Asianet Suvarna News

ಕೊರಿಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟ​ನ್‌: ಶ್ರೀಕಾಂತ್ ಮೇಲೆ ಎಲ್ಲರ ಚಿತ್ತ

ಕೊರಿಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟ​ನ್‌ ಟೂರ್ನಿಯಲ್ಲಿ ಕಿದಾಂಬಿ ಶ್ರೀಕಾಂತ್ ಸ್ಪರ್ಧಿಸುತ್ತಿದ್ದು, ಎಲ್ಲರ ಚಿತ್ತ ಮಾಜಿ ನಂ.1 ಶ್ರೇಯಾಂಕಿತ ಆಟಗಾರನತ್ತ ನೆಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Korea Open Badminton Kidambi Srikanth looking for good start
Author
Gwangju, First Published Nov 19, 2019, 10:41 AM IST
  • Facebook
  • Twitter
  • Whatsapp

ಗ್ವಾಂಗ್ಜು(ನ.19​): ಕಳೆದ ವಾರ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿ​ಫೈ​ನಲ್‌ ಪ್ರವೇ​ಶಿಸಿ ಲಯಕ್ಕೆ ಮರಳಿರುವ ಭಾರ​ತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌, ಮಂಗ​ಳ​ವಾರರಿಂದ ಇಲ್ಲಿ ಆರಂಭ​ಗೊ​ಳ್ಳ​ಲಿ​ರುವ ಕೊರಿಯಾ ಮಾಸ್ಟರ್ಸ್ ಟೂರ್ನಿ​ಯಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿ​ದ್ದಾರೆ. 

ಅಯ್ಯೋ ವಿಧಿಯೇ... ಅರ್ಧ ಶತಕ ಬಾರಿಸಿ ಪ್ರಾಣಬಿಟ್ಟ ಕ್ರಿಕೆಟಿಗ..!

ಮೊದಲ ಸುತ್ತಿ​ನಲ್ಲಿ ಶ್ರೀಕಾಂತ್‌ಗೆ ಹಾಂಕಾಂಗ್‌ನ ವೊಂಗ್‌ ವಿಂಗ್‌ ವಿನ್ಸೆಂಟ್‌ ಎದುರಾ​ಗ​ಲಿ​ದ್ದಾರೆ. ವಾಂಗ್‌ ವಿರುದ್ಧ ಶ್ರೀಕಾಂತ್‌ 10-3ರ ಗೆಲು​ವು-ಸೋಲಿನ ದಾಖಲೆ ಹೊಂದಿ​ದ್ದಾರೆ. ಕಳೆದ ಹಲವು ಟೂರ್ನಿ​ಗಳಲ್ಲಿ ಮೊದಲ ಸುತ್ತಿ​ನಲ್ಲೇ ಹೊರ​ಬಿದ್ದ ಸೈನಾ ನೆಹ್ವಾಲ್‌, ಕೊರಿಯಾ ಮಾಸ್ಟ​ರ್ಸ್ ಟೂರ್ನಿ​ಯಲ್ಲಿ ಸ್ಪರ್ಧಿ​ಸ​ದಿ​ರ​ಲು ನಿರ್ಧ​ರಿ​ಸಿ​ದ್ದಾರೆ. 

ಹಾಂಕಾಂಗ್‌ ಓಪನ್‌: ಸೆಮೀಸ್‌ನಲ್ಲಿ ಮುಗ್ಗ​ರಿ​ಸಿದ ಶ್ರೀಕಾಂತ್‌

ಮುಂದಿನ ವಾರ ಲಖನೌನಲ್ಲಿ ನಡೆ​ಯ​ಲಿ​ರುವ ಸಯ್ಯದ್‌ ಮೋದಿ ಟೂರ್ನಿ​ಯಲ್ಲಿ ಅವರು ಕಣ​ಕ್ಕಿ​ಳಿ​ಯುವ ಸಾಧ್ಯತೆ ಇದೆ. ಮಹಿಳಾ ಸಿಂಗಲ್ಸ್‌ ಹಾಗೂ ಡಬಲ್ಸ್‌ನ ಯಾವುದೇ ವಿಭಾಗದಲ್ಲಿ ಭಾರ​ತೀ​ಯರು ಸ್ಪರ್ಧಿ​ಸು​ತ್ತಿಲ್ಲ.
 

Follow Us:
Download App:
  • android
  • ios