FIFA World Cup ಅರ್ಜೆಂಟೀನಾಕ್ಕೆ ಸೌದಿ ಮರ್ಮಾಘಾತ..! ಮೆಸ್ಸಿ ಪಡೆಗೆ ನಾಕೌಟ್ ಹಾದಿ ಕಠಿಣ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಘಾತಕಾರಿ ಸೋಲುಂಡ ಅರ್ಜೆಂಟೀನಾ
ಎರಡು ಬಾರಿಯ ಚಾಂಪಿಯನ್‌ ಅರ್ಜೆಂಟೀನಾಗೆ ಸೋಲಿನ ಶಾಕ್ ನೀಡಿದ ಸೌದಿ ಅರೇಬಿಯಾ
ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಓಟಕ್ಕೂ ಈ ಪಂದ್ಯದಲ್ಲಿ ಬಿತ್ತು ಬ್ರೇಕ್‌

FIFA World Cup Lionel Messi and co stunned by Saudi Arabia kvn

ಲುಸೈಲ್‌(ನ.23): ಈ ಬಾರಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಆರಂಭದಲ್ಲೇ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಟೂರ್ನಿಯ ಹಾಟ್‌ ಫೇವರಿಟ್‌ ಎನಿಸಿಕೊಂಡಿದ್ದ 2 ಬಾರಿ ಚಾಂಪಿಯನ್‌ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ ಮಂಗಳವಾರ 1-2 ಗೋಲುಗಳಿಂದ ಅಚ್ಚರಿಯ ಸೋಲುಭವಿಸಿತು. ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಓಟಕ್ಕೂ ಈ ಪಂದ್ಯದಲ್ಲಿ ಬ್ರೇಕ್‌ ಬಿತ್ತು. ಇದರೊಂದಿಗೆ ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾದ ನಾಕೌಟ್‌ ಹಾದಿಗೆ ಹಿನ್ನಡೆಯುಂಟಾಗಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಪಂದ್ಯದ ಆರಂಭದಲ್ಲಿ ಸೌದಿಯ ಆಕ್ರಮಣಕಾರಿ ಆಟದ ನಡುವೆಯೂ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ಹಿಂದೆ ಬೀಳಲಿಲ್ಲ. ಬಳಿಕ ಮತ್ತಷ್ಟುಗೋಲಿನ ಅವಕಾಶಗಳು ಅರ್ಜೆಂಟೀನಾಕ್ಕೆ ಒದಗಿ ಬಂದರೂ ಅದಕ್ಕೆ ಸೌದಿ ಗೋಲ್‌ಕೀಪರ್‌ ಮೊಹಮದ್‌ ಅಲೊವೈಸ್‌ ಅದಕ್ಕೆ ಅವಕಾಶ ನೀಡಲಿಲ್ಲ. ಒಟ್ಟು 14 ಬಾರಿ ಗೋಲಿಗೆ ಪ್ರಯತ್ನಿಸಿದರೂ ತಂಡಕ್ಕೆ ಅದೃಷ್ಟಕೈಹಿಡಿಯಲಿಲ್ಲ. ಬಲಿಷ್ಠ ರಕ್ಷಣಾ ಪಡೆಯ ಮೂಲಕ ಮೆಸ್ಸಿ ಬಳಗವನ್ನು ಕಟ್ಟಿಹಾಕುವಲ್ಲಿ ಸೌದಿ ಯಶಸ್ವಿಯಾಯಿತು.

ತಿರುಗಿಬಿದ್ದ ಸೌದಿ:

ದ್ವಿತೀಯಾರ್ಧದಲ್ಲಿ ಮತ್ತಷ್ಟುಗೋಲುಗಳ ಮೂಲಕ ಪಂದ್ಯ ತನ್ನದಾಗಿಸಿಕೊಳ್ಳುವ ಅರ್ಜೆಂಟೀನಾ ಕನಸಿಗೆ ಆರಂಭದಲ್ಲೇ ಸೌದಿ ಆಟಗಾರರು ಆಘಾತ ನೀಡಿದರು. 48ನೇ ನಿಮಿಷದಲ್ಲಿ ಸಲೇಹ್‌ ಅಲ್‌ಶೆಹರಿ ಸೌದಿ ಪರ ಮೊದಲ ಗೋಲು ಬಾರಿಸಿದರೆ, ಬಳಿಕ 5 ನಿಮಿಷಗಳ ಅಂತರದಲ್ಲಿ ಸಲೇಂ ಅಲ್ದಾವ್ಸಾರಿ ಮತ್ತೊಂದು ಗೋಲು ದಾಖಲಿಸಿ ಸೌದಿಯ ಗೆಲುವಿಗೆ ಕಾರಣರಾದರು. ಬಳಿಕ ಒತ್ತಡದಿಂದಲೇ ಆಟವಾಡಿದ ಅರ್ಜೆಂಟೀನಾ ಹಲವು ಅವಕಾಶಗಳನ್ನು ತಪ್ಪಿಸಿಕೊಂಡಿತು. ಮೆಸ್ಸಿಯ ಫ್ರೀ ಕಿಕ್‌ ಕೂಡಾ ಗೋಲು ಪೆಟ್ಟಿಗೆಗೆ ಸೇರಲಿಲ್ಲ. ಗೆಲುವಿನ ಬಳಿಕ ಸೌದಿ ಆಟಗಾರರು ಮೈದಾನದುದ್ದಕ್ಕೂ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.

ಲಿಯೋನೆಲ್‌ ಮೆಸ್ಸಿ ದಾಖಲೆ

ಮೆಸ್ಸಿ 4 ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಅರ್ಜೆಂಟೀನಾದ ಮೊದಲ ಆಟಗಾರ ಎನಿಸಿಕೊಂಡರು. ಅವರು 2006, 2014, 2018ರಲ್ಲೂ ಗೋಲು ದಾಖಲಿಸಿದ್ದರು. ಈ ಮೊದಲು ಡಿಯಾಗೊ ಮರಡೋನಾ, ಗೇಬ್ರಿಯಲ್‌ ಬಟಿಸ್ತುತಾ 3 ವಿಶ್ವಕಪ್‌ಗಳಲ್ಲಿ ಗೋಲು ಹೊಡೆದಿದ್ದರು.

ನೆದರ್‌ಲೆಂಡ್‌್ಸ ಗೆಲುವಿನ ಆರಂಭ

ದೋಹಾ: ಈ ಬಾರಿ ಫಿಫಾ ವಿಶ್ವಕಪ್‌ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನೆದರ್‌ಲೆಂಡ್‌್ಸ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸೋಮವಾರ ರಾತ್ರಿ ನಡೆದ ‘ಎ’ ಗುಂಪಿನ ಸೆನೆಗಲ್‌ ವಿರುದ್ಧದ ಪಂದ್ಯದಲ್ಲಿ ವಿಶ್ವ ನಂ.8 ನೆದರ್‌ಲೆಂಡ್‌್ಸ 2-0 ಗೋಲುಗಳಿಂದ ಗೆಲುವು ಸಾಧಿಸಿತು. 

FIFA World Cup ಸೌದಿ ವಿರುದ್ಧ ಅರ್ಜೆಂಟೀನಾಗೆ ಸೋಲು, ಕೇರಳದಲ್ಲಿ ಅಭಿಮಾನಿಗಳ ಮಾರಾಮಾರಿ!

ಉಭಯ ತಂಡಗಳಿಂದಲೂ ಪಂದ್ಯದುದ್ದಕ್ಕೂ ತೀವ್ರ ಪೈಪೋಟಿ ಕಂಡುಬಂತು. ಇನ್ನೇನು ಪಂದ್ಯ ಗೋಲುರಹಿತ ಡ್ರಾಗೊಳ್ಳಲಿದೆ ಎನ್ನುವಷ್ಟರಲ್ಲಿ ಕೊನೆಯಲ್ಲಿ 2 ಗೋಲು ಬಾರಿಸಿ ನೆದರ್‌ಲೆಂಡ್‌್ಸ ಜಯ ತನ್ನದಾಗಿಸಿಕೊಂಡಿತು. 84ನೇ ನಿಮಿಷದಲ್ಲಿ ಫ್ರಾಂಕಿ ಡಿ ಜಾಂಗ್‌ ನೀಡಿದ ಪಾಸನ್ನು ಗೋಲಾಗಿ ಪರಿವರ್ತಿಸಿದ ಕಾಡಿ ಗ್ಯಾಪ್ಕೊ ನೆದರ್‌ಲೆಂಡ್‌್ಸಗೆ ಮುನ್ನಡೆ ಒದಗಿಸಿದರು. ಬಳಿಕ ಹೆಚ್ಚುವರಿ ನಿಮಿಷದಲ್ಲಿ ಡೇವಿ ಕ್ಲಾಸೆನ್‌ ಆಕರ್ಷಕ ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಅಮೆರಿಕ-ವೇಲ್ಸ್‌ ಪಂದ್ಯ ಟೈ

ಅಲ್‌ ರಯ್ಯಾನ್‌: ಫಿಫಾ ವಿಶ್ವಕಪ್‌ನ ಸೋಮವಾರ ತಡರಾತ್ರಿ ನಡೆದ ಅಮೆರಿಕ ಹಾಗೂ ವೇಲ್ಸ್‌ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದು ಈ ವಿಶ್ವಕಪ್‌ನಲ್ಲಿ ಮೊದಲ ಡ್ರಾ. ಯುವ, ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ಅಮೆರಿಕ ಪಂದ್ಯದ ಆರಂಭದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 36ನೇ ನಿಮಿಷದಲ್ಲಿ ಟಿಮ್‌ ವೇಹ್‌ ಬಾಲನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಅಮೆರಿಕ ಮುನ್ನಡೆ ಸಾಧಿಸಲು ನೆರವಾದರು. 

2ನೇ ಅವಧಿಯಲ್ಲಿ ವೇಲ್ಸ್‌ ಆಟಗಾರರು ಮರುಹೋರಾಟ ನಡೆಸಿದರು. ಆದರೆ ವೇಲ್ಸ್‌ ಗೋಲಿಗಾಗಿ ಹಲವು ಪ್ರಯತ್ನಗಳನ್ನು ನಡೆಸಿದರೂ, ಅಮೆರಿಕದ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್‌ ತಡೆಯಾಗಿ ನಿಂತರು. ಅಮೆರಿಕ ಕೂಡಾ ತೀವ್ರ ಪ್ರತಿರೋಧ ನೀಡಿದರೂ ಡಿಫೆಂಡರ್‌ ವಾಕರ್‌ ಜಿಮೆರ್‌ಮನ್‌ ಮಾಡಿದ ತಪ್ಪು ವೇಲ್ಸ್‌ಗೆ ಪೆನಾಲ್ಟಿಅವಕಾಶ ನೀಡಿತು. ಗೆರಾತ್‌ ಬೇಲ್‌ 82ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಂಡ ಸಮಬಲ ಸಾಧಿಸಲು ನೆರವಾದರು.

Latest Videos
Follow Us:
Download App:
  • android
  • ios