ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ!
ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿಂದು ಬಲಿಷ್ಠ ಓಮನ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮಸ್ಕಟ್[ನ.19]: ನಾಲ್ಕು ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಭಾರತ ಫುಟ್ಬಾಲ್ ತಂಡದ ಮೇಲೆ ಒತ್ತಡ ಹೆಚ್ಚಾಗಿದ್ದು, ಮಂಗಳವಾರ ಇಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ‘ಇ’ ಗುಂಪಿನ ಪಂದ್ಯದಲ್ಲಿ ಭಾರತ, ಬಲಿಷ್ಠ ಒಮಾನ್ ವಿರುದ್ಧ ಸೆಣಸಲಿದ್ದು ತಂಡದ ಪಾಲಿಗಿದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ.
ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಶ್ರೀಕಾಂತ್ ಮೇಲೆ ಎಲ್ಲರ ಚಿತ್ತ
ಆಡಿರುವ 4 ಪಂದ್ಯಗಳಲ್ಲಿ 1 ಸೋಲು, 3 ಡ್ರಾಗಳನ್ನು ಕಂಡಿರುವ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಒಂದೊಮ್ಮೆ ತಂಡ ಸೋಲುಂಡರೆ 2022ರ ವಿಶ್ವಕಪ್ಗೆ ಅರ್ಹತೆ ಪಡೆಯುವ ಕನಸು ಭಗ್ನಗೊಳ್ಳಲಿದೆ. ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡಕ್ಕೆ ಈ ಪಂದ್ಯದ ಬಳಿಕ ಇನ್ನು 3 ಪಂದ್ಯ ಮಾತ್ರ ಉಳಿದಿರುತ್ತದೆ. ಮೂರೂ ಪಂದ್ಯಗಳು 2020ರಲ್ಲಿ ನಡೆಯಲಿವೆ. ಒಮಾನ್ ವಿರುದ್ಧ ಕನಿಷ್ಠ ಡ್ರಾ ಸಾಧಿಸಿ ಅಂಕ ಗಳಿಸಿದರೆ, ಭಾರತ ತಂಡಕ್ಕೆ 2023ರ ಏಷ್ಯನ್ ಕಪ್ ಅರ್ಹತಾ ಸುತ್ತಿನ 3ನೇ ಹಂತಕ್ಕೆ ನೇರ ಪ್ರವೇಶ ಪಡೆಯಲು ನೆರವಾಗಲಿದೆ.
ಭಾರತ-ಆಫ್ಘನ್ ಪಂದ್ಯ ಡ್ರಾನಲ್ಲಿ ಅಂತ್ಯ
ಈ ಟೂರ್ನಿ ವಿಶ್ವಕಪ್ ಹಾಗೂ ಏಷ್ಯನ್ ಕಪ್ ಎರಡೂ ಟೂರ್ನಿಗಳಿಗೆ ಅರ್ಹತಾ ಸುತ್ತು ಎನಿಸಿಕೊಂಡಿದೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ ಹಾಗೂ 4ನೇ ಸ್ಥಾನ ಗಳಿಸುವ ಉತ್ತಮ ತಂಗಳು ಏಷ್ಯನ್ ಕಪ್ ಅರ್ಹತಾ ಸುತ್ತಿನ 3ನೇ ಹಂತಕ್ಕೆ ಪ್ರವೇಶಿಸಲಿವೆ.
ಒಮಾನ್ ವಿರುದ್ಧ ಭಾರತ ಕಳಪೆ ದಾಖಲೆ ಹೊಂದಿದೆ. ಆಡಿರುವ 11 ಪಂದ್ಯಗಳಲ್ಲಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಆರಂಭಿಕ ಮುನ್ನಡೆ ಪಡೆದರೂ, ಕೊನೆ 10 ನಿಮಿಷಗಳಲ್ಲಿ 2 ಗೋಲು ಬಿಟ್ಟುಕೊಟ್ಟು ಸೋಲು ಅನುಭವಿಸಿತ್ತು.
ಪಂದ್ಯ ಆರಂಭ: ರಾತ್ರಿ 8.30ಕ್ಕೆ