Asianet Suvarna News Asianet Suvarna News

ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಕರ್ನಾಟಕದ ಉನ್ನತಿ ಅಯ್ಯಪ್ಪ

ಕರ್ನಾಟಕದ ಪ್ರತಿಭಾನ್ವಿತ ಅಥ್ಲೀಟ್‌ ಉನ್ನತಿ ಅಯ್ಯಪ್ಪ ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

South Asian Junior Athletic Meet Karnataka Unnathi Aiyappa sets new meet record in 200m hurdles kvn
Author
First Published Sep 14, 2024, 9:37 AM IST | Last Updated Sep 14, 2024, 9:37 AM IST

ಚೆನ್ನೈ: ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ 2ನೇ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ 100 ಮೀ. ಹರ್ಡಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಉನ್ನತಿ, ಕೂಟದ ಕೊನೆ ದಿನವಾದ ಶುಕ್ರವಾರ ಮಹಿಳೆಯರ 200 ಮೀ. ರೇಸ್‌ನಲ್ಲಿ 11 ವರ್ಷ ಹಳೆಯ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು. ಇದರೊಂದಿಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ

ಅವರು 23.91 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಈ ಸ್ಪರ್ಧೆಯಲ್ಲಿ ಭಾರತ ಕ್ಲೀನ್‌ಸ್ವೀಪ್‌ ಮಾಡಿತು. ನಾನ್ಸಿ(24.11 ಸೆಕೆಂಡ್‌) ಬೆಳ್ಳಿ, ನೀರು ಪಾಠಕ್‌(24.91 ಸೆಕೆಂಡ್‌) ಕಂಚು ಪಡೆದರು. 2013ರಲ್ಲಿ ಸುಸೀಂದ್ರನ್‌ 24.32 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈವರೆಗೆ ದಾಖಲೆಯಾಗಿತ್ತು.

Duleep Trophy ಭಾರತ ಸಿ 525ಕ್ಕೆ ಆಲೌಟ್‌: ‘ಬಿ’ ತಂಡವೂ ದಿಟ್ಟ ಉತ್ತರ

ಇನ್ನು, ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ನಾನ್ಸಿ, ಅಬಿನಯ, ಕರ್ನಾಟಕದ ಕಾರ್ನಿಲಿಯೊ ಹಾಗೂ ಸುದೀಕ್ಷಾ ಇದ್ದ ತಂಡ ಬಂಗಾರದ ಸಾಧನೆ ಮಾಡಿತು. ಪುರುಷರ 4*100 ಮೀ.ನಲ್ಲಿ ಬೆಳ್ಳಿ, ಜಾವೆಲಿನ್‌ ಎಸೆತದಲ್ಲಿ ರೋಹನ್‌ ಯಾದವ್‌ಗೆ ಚಿನ್ನ, ದೀಪಾನ್ಶುಗೆ ಬೆಳ್ಳಿ, 200 ಮೀ. ಓಟದಲ್ಲಿ ಪ್ರತೀಕ್‌ಗೆ ಬೆಳ್ಳಿ, ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ರಿಶಿಕಾಗೆ ಚಿನ್ನ, 1500 ಮೀ. ರೇಸ್‌ನಲ್ಲಿ ವಿನೀತಗೆ ಚಿನ್ನ, ಲಕ್ಷಿತಾಗೆ ಬೆಳ್ಳಿ, ಪುರುಷರ 1500 ಮೀ.ನಲ್ಲಿ ಪ್ರಿಯಾನ್ಶುಗೆ ಚಿನ್ನ, ರಾಹುಲ್‌ಗೆ ಬೆಳ್ಳಿ, ಮಹಿಳೆಯರ ಶಾಟ್‌ಪುಟ್‌ನಲ್ಲಿ ತಮನ್ನಾಗೆ ಚಿನ್ನ, ಪೂಜಾಗೆ ಬೆಳ್ಳಿ, ಜಾವೆಲಿನ್‌ನಲ್ಲಿ ದೀಪಿಕಾಗೆ ಚಿನ್ನ, ಪೂನಂಗೆ ಬೆಳ್ಳಿ ಲಭಿಸಿತು.

ಇಂದಿನಿಂದ ಮೈಸೂರಿನಲ್ಲಿ ಕಿರಿಯರ ಅಥ್ಲೆಟಿಕ್ಸ್‌ ಕೂಟ

ಮೈಸೂರು: ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯು ಸೆ.14ರಿಂದ 17ರ ವರೆಗೆ ಕರ್ನಾಟಕ ರಾಜ್ಯ ಜೂನಿಯರ್‌ ಹಾಗೂ ಅಂಡರ್‌-23 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಮೈಸೂರಿನ ಚಾಮುಂಡಿ ಕ್ರೀಡಾಂಗಣದಲ್ಲಿ ಆಯೋಜಿಸಲಿದೆ. ಇದು 35ನೇ ದಕ್ಷಿಣ ವಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆ ಟ್ರಯಲ್ಸ್‌ ಆಗಿರಲಿದೆ. ಕೂಟದಲ್ಲಿ ಅಂಡರ್‌-14, ಅಂಡರ್‌-16, ಅಂಡರ್‌-18, ಅಂಡರ್‌-20 ಹಾಗೂ ಅಂಡರ್‌-23 ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಿರಿಯರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ವಿಜೇತರು ಸೇರಿ 1500ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?

ಸೆ.26ರಿಂದ ಕರ್ನಾಟಕ ಯೂತ್‌ ಬಾಸ್ಕೆಟ್‌ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆಯು ಸೆ.26ರಿಂದ ಅ.3ರ ವರೆಗೆ ರಾಜ್ಯ ಯೂತ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಆಯೋಜಿಸಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಂಡರ್‌-16 ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. 2008ರ ಜನವರಿ 1ರ ಬಳಿಕ ಜನಿಸಿದವರು ಲೀಗ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ತಿಳಿಸಿದೆ.

ಭಾರತ vs ಸ್ವೀಡನ್‌ ಇಂದು, ನಾಳೆ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ

ಸ್ಟಾಕ್‌ಹೋಮ್‌(ಸ್ವೀಡನ್‌): ಭಾರತ ಹಾಗೂ ಸ್ವೀಡನ್‌ ತಂಡಗಳು ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ವಿಶ್ವ ಗುಂಪು 1ರ ಪಂದ್ಯದಲ್ಲಿ ಶನಿವಾರ ಹಾಗೂ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ತಂಡ ಸ್ವೀಡನ್‌ ವಿರುದ್ಧ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ.

ಶನಿವಾರ ಆರಂಭಿಕ ಸಿಂಗಲ್ಸ್‌ ಪಂದ್ಯದಲ್ಲಿ ಶ್ರೀರಾಮ್‌ ಬಾಲಾಜಿ ಸ್ವೀಡನ್‌ನ ನಂ.1 ಆಟಗಾರ ಎಲಿಯಾಸ್‌ ಯೆಮೆರ್‌ ವಿರುದ್ಧ ಆಡಲಿದ್ದಾರೆ. 2ನೇ ಸಿಂಗಲ್ಸ್‌ನಲ್ಲಿ ಭಾರತದ ನಂ.1 ರಾಮ್‌ಕುಮಾರ್‌ ರಾಮನಾಥನ್‌ಗೆ ಲಿಯೋ ಬೊರ್ಗ್‌ ಸವಾಲು ಎದುರಾಗಲಿದೆ. ಬಳಿಕ ಭಾನುವಾರ ಶ್ರೀರಾಮ್‌-ರಾಮ್‌ಕುಮಾರ್ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದು, ಮೊದಲ ರಿವರ್ಸ್‌ ಸಿಂಗಲ್ಸ್‌ನಲ್ಲಿ ಶ್ರೀರಾಮ್‌, 2ನೇ ಪಂದ್ಯದಲ್ಲಿ ರಾಮ್‌ಕುಮಾರ್‌ ಆಡಲಿದ್ದಾರೆ.
 

Latest Videos
Follow Us:
Download App:
  • android
  • ios