Asianet Suvarna News Asianet Suvarna News

ಭಾರತ-ಆಫ್ಘನ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಫಿಫಾ ವಿಶ್ವ​ಕಪ್‌ ಅರ್ಹತಾ ಸುತ್ತಿನ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಆಫ್ಘಾನಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

FIFA World Cup Qualifiers match Doungel rescues a point as India remain winless
Author
Tajikistan, First Published Nov 15, 2019, 1:30 PM IST

ತ​ಜಿ​ಕಿ​ಸ್ತಾ​ನ(ನ.15​): ಆಫ್ಘಾ​ನಿ​ಸ್ತಾನ ವಿರುದ್ಧ ಗುರು​ವಾರ ನಡೆದ ಫಿಫಾ ವಿಶ್ವ​ಕಪ್‌ ಅರ್ಹತಾ ಸುತ್ತಿನ ಪಂದ್ಯ​ದಲ್ಲಿ ಭಾರತ ಸೋಲಿನ ದವಡೆಯಿಂದ ಪಾರಾ​ಯಿತು. ಅರ್ಹತಾ ಸುತ್ತಿನ 2ನೇ ಹಂತದ ಪಂದ್ಯ​ 1-1 ಗೋಲು​ಗ​ಳಲ್ಲಿ ಡ್ರಾಗೊಂಡಿತು. 

ಫಿಫಾ ಫುಟ್ಬಾಲ್: ಭಾರ​ತಕ್ಕಿಂದು ಆಫ್ಘನ್‌ ಚಾಲೆಂಜ್‌

ತನ​ಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿ​ರುವ ಆಫ್ಘಾ​ನಿ​ಸ್ತಾನ ವಿರುದ್ಧ ಡ್ರಾಗೆ ತೃಪ್ತಿ​ಪ​ಟ್ಟಿದ್ದು, ಅಭಿ​ಮಾ​ನಿ​ಗ​ಳಲ್ಲಿ ಭಾರೀ ನಿರಾಸೆ ಮೂಡಿ​ಸಿತು. ಭಾರತ ಟೂರ್ನಿ​ಯಲ್ಲಿ ಗೆಲು​ವಿನ ಖಾತೆ ತೆರೆ​ಯಲು ವಿಫ​ಲ​ವಾ​ಯಿತು. ಆಡಿ​ರುವ 4 ಪಂದ್ಯ​ಗ​ಳಲ್ಲಿ 1ರಲ್ಲಿ ಸೋತಿದ್ದು, ಇನ್ನು​ಳಿದ 3 ಪಂದ್ಯ​ಗ​ಳನ್ನು ಡ್ರಾ ಮಾಡಿ​ಕೊಂಡಿದೆ. 

ಸುನಿಲ್‌ ಚೆಟ್ರಿ ತಂಡ ಅರ್ಹತಾ ಸುತ್ತಿನ 3ನೇ ಹಂತ​ಕ್ಕೇ​ರು​ವುದು ಅನು​ಮಾ​ನ​ವೆ​ನಿ​ಸಿದೆ. ಭಾರತ ‘ಇ’ ಗುಂಪಿ​ನಲ್ಲಿ 4ನೇ ಸ್ಥಾನ​ದಲ್ಲೇ ಮುಂದು​ವ​ರಿ​ದಿದ್ದು, ಆಫ್ಘಾ​ನಿ​ಸ್ತಾನ 3ನೇ ಸ್ಥಾನ ಕಾಯ್ದು​ಕೊಂಡಿದೆ.

ಪಂದ್ಯದ ಅಂತಿಮ ಕ್ಷಣದಲ್ಲಿ ಗೋಲು ಬಾರಿ​ಸಿದ ಸೈಮಿನ್‌ಲೆನ್‌ ಡೌನ್ಜೆಲ್‌ (90+3ನೇ ನಿಮಿಷ) ಭಾರ​ತದ ಮಾನ ಕಾಪಾ​ಡಿದರು. ಜೆಲ್ಫಾ​ಗರ್‌ ನಜಾರಿ 45+1ನೇ ನಿಮಿಷದಲ್ಲಿ ಗೋಲು ಬಾರಿಸಿ ಮೊದ​ಲಾ​ರ್ಧದ ಮುಕ್ತಾ​ಯಕ್ಕೆ ಆಫ್ಘಾ​ನಿ​ಸ್ತಾನ 1-0 ಮುನ್ನಡೆ ಪಡೆ​ಯ​ಲು ನೆರ​ವಾ​ದರು.

Follow Us:
Download App:
  • android
  • ios