ಪುರ ಆಡಿರುವ 10 ಪಂದ್ಯಗಳಲ್ಲಿ 3 ಜಯ ಪಡೆದಿದ್ದು, 13 ಅಂಕಗಳಿಸಿ 6ನೇ ಸ್ಥಾನದಲ್ಲಿದೆ. ಅಲ್ಲದೇ ಜೆಮ್ಶೆಡ್‌ಪುರ ಕಳೆದ 5 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ.
ನಾರ್ಥ್ ಈಸ್ಟ್ ವಿರುದ್ಧ ಗೋವಾಕ್ಕೆ 2-0 ಜಯ
ಗೋವಾ: ಐಎಸ್‌ಎಲ್ 6ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಗೋವಾ ಎಫ್‌ಸಿ, ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ 2-0 ಗೋಲುಗಳಿಂದ ಜಯಭೇರಿ ಬಾರಿಸಿದೆ. ಟೂರ್ನಿಯಲ್ಲಿ 7ನೇ ಗೆಲುವು ದಾಖಲಿಸಿದ ಗೋವಾ, 24 ಅಂಕಗಳಿಂದ ಮತ್ತೆ ಅಗ್ರಸ್ಥಾನಕ್ಕೇರಿದೆ.
ಬುಧವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲಿನ ಖಾತೆ ತೆರೆಯಲು ಸಫಲರಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಗೋವಾ, ನಾರ್ಥ್ ಈಸ್ಟ್‌ನ ರಕ್ಷಣಾ ಕೋಟೆಯನ್ನು ವಂಚಿಸುವಲ್ಲಿ ಯಶಸ್ವಿಯಾಯಿತು. ನಾರ್ಥ್ ಈಸ್ಟ್’ನ ಕೊಮೊರಸ್ಕಿ (68ನೇ ನಿ.) ಸ್ವಂತ ಗೋಲುಗಳಿಸಿ ಗೋವಾದ ಖಾತೆ ತೆರೆದರು. ಕೊರೊಮಿನಾಸ್ (82ನೇ ನಿ.) ಪೆನಾಲ್ಟಿಅವಕಾಶದಲ್ಲಿ ಗೋಲುಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.