ಬಾರ್ಸಿ​ಲೋನಾ ಕ್ಲಬ್ ಬಿಡಲು ಲಿಯೋ​ನೆಲ್‌ ಮೆಸ್ಸಿ ಸಿದ್ಧ

ದಶಕಗಳ ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿದ್ದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಇದೀಗ ಸ್ಪೇನ್‌ ಲೀಗ್ ತೊರೆಯಲು ನಿರ್ಧಾರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Football Legend Lionel Messi wants to leave Barcelona football Club

ಬಾರ್ಸಿ​ಲೋನಾ(ಆ.27): 2 ದಶಕಗಳು, ನೂರಾರು ಗೋಲು, ಹತ್ತಾರು ಪ್ರಶಸ್ತಿಗಳು, ಲೆಕ್ಕ​ವಿ​ಲ್ಲ​ದಷ್ಟು ದಾಖಲೆಗಳ ಬಳಿಕ ಕೊನೆಗೂ ದಿಗ್ಗ​ಜ ಫುಟ್ಬಾ​ಲಿಗ ಲಿಯೋ​ನೆಲ್‌ ಮೆಸ್ಸಿ ಸ್ಪೇನ್‌ನ ಅತ್ಯಂತ ಜನ​ಪ್ರಿಯ ಫುಟ್ಬಾಲ್‌ ಕ್ಲಬ್‌ ಬಾರ್ಸಿ​ಲೋನಾ ಎಫ್‌ಸಿಯಿಂದ ಹೊರ​ಬ​ರಲು ನಿರ್ಧ​ರಿ​ಸಿ​ದ್ದಾರೆ. 

ಕ್ಲಬ್‌ ತೊರೆ​ಯಲು ತಾವು ಸಿದ್ಧ​ರಿ​ರು​ವು​ದಾಗಿ ಮಂಗ​ಳವಾರ ತಂಡದ ಮಾಲಿ​ಕ​ರಿಗೆ ಮೆಸ್ಸಿ ತಿಳಿ​ಸಿ​ದ್ದು, ಅವ​ರನ್ನು ಸ್ವಾಗ​ತಿ​ಸಲು ಇಂಗ್ಲಿಷ್‌ ಪ್ರೀಮಿ​ಯರ್‌ ಲೀಗ್‌ನ ಪ್ರತಿಷ್ಠಿತ ತಂಡ​ಗ​ಳಾದ ಮ್ಯಾಂಚೆ​ಸ್ಟರ್‌ ಸಿಟಿ, ಮ್ಯಾಂಚೆ​ಸ್ಟರ್‌ ಯುನೈ​ಟೆಡ್‌, ಇಟ​ಲಿ​ಯನ್‌ ಲೀಗ್‌ನ ಇಂಟರ್‌ ಮಿಲಾನ್‌, ಫ್ರಾನ್ಸ್‌ನ ಪಿಎಸ್‌ಜಿ ತಂಡಗಳು ಸಿದ್ಧ​ವಾ​ಗಿವೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ.

2020ರಲ್ಲಿ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಇಲ್ಲ..!

ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಹಾಗೂ ಅರ್ಜೆಂಟೀನಾ ಪರ 700 ಗೋಲ್ ಬಾರಿಸಿ ದಾಖಲೆ ಬರೆದಿದ್ದಾರೆ. ಇದರೊಂದಿಗೆ 700 ಗೋಲು ಬಾರಿಸಿದ ಎರಡನೇ ಸಕ್ರಿಯ ಹಾಗೂ ಒಟ್ಟಾರೆ 7ನೇ ಆಟಗಾರ ಎನ್ನುವ ಗೌರವಕ್ಕೆ ಮೆಸ್ಸಿ ಭಾಜನರಾಗಿದ್ದರು. ಕ್ರಿಸ್ಟಿಯಾನೋ ರೊನಾಲ್ಡೋ ಕೂಡಾ 700+ ಗೋಲು ಬಾರಿಸಿದ ಮತ್ತೊಬ್ಬ ಸಕ್ರಿಯ ಫುಟ್ಬಾಲಿಗ ಎನಿಸಿದ್ದಾರೆ. ಗ್ರೆಡ್ ಮುಲ್ಲರ್, ಫೆರ್ನೆಕ್ ಪುಸ್ಕಾಸ್, ಪೀಲೆ, ರೊಮ್ಯಾರಿಯೋ ಹಾಗೂ ಜೋಸೆಫ್ ಬಿಕಾನ್ 700ಕ್ಕೂ ಅಧಿಕ ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ.

Football Legend Lionel Messi wants to leave Barcelona football Club

ಈ ಹಿಂದೆ ಇಟ​ಲಿಯ ಇಂಟರ್‌ ಮಿಲಾನ್‌ ಫುಟ್ಬಾಲ್‌ ಕ್ಲಬ್‌, ಮೆಸ್ಸಿಗೆ 4 ವರ್ಷದ ಅವ​ಧಿಗೆ ಬರೋ​ಬ್ಬರಿ 2300 ಕೋಟಿ ರು. (235 ಮಿಲಿ​ಯನ್‌ ಪೌಂಡ್‌) ಒಪ್ಪಂದದ ಪ್ರಸ್ತಾ​ಪ​ವಿ​ರಿ​ಸಿದೆ ಎಂದು ಬ್ರಿಟನ್‌ನ ಪ್ರತಿ​ಷ್ಠಿತ ಪತ್ರಿಕೆ ‘ದಿ ಸನ್‌’ ವರದಿ ಮಾಡಿತ್ತು.
 

Latest Videos
Follow Us:
Download App:
  • android
  • ios