ಕೊರೋನಾ ಎಫೆಕ್ಟ್: 82 ಕೋಟಿ ಸಂಬಳವನ್ನು ಕ್ಲಬ್‌ಗೆ ಬಿಟ್ಟುಕೊಟ್ಟ ರೊನಾಲ್ಡೋ
ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಕೊರೋನಾ ವೈರಸ್ ತೀವ್ರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯುವೆಂಟುಸ್ ಕ್ಲಬ್‌ಗೆ ವೇತನದ ಒಂದಷ್ಟು ಭಾಗವನ್ನು ಬಿಡಲು ನಿರ್ಧರಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.
ರೋಮ್(ಮಾ.30): ವಿಶ್ವದ ಶ್ರೀಮಂತ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ತಾವು ಪ್ರತಿನಿಧಿಸುವ ಇಟಲಿಯ ಯುವೆಂಟುಸ್ ಫುಟ್ಬಾಲ್ ಕ್ಲಬ್ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ, ತಮ್ಮ ವೇತನದ ಒಂದಷ್ಟು ಭಾಗವನ್ನು ಬಿಡಲು ನಿರ್ಧರಿಸಿದ್ದಾರೆ.
ರೊನಾಲ್ಡೋ 10 ಮಿಲಿಯನ್ ಯುರೋ (ಅಂದಾಜು 82 ಕೋಟಿ ರು.) ಬಿಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಯುವೆಂಟುಸ್‌ನ ಇನ್ನುಳಿದ ಆಟಗಾರರು ಸಹ ತಮ್ಮ 4 ತಿಂಗಳ ವೇತನವನ್ನು ಬಿಡುವುದಾಗಿ ಘೋಷಿಸಿದ್ದಾರೆ. ಇದರಿಂದ ಯುವೆಂಟುಸ್ ಕ್ಲಬ್‌ಗೆ 100 ಮಿಲಿಯನ್ ಡಾಲರ್ (ಅಂದಾಜು 748 ಕೋಟಿ ರು.) ಉಳಿಯಲಿದೆ.
ಐಪಿಎಲ್ ನಡೆದರೂ ವಿದೇಶಿ ಆಟಗಾರರು ಬರೋದಿಲ್ಲ?
ಇಟಲಿಯಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮಿತಿ ಮೀರಿದ್ದು, ಕೋವಿಡ್ 19 ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಸದ್ಯ ಇಟಲಿಯಲ್ಲಿ ಏಪ್ರಿಲ್ 3ರವರೆಗೆ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇಂತಹ ಕಠಿಣ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆ ಮೆರೆದ ಯುವೆಂಟುಸ್ ಕೋಚ್ ಹಾಗೂ ಆಟಗಾರರಿಗೆ ತಂಡ ಧನ್ಯವಾದಗಳನ್ನು ಅರ್ಪಿಸಿದೆ.
ಜೀವನ ಸಹಜ ಸ್ಥಿತಿಗೆ ಬರಲಿ, ಆಮೇಲೆ ಐಪಿಎಲ್ ಎಂದ ಹಿಟ್‌ಮ್ಯಾನ್
2018ರ ಫಿಫಾ ವಿಶ್ವಕಪ್ ಸೋಲಿನ ಬಳಿಕ ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದು ಇಟಲಿಯ ಯುವೆಂಟುಸ್ ತಂಡ ಕೂಡಿಕೊಂಡಿದ್ದರು. ಯುವೆಂಟುಸದ ತಂಡದ ಪರ ನಾಲ್ಕು ವರ್ಷಗಳ ಒಪ್ಪಂದಕ್ಕೆ ಪೋರ್ಚುಗಲ್ ಆಟಗಾರ ಸಹಿ ಹಾಕಿದ್ದರು.