ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಮ್ಯೂಸಿಯಂ ಭಾರತದಲ್ಲಿ ತಲೆ ಎತ್ತಲಿದೆ. ಕೇರಳ ಉದ್ಯಮಿ ಬಾಬಿ ಚೆಮ್ಮನೂರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೊಚ್ಚಿ(ಡಿ.08) ಇತ್ತೀಚೆಗೆ ನಿಧನರಾದ ಅರ್ಜೇಂಟೀನಾದ ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ನೆನಪಿನಲ್ಲಿ ವಸ್ತು ಸಂಗ್ರಹಾಲಯ(ಮ್ಯೂಸಿಯಂ) ಒಂದನ್ನು ನಿರ್ಮಾಣ ಮಾಡುವುದಾಗಿ ಕೇರಳ ಉದ್ಯಮಿ ಬಾಬಿ ಚೆಮ್ಮನೂರ್ ಘೋಷಿಸಿದ್ದಾರೆ.
ಮ್ಯೂಸಿಯಂನಲ್ಲಿ ಮರಡೀನಾ ಅವರ ಚಿನ್ನದ ಪ್ರತಿಮೆ ಸ್ಥಾಪಿಸಲಾಗುವುದು, ಪ್ರತಿಮೆ 1986ರ ವಿಶ್ವಕಪ್‌ನ ಅತ್ಯಂತ ಜನಪ್ರಿಯ 'ಹ್ಯಾಂಡ್ ಆಫ್ ಗಾಡ್' ಮಾದರಿಯಲ್ಲಿ ಇರಲಿದೆ. ಅವರ ವೈಯುಕ್ತಿಕ ಹಾಗೂ ವೃತ್ತಿಜೀವನಕ್ಕೆ ಸಂಬಂಧಿಸಿದ ಫೋಟೋಗಳು, ಅವರು ಬಳಸಿದ ಹಲವು ವಸ್ತುಗಳು, ಗೆದ್ದ ಟ್ರೋಫಿಗಳು, ಪ್ರಶಸ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಡಿಯಾಗೋ ಮರಡೋನಾ ಅವರ ಮ್ಯೂಸಿಯಂನ್ನು ಕೇರಳ ಇಲ್ಲವೇ ಕೋಲ್ಕತಾದಲ್ಲಿ ನಿರ್ಮಿಸಲಾಗುವುದು ಎಂದು ಬಾಬಿ ಚೆಮ್ಮನೂರ್ ಘೋಷಿಸಿದ್ದಾರೆ.
ಸ್ಕಾಟಿಶ್ ಲೀಗಲ್ಲಿ ಗೋಲು: ಬಾಲಾ ದೇವಿ ದಾಖಲೆ
ಗ್ಲಾಸ್ಗೋ: ಭಾರತದ ತಾರಾ ಫುಟ್ಬಾಲ್ ಆಟಗಾರ್ತಿ ಬಾಲಾ ದೇವಿ ಸ್ಕಾಟ್ಲೆಂಡ್‌ನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಗೋಲು ಬಾರಿಸಿದ್ದಾರೆ. ರೇಂಜರ್ಸ್ ಎಫ್‌ಸಿ ಪರ ಆಡುತ್ತಿರುವ ಬಾಲಾ ದೇವಿ, ಭಾನುವಾರ ನಡೆದ ಮದರ್‌ವೆಲ್ ಎಫ್‌ಸಿ ತಂಡದ ವಿರುದ್ದ ನಡೆದ ಪಂದ್ಯದ 85ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇದರೊಂದಿಗೆ ಯೂರೋಪ್‌ನ ಅಗ್ರ ವೃತ್ತಿಪರ ಲೀಗ್‌ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 8, 2020, 2:37 PM IST