ಸ್ಯಾಫ್ ಫುಟ್‌ಬಾಲ್ ಫೈನಲ್‌ನಲ್ಲಿ ಗೆದ್ದು ಸೋತ ಭಾರತ, ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯ್ತು ಪಂದ್ಯ!
ಭಾರತ ಹಾಗೂ ಬಾಂಗ್ಲಾದೇಶದ 19 ವಯೋಮಿತಿ ಮಹಿಳಾ ತಂಡಗಳ ನಡುವಿನ ಫೈನಲ್ ಪಂದ್ಯ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಒಂದು ಹಂತದಲ್ಲಿ ಭಾರತವನ್ನು ವಿಜೇತ ಎಂದು ಘೋಷಣೆ ಮಾಡಿದ ಬಳಿಕ, ಕೊನೆಗೆ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಪ್ರಕಟಿಸಲಾಗಿದೆ.
ನವದೆಹಲಿ (ಫೆ.8): ಭಾರತ ಹಾಗೂ ಬಾಂಗ್ಲಾದೇಶ ನಡುವಿನ 19 ವಯೋಮಿತಿ ಮಹಿಳಾ ತಂಡಗಳ ಸ್ಯಾಫ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯ ಅತ್ಯಂತ ವಿವಾದಾತ್ಮಕವಾಗಿ ಮುಕ್ತಾಯ ಕಂಡಿದೆ. ಫುಟ್‌ಬಾಲ್‌ನಲ್ಲಿ ಇಲ್ಲದೇ ಇರುವ ನಿಯಮಗಳನ್ನೆಲ್ಲಾ ತಂದು ಕೊನೆಗೆ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಗಿದೆ. ಢಾಕಾದ ಬಂಗಬಂಧು ಸ್ಟೇಡಿಯಂನಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಏನಿತ್ತು ಏನಿಲ್ಲಾ ಎನ್ನುವಂತೆಯೇ ಇಲ್ಲ. ವಿವಾದವಾಗುವ ಎಲ್ಲಾ ಅಂಶಗಳನ್ನು ಕೂಡ ಈ ಪಣದ್ಯ ಹೊಂದಿತ್ತು. ಇದರ ಬೆನ್ನಲ್ಲಿಯೇ ಭಾರತದ ಫುಟ್‌ಬಾಲ್ ಫೆಡರೇಷನ್, ಸ್ಯಾಫ್‌ನಿಂದ ಹೊರಬರಬೇಕು ಎನ್ನುವ ಆಗ್ರಹ ಕೂಡ ವ್ಯಕ್ತವಾಗಿದೆ.
ಅಷ್ಟಕ್ಕೂ ಪಂದ್ಯದಲ್ಲಿ ಆಗಿದ್ದೇನು ಅನ್ನೋದು ನೋಡೋದಾದರೆ, ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ನಿಗದಿತ ಸಮಯದಲ್ಲಿ 1-1 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಫಲಿತಾಂಶ ನಿರ್ಧಾರಕ್ಕಾಗಿ ಹೆಚ್ಚುವರಿ ಸಮಯ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಆ ಬಳಿಕ ಫಲಿತಾಂಶ ನಿರ್ಧಾರವನ್ನು ಪೆನಾಲ್ಟಿ ಮೂಲಕ ಮಾಡುವುದಾಗಿ ನಿರ್ಧಾರವಾಯಿತು. ಪೆನಾಲ್ಟಿ ಎಲ್ಲಿಯ ತನಕ ಸಾಗಿತು ಎಂದರೆ ಎರಡೂ ತಂಡಗಳು ತಲಾ 11 ಪೆನಾಲ್ಟಿಯನ್ನು ಬಾರಿಸಿದ್ದವು. ಎರಡೂ ತಂಡದ ಗೋಲ್‌ಕೀಪರ್‌ಗಳ ಪೈಕಿ ಯಾರೊಬ್ಬರೂ ಚೆಂಡನ್ನು ರಕ್ಷಿಸಿರಲಿಲ್ಲ.
ಆ ಬಳಿಕ ಪಂದ್ಯದ ವಿಜೇತರನ್ನು ಕಾಯಿನ್ ಟಾಸ್ ಮೂಲಕ ನಿರ್ಧಾರ ಮಾಡುವುದಾಗಿ ರೆಫ್ರಿ ಘೋಷಣೆ ಮಾಡಿದ್ದರು. ಇದಕ್ಕೆ ಬಾಂಗ್ಲಾದೇಶ ತಂಡ ಕೂಡ ಒಪ್ಪಿಕೊಂಡಿತು. ರೆಫ್ರಿ ನಿರ್ಧಾರ ಮಾಡಿದ್ದ ಕಾಯಿನ್ ಟಾಸ್‌ನಲ್ಲಿ ಭಾರತ ಗೆಲುವು ಕಂಡಿತು. ಇದರ ಬೆನ್ನಲ್ಲಿಯೇ ಭಾರತ ತಂಡ ಸಂಭ್ರಮ ಆಚರಿಸಲು ಶುರು ಮಾಡಿತು. ಭಾರತ ಫುಟ್‌ಬಾಲ್ ಟೀಮ್‌ನ ಟ್ವಿಟರ್ ಪೇಜ್‌ನಲ್ಲಿ ಚಾಂಪಿಯನ್ ಎನ್ನುವ ಪೋಸ್ಟರ್‌ಗಳು ಕೂಡ ರಾರಾಜಿಸಿದ್ದವು. ಆದರೆ, ಕಾಯಿನ್ ಟಾಸ್ ನಿರ್ಧಾರವನ್ನು ತಾನು ಒಪ್ಪೋದಿಲ್ಲ ಎಂದು ಹೇಳಿದ ಬಾಂಗ್ಲಾದೇಶ ಇದರ ವಿರುದ್ಧ ಪ್ರತಿಭಟನೆ ಮಾಡಲು ಅರಂಭ ಮಾಡಿತ್ತು.
ಸಾಕ್ಷಿ ಧೋನಿ ಕುರಿತು ಬೆನ್ ಡಕೆಟ್ ಮಾಡಿದ್ದ 11 ವರ್ಷದ ಹಿಂದಿನ ಟ್ವೀಟ್ ವೈರಲ್!
ಪಂದ್ಯ ನೋಡಲು ಆಗಮಿಸಿದ್ದ ಬಾಂಗ್ಲಾದೇಶದ ಅಭಿಮಾನಿಗಳು ಮೈದಾನಕ್ಕೆ ನೀರಿನ ಬಾಟಲ್‌ಗಳು ಹಾಗೂ ಕಲ್ಲುಗಳನ್ನು ತೂರಲು ಅರಂಭಿಸಿದರು. ಇದು ಗೆದ್ದ ಖುಷಿಯಲ್ಲಿ ಮೈದಾನದಿಂದ ಹೊರನಡೆಯುತ್ತಿದ್ದ ಭಾರತದ ಆಟಗಾರ್ತಿಯರೂ ತಾಕಿತ್ತು. ಆಕ್ರೋಶಗೊಂಡ ಅಭಿಮಾನಿಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಕೂಡ ಮೈದಾನಕ್ಕೆ ಇಳಿದಿದ್ದರು. ಈ ಹಂತದಲ್ಲಿ ಭಾರತ ತಂಡ ಮೈದಾನ ತೊರೆದಿದ್ದರೂ, ಸ್ಟೇಡಿಯಂಅನ್ನು ತೊರೆಯಲು ಅವಕಾಶ ನೀಡಿರಲಿಲ್ಲ.
ಪಾಕ್‌ಗೆ ಸೋಲುಣಿಸಿದ ಆಸೀಸ್, ಮತ್ತೊಮ್ಮೆ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್!
ಇನ್ನೊಂದೆಡೆ ಬಾಂಗ್ಲಾದೇಶ ತಂಡ ಭಾರತ ತಂಡದ ಆಟಗಾರ್ತಿಯರು ಮೈದಾನಕ್ಕೆ ಬರಬೇಕು, ಪೆನಾಲ್ಟಿ ಮೂಲಕವೇ ಫಲಿತಾಂಶ ನಿರ್ಧಾರವಾಗಬೇಕು ಎಂದು ಆಗ್ರಹಿಸಿ ಮೈದಾನ ತೊರೆಯಲು ನಿರಾಕರಿಸಿತ್ತು. ಅಂದಾಜು ಒಂದೂವರೆ ಗಂಟೆಗಳ ಕಾಲ ಮೈದಾನದಲ್ಲಿಯೇ ತಂಡ ಕುಳಿತುಕೊಂಡಿತ್ತು. ಈ ಹಂತದಲ್ಲಿ ರೆಫ್ರಿಗಳು ಹಾಗೂ ಮ್ಯಾಚ್ ಕಮೀಷನರ್‌ಗೆ ಏನು ಮಾಡಬೇಕು ಎನ್ನುವುದೇ ತಿಳಿಯದಂತಾಗಿತ್ತು. ಕೊನೆಗೆ ಅದಾಗಲೇ ಕಾಯಿನ್ ಟಾಸ್ ಮೂಲಕ ಭಾರತ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಿದ್ದ ನಿರ್ಧಾರವನ್ನು ಬದಲಿಸಿ ಎರಡೂ ತಂಡಗಳು ಜಂಟಿ ವಿಜೇತರು ಎಂದು ಘೋಷಣೆ ಮಾಡುವ ಮೂಲಕ ಟ್ರೋಫಿ ಹಂಚಲಾಯಿತು.
ಕಾಯಿನ್ ಟಾಸ್ ಸಮಯದಲ್ಲಿ ಭಾರತ ಪಂದ್ಯವನ್ನು ಗೆದ್ದ ಕ್ಷಣ