* ಇಂಡಿಯನ್ ಸೂಪರ್‌ ಲೀಗ್ 8ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ* ನವೆಂಬರ್ 19ರಿಂದ ಐಎಸ್‌ಎಲ್‌ ಟೂರ್ನಿ ಆರಂಭ* ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್‌-ಕೇರಳ ಬ್ಲಾಸ್ಟರ್‌ ಕಾದಾಟ

ಮುಂಬೈ(ಸೆ.14): 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ನ.19ಕ್ಕೆ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್‌ ತಂಡವು ಮಾರ್ಗೋದ ಫತ್ರೋಡಾ ಸ್ಟೇಡಿಯಂನಲ್ಲಿ ಕೇರಳ ಬ್ಲಾಸ್ಟರ್‌ ತಂಡವನ್ನು ಎದುರಿಸಲಿದೆ.

ಐಎಸ್‌ಎಲ್‌ ಟೂರ್ನಿಗೆ ಗೋವಾ ಆತಿಥ್ಯ ವಹಿಸಲಿದೆ. ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, ತನ್ನ ಮೊದಲ ಪಂದ್ಯವನ್ನು ನ.20ರಂದು ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ ಆಡಲಿದೆ. ಇನ್ನು ಹಾಲಿ ಚಾಂಪಿಯನ್‌ ಮುಂಬೈ ಸಿಟಿ ಎಫ್‌ಸಿ ತಂಡವು ನವೆಂಬರ್ 22ರಂದು ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!

Scroll to load tweet…
Scroll to load tweet…

ಈ ಬಾರಿಯ ವಾರಾಂತ್ಯದ ಡಬಲ್ ಹೆಡ್ಡರ್ ಪಂದ್ಯಗಳು ಕೊಂಚ ತಡವಾಗಿ ಆರಂಭವಾಗಲಿವೆ. ಶನಿವಾರದ ಎರಡನೇ ಪಂದ್ಯಗಳು ರಾತ್ರಿ 9.30ಕ್ಕೆ ಆರಂಭವಾಗಲಿವೆ. ಇನ್ನು ಸಾಮಾನ್ಯ ಪ್ರತಿದಿನದ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ.

ಏಷ್ಯನ್‌ ವಾಲಿಬಾಲ್‌: ಭಾರತಕ್ಕೆ 2ನೇ ಸೋಲು

ಚಿಬಾ(ಜಪಾನ್‌): ಏಷ್ಯನ್‌ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಸತತ 2ನೇ ಸೋಲು ಅನುಭವಿಸಿದೆ. ಸೋಮವಾರ ನಡೆದ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಭಾರತ, ಕತಾರ್‌ ವಿರುದ್ಧ 22-25, 14-25, 20-25 ಗೇಮ್‌ಗಳಲ್ಲಿ ಸೋಲು ಅನುಭವಿಸಿತು. ಭಾರತ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದ್ದು, ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಭಾರತ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಮಂಗಳವಾರ ವಿಶ್ವ ನಂ.10 ಜಪಾನ್‌ ವಿರುದ್ಧ ಆಡಲಿದೆ.