ಪ್ಯಾರಿಸ್(ಜು.21)‌: ಕೊರೋನಾ ಸೋಂಕು ವಿಶ್ವ​ದೆಲ್ಲೆಡೆ ವ್ಯಾಪಕವಾಗಿ ಹರ​ಡು​ತ್ತಿ​ರುವ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿ​ಷ್ಠಿತ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ನೀಡ​ದಿ​ರಲು ಆಯೋ​ಜ​ಕರು ನಿರ್ಧ​ರಿ​ಸಿ​ದ್ದಾರೆ. 

ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆ ಕೊಡುವ ಈ ಪ್ರಶಸ್ತಿಯನ್ನು ಅರ್ಜೆಂಟೀನಾ ಹಾಗೂ ಬಾರ್ಸಿ​ಲೋನಾ ಫುಟ್ಬಾ​ಲಿಗ ಲಿಯೋ​ನೆಲ್‌ ಮೆಸ್ಸಿ ದಾಖಲೆಯ 6 ಬಾರಿ ಗೆದ್ದಿ​ದ್ದಾರೆ. ‘1956ರ ನಂತರ ಇದೇ ಮೊದಲ ಬಾರಿಗೆ ಪ್ರಶಸ್ತಿ ಸಮಾ​ರಂಭ ನಡೆ​ಯು​ತ್ತಿಲ್ಲ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಫುಟ್ಬಾಲ್‌ ಪಂದ್ಯ​ಗಳು ನಡೆ​ದಿಲ್ಲ. ಪ್ರಶಸ್ತಿ ವಿಜೇತರನ್ನು ನಿರ್ಧ​ರಿ​ಸಲು ಅಸಾಧ್ಯ’ ಎಂದು ನಿಯತಕಾಲಿ​ಕದ ಸಂಪಾ​ದಕ ಪಾಸ್ಕಲ್‌ ಫೆರ್ರ್ ತಿಳಿ​ಸಿ​ದ್ದಾರೆ.

ಫುಟ್ಬಾಲ್‌ ಸಂಸ್ಥೆಗಳಿಗೆ ಫಿಫಾ ಭರ್ಜರಿ ನೆರ​ವು!

2019ರಲ್ಲಿ ಲಯೋನೆಲ್ ಮೆಸ್ಸಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೀಗ ಪ್ರಶಸ್ತಿ ಇನ್ನೊಂದು ವರ್ಷ ಮುಂದೂಡಿರುವುದರಿಂದ ಇನ್ನು 12 ತಿಂಗಳುಗಳ ಕಾಲ ಮೆಸ್ಸಿಯೇ ಬ್ಯಾಲನ್ ಡಿ ಓರ್ ಪ್ರಶಸ್ತಿಯ ಒಡೆಯರಾಗಿ ಮುಂದುವರೆಯಲಿದ್ದಾರೆ. ಇನ್ನು ಮೆಸ್ಸಿ ಬದ್ಧ ಎದುರಾಳಿ, ಯುವೆಂಟಸ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಐದು ಬಾರಿ  ಬ್ಯಾಲನ್ ಡಿ ಓರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಮೆಸ್ಸಿ ದಾಖಲೆ ಸರಿಗಟ್ಟಲು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.