ಐಎಸ್‌ಎಲ್: ಬೆಂಗ್ಳೂರಲ್ಲಿಂದು ಬಿಎಫ್‌ಸಿ vs ಈಸ್ಟ್ ಬೆಂಗಾಲ್ ಫೈಟ್
ಬೆಂಗಳೂರಿನಲ್ಲಿಂದು ಆತಿಥೇಯ ಬೆಂಗಳೂರು ಎಫ್‌ಸಿ ತಂಡವು ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ಆರಂಭಿಕ ಪಂದ್ಯದಲ್ಲಿ ಶನಿವಾರ ಈಸ್ಟ್ ಬೆಂಗಾಲ್ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ನಗರದ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
2018-19ರ ಚಾಂಪಿಯನ್ ಬೆಂಗಳೂರು ತಂಡ ಕಳೆದ ಬಾರಿ ಕಳಪೆ ಪ್ರದರ್ಶನ ತೋರಿತ್ತು. 22 ಪಂದ್ಯಗಳಲ್ಲಿ ಕೇವಲ 5ರಲ್ಲಿ ಗೆದ್ದಿದ್ದ ತಂಡ, 22 ಅಂಕಗಳೊಂದಿಗೆ 10ನೇ ಸ್ಥಾನಿಯಾಗಿತ್ತು. ಸುನಿಲ್ ಚೆಟ್ರಿಯ ನಾಯಕತ್ವದ ತಂಡ ಈ ಬಾರಿ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.
ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿ: ಕರ್ನಾಟಕ ಫೈನಲ್ ಪ್ರವೇಶ
ಬೆಂಗಳೂರು: ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡಕ್ಕೆ 5-3 ಗೋಲುಗಳ ಗೆಲುವು ಲಭಿಸಿತು.
ಆಯುಶ್ ಕೊಠಾರಿ 33 ಮತ್ತು 44ನೇ ನಿಮಿಷದಲ್ಲಿ ಗೋಲು ಬಾರಿಸಿ ರಾಜ್ಯಕ್ಕೆ ಮುನ್ನಡೆ ಒದಗಿಸಿದರೆ, ಅರವಿಂದ್ 58 ಮತ್ತು 73ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ರಾಜ್ಯದ ಗೆಲುವಿನ ಅಂತರ ಹೆಚ್ಚಿಸಿದರು. ಮತ್ತೊಂದು ಗೋಲು 65ನೇ ನಿಮಿಷದಲ್ಲಿ ಸಿಎಚ್ ಸಾಕಿಪ್ ಹೊಡೆದರು. ಡೆಲ್ಲಿ 80 ಮತ್ತು 84ನೇ ನಿಮಿಷಗಳಲ್ಲಿ 2 ಗೋಲು ಬಾರಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.
ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಕರ್ನಾಟಕದ ಉನ್ನತಿ ಅಯ್ಯಪ್ಪ
ಟೂರ್ನಿಯಲ್ಲಿ ಈಗ ಎ ಮತ್ತು ಸಿ ಗುಂಪಿನ ತಂಡಗಳ ನಡುವೆ ಮಾತ್ರ ಪಂದ್ಯಗಳು ನಡೆದಿವೆ. ಬಿ ಮತ್ತು ಡಿ ಗುಂಪಿನ ಪಂದ್ಯಗಳು ಶನಿವಾರದಿಂದ ಆರಂಭಗೊಳ್ಳಲಿವೆ. ಸೆ.22ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ರಾಷ್ಟ್ರೀಯ ಈಜು: 17 ಬಂಗಾರ ಸೇರಿ 33 ಪದಕ ಗೆದ್ದ ಕರ್ನಾಟಕ ಸಮಗ್ರ ಚಾಂಪಿಯನ್
ಮಂಗಳೂರು: 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಶುಕ್ರವಾರ ಕೊನೆಗೊಂಡ ಕೂಟದಲ್ಲಿ ರಾಜ್ಯದ ಈಜುಪಟುಗಳು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರ 6 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 2ನೇ ಸ್ಥಾನ ಪಡೆದುಕೊಂಡಿತು.
ಕೊನೆ ದಿನ ರಾಜ್ಯಕ್ಕೆ 5 ಚಿನ್ನ, 1 ಬೆಳ್ಳಿ, 2 ಕಂಚು ಲಭಿಸಿತು. 200 ಮೀ. ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ಹಶಿಕಾ ರಾಮಚಂದ್ರ 2 ನಿಮಿಷ 06.49 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ ಅನೀಶ್ ಗೌಡ (1 ನಿಮಿಷ 52.09 ಸೆಕೆಂಡ್) ಚಿನ್ನ ಜಯಿಸಿದರು. ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್, ಮಹಿಳೆಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ತಾನ್ಯಾ ಷಡಕ್ಷರಿ ಚಿನ್ನ ಗೆದ್ದರು.
Duleep Trophy ಭಾರತ ಸಿ 525ಕ್ಕೆ ಆಲೌಟ್: ‘ಬಿ’ ತಂಡವೂ ದಿಟ್ಟ ಉತ್ತರ
ಪುರುಷರ 4*100 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧೆಯಲ್ಲಿ ಪೃಥ್ವಿ, ಕಾರ್ತಿಕೇಯನ್, ಆಕಾಶ್ ಮಣಿ, ಶ್ರೀಹರಿ ನಟರಾಜ್ ಇದ್ದ ತಂಡ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿತು. ಮಹಿಳೆಯರ 4*100 ಫ್ರೀಸ್ಟೈಲ್‌ನಲ್ಲಿ ವಿಹಿತಾ, ಶಾಲಿನಿ, ಶಿರಿನ್, ಹಶಿಕಾ ಅವರನ್ನೊಳಗೊಂಡ ತಂಡ ಬೆಳ್ಳಿ ಪಡೆಯಿತು.
ಅನೀಶ್ ಗೌಡ, ಹಶಿಕಾ ವೈಯಕ್ತಿಕ ಚಾಂಪಿಯನ್
ಕೂಟದಲ್ಲಿ ಕರ್ನಾಟಕದ ಅನೀಶ್ ಗೌಡ ಹಾಗೂ ಹಶಿಕಾ ರಾಮಚಂದ್ರ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಹಶಿಕಾ 4 ಚಿನ್ನದ ಪದಕ ಗೆದ್ದರೆ, ಅನೀಶ್ 3 ಚಿನ್ನ, 1 ಕಂಚು ಜಯಿಸಿದ್ದಾರೆ.