ಬೆಂಗಳೂರು(ಮಾ.01):  ಇಂಡಿಯನ್ ಸೂಪರ್ ಲೀಗ್ ಟೂರ್ನಿ 2020ರ 2ನೇ ಸೆಮಿಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಕಾರಣ ಹಾಲಿ ಹಾಗೂ ಮಾಜಿ ಚಾಂಪಿಯನ್ನರ ಹೋರಾಟ. ಒಂದು ತಂಡಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬಲ, ಇನ್ನೊಂದು ತಂಡಕ್ಕೆ ಮೂರನೇ ಪ್ರಶಸ್ತಿ ಗೆಲ್ಲುವ ತವಕ. ಈ ರೋಚಕ ಹೋರಾಟದಲ್ಲಿ ನಮ್ಮ ಬೆಂಗಳೂರು FC ಗೆಲುವಿನ ನಗೆ ಬೀರಿದೆ. 

ಇದನ್ನೂ ಓದಿ: ಕಾರ್ನರ್ ಕಿಕ್ ಗೋಲ್, 10ರ ಪೋರನ ಫುಟ್ಬಾಲ್ ಆಟಕ್ಕೆ ದಿಗ್ಗಜರೇ ದಂಗು!

ದೆಶಾರ್ನ್ ಬ್ರೌನ್ 31ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಎಟಿಕೆ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ  ಫೈನಲ್‌ಗೆ ಒಂದು ಹೆಜ್ಜೆ ಇಟ್ಟಿದೆ. ಕೊನೆಯ 10 ನಿಮಿಷಗಳ ಕಾಲ ಕೇವಲ 10 ಆಟಗಾರರನ್ನು ಹೊಂದಿದ್ದರೂ ಬೆಂಗಳೂರು ತನ್ನ ಮನೆಯಂಗಣದಲ್ಲಿ ಎಟಿಕೆಗೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಮುಂದಿನ ವಾರ ಕೋಲ್ಕೊತಾದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಖಚಿತ.

ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಫುಟ್ಬಾಲ್ ಪಟು; ಹಾಕಬೇಕಾಯ್ತು 10 ಹೊಲಿಗೆ !

ಬೆಂಗಳೂರಿಗೆ ಮುನ್ನಡೆ:
ದೆಶಾರ್ನ್ ಬ್ರೌನ್ (31ನೇ ನಿಮಿಷ) ಗಳಿಸಿದ ಗೋಲಿನಿಂದ ಆತಿಥೇಯ ಬೆಂಗಳೂರು ಎಫ್ ಸಿ ತಂಡ ಎಟಿಕೆ ವಿರುದ್ಧ ಪ್ರಥಮಾರ್ಧದಲ್ಲಿ  1-0 ಗೋಲಿನಿಂದ ಮೇಲುಗೈ ಸಾಧಿಸಿತು. ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಬೆಂಗಳೂರು ತಂಡ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, 7ನೇ ನಿಮಿಷದಲ್ಲೇ ಗೋಲಿನ ಖಾತೆ ತೆರಯುವ ಅವಕಾಶ ಸಿಕ್ಕಿತ್ತು, ಆದರೆ ರಾಹುಲ್ ಬಿಖೆ ಮಾಡಿದ ಹೆಡರ್ ಗೋಲ್  ಬಾಕ್ಸ್ ಮೇಲಿಂದ ಹಾದು ಹೋಯಿತು.

 ಎಟಿಕೆ ದಿಟ್ಟ ಹೋರಾಟ ನೀಡಿದರೂ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. 17ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಅವಕಾಶವನ್ನು ಕೈಚೆಲ್ಲಿದರು, ಹ್ಯಾಂಡ್ ಬಾಲ್ ಆದ ಕಾರಣ ಗೋಲನ್ನು ನಿರಾಕರಿಸಲಾಯಿತು. ಬೆಂಗಳೂರು ಈ ಹಿಂದಿನ ಲೀಗ್ ಪಂದ್ಯದಲ್ಲೂ ಆರಂಭದಲ್ಲೇ ಗೋಲು ಗಳಿಸಿದರೂ ಪಂದ್ಯ ಗೆಲ್ಲುವಲ್ಲಿ ವಿಫಲವಾಗಿತ್ತು, ಎಟಿಕೆ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು,