ನವದೆಹಲಿ(ಏ.06): ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) 2027ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಆತಿಥ್ಯಕ್ಕೆ ಏಷ್ಯನ್‌ ಫುಟ್ಬಾಲ್‌ ಕಾನ್ಫಿಡರೇಷನ್‌ಗೆ ಬಿಡ್‌ ಅರ್ಜಿ ಸಲ್ಲಿಸಿದೆ ಎಂದು ಎಐಎಫ್‌ಎಫ್‌ ಪ್ರಧಾನ ಕಾರ‍್ಯದರ್ಶಿ ಕುಶಾಲ್‌ ದಾಸ್‌ ಭಾನುವಾರ ಹೇಳಿದ್ದಾರೆ. 

ಕೊರೋನಾ ಎಫೆಕ್ಟ್: ಭಾರತದಲ್ಲಿ ನಡೆಯಬೇಕಿದ್ದ ಫುಟ್ಬಾಲ್‌ ವಿಶ್ವಕಪ್‌ ಮುಂದಕ್ಕೆ

ಒಂದೊಮ್ಮೆ ಈ ಬಿಡ್‌ನಲ್ಲಿ ಭಾರತ ಜಯಿಸಿ ಆತಿಥ್ಯದ ಅವಕಾಶ ದೊರೆತರೆ, ಮೊದಲ ಬಾರಿಗೆ ಪ್ರತಿಷ್ಠಿತ ಫುಟ್ಬಾಲ್‌ ಟೂರ್ನಿಯೊಂದನ್ನು ಆಯೋಜಿಸುವ ಅವಕಾಶ ಸಿಕ್ಕಿದಂತಾಗಲಿದೆ. 2019ರ ಆವೃತ್ತಿಯಿಂದ 24 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಭಾರತ ಮತ್ತು ಸೌದಿ ಅರೇಬಿಯಾ ಕಾಂಟಿನೆಂಟಲ್‌ ಪ್ರಶಸ್ತಿಯನ್ನು 3 ಬಾರಿ ಗೆದ್ದಿವೆ. 2022ರಲ್ಲಿ ಭಾರತ ಮಹಿಳಾ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಆತಿಥ್ಯ ವಹಿಸಲಿದೆ.

AFC ಕಪ್ ಸೋಲು- ಭಾರತ ಕೋಚ್ ರಾಜೀನಾಮೆ

ಈಗಾಗಲೇ ಸೌದಿ ಅರೇಬಿಯಾ ಮುಕ್ತವಾಗಿಯೇ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಆತಿಥ್ಯ ವಹಿಸುವ ಇಂಗಿತ ವ್ಯಕ್ತಪಡಿಸಿದೆ. 2027ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿ ಆತಿಥ್ಯಕ್ಕೆ ಬಿಡ್ಡಿಂಗ್ ಸಲ್ಲಿಸಲು ಮಾರ್ಚ್ 31ರಿಂದ ಜೂನ್ 30ರವರೆಗೆ ಅವಕಾಶವಿದೆ.

ಇನ್ನು ಈ ಮೊದಲೇ ಭಾರತ ಫಿಫಾ ಅಂಡರ್ 17 ಪುರುಷರ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇನ್ನು ನವೆಂಬರ್‌ನಲ್ಲಿ ನಡೆಯಬೇಕಿದ್ದ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್ ಟೂರ್ನಿಗೂ ಭಾರತ ಆತಿಥ್ಯ ವಹಿಸಿತ್ತಾದರೂ ಕೊರೋನಾ ವೈರಸ್ ಭೀತಿಯಿಂದಾಗಿ ಟೂರ್ನಿ ಮುಂದೂಡಲ್ಪಟ್ಟಿದೆ.