ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ಹಾಗೂ ಸೌದಿ ಅರೆಬಿಯಾ ನಡುವಿನ ಪಂದ್ಯ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಶುಭಾರಂಭದ ನಿರೀಕ್ಷೆಯಲ್ಲಿದ್ದ ಮೆಸ್ಸಿ ಸೇರಿದಂತೆ ಘಟಾನುಘಟಿ ಆಟಗಾರರನ್ನೊಳಗೊಂಡ ಅರ್ಜೆಂಟೀನಾ ತಂಡ ಮುಗ್ಗರಿಸಿದೆ. ಇದರ ಬೆನ್ನಲ್ಲೇ ಕೇರಳದಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.
ನವದಹೆಲಿ(ನ.22): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಹಾಗೂ ಸೌದಿ ಅರೆಬಿಯಾ ನಡುವಿನ ಪಂದ್ಯ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಎಲ್ಲರೂ ಅರ್ಜೆಂಟೀನಾ ಗೆಲುವು ನಿರೀಕ್ಷಿಸಿದ್ದರು. ಸ್ವತ ಲಿಯೋನಲ್ ಮೆಸ್ಸಿ ತಂಡ ಕೂಡ ಇದೇ ನಿರೀಕ್ಷೆಯಲ್ಲಿತ್ತು. ಆದರೆ ಸೌದಿ ಅರೆಬಿಯಾ ಶಾಕ್‌ಗೆ ಅರ್ಜೆಂಟೀನಾ ತತ್ತರಿಸಿದೆ. 2-1 ಅಂತರದಲ್ಲಿ ಅರ್ಜೆಂಟೀನಾ ತಂಡ ಸೋಲಿಸಿ ಕೇಕೆ ಹಾಕಿದೆ. ಈ ಪಂದ್ಯ ವಿಶ್ವಾದ್ಯಂತ ಇರುವ ಅರ್ಜೆಂಟೀನಾ ತಂಡದ ಅಭಿಮಾನಿಗಳಿಗೆ ಆಘಾತ ತಂದಿದೆ. ಇತ್ತ ವಿಶ್ವದ ಒಂದೊಂದು ಫುಟ್ಬಾಲ್ ತಂಡಕ್ಕೆ ಕೇರಳದಲ್ಲಿ ಅಭಿಮಾನಿಗಳಿದ್ದಾರೆ. ಅಭಿಮಾನಿ ಸಂಘಗಳಿವೆ. ಹೀಗೆ ಅರ್ಜೆಂಟೀನಾ ಸೋಲಿನ ಬೆನ್ನಲ್ಲೇ ಕೇರಳದಲ್ಲಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ.
ಕೇರಳದ ಅರ್ಜೆಂಟೀನಾ ಸೋಲಿನ ಬೆನ್ನಲ್ಲೇ ಅಭಿಮಾನಿಗಳನ್ನು ಸೌದಿ ಅರೆಬಿಯಾ ತಂಡದ ಅಭಿಮಾನಿಗಳು ಹೀಯಾಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅರ್ಜೆಂಟೀನಾ ಅಭಿಮಾನಿಗಳು ವಾಗ್ವಾದ ನಡೆಸಿದ್ದಾರೆ. ಬಳಿಕ ಕೈಕೈ ಮಿಲಾಯಿಸಿದ್ದಾರೆ. ಗುದ್ದಾಟ, ಹೊಡೆದಾಟ ನಡೆದಿದೆ. ಭಾನುವಾರ ಕೂಡ ಕೇರಳದಲ್ಲಿ ಇದೇ ರೀತಿ ಅಭಿಮಾನಿಗಳ ನಡುವೆ ಹೊಡೆದಾಟ ನಡೆದಿದೆ. ಇದು ಕೊಲ್ಲಂ ಜಿಲ್ಲೆಯಲ್ಲಿ ನಡಿದೆದಿದೆ. ಭಾನುವಾರ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳ ಅಭಿಮಾನಿಗಳು ರೋಡ್ ಶೋ ನಡೆಸಿದ್ದಾರೆ. ಬೃಹತ್ ಗಾತ್ರದ ಕಟೌಟ್, ವಾದ್ಯ ಘೋಷಗಳ ಮೂಲಕ ಮೆರವಣಿ ನಡೆದಿದೆ.
Alcohol Ban: ಆಲ್ಕೋಹಾಲ್ ಬ್ಯಾನ್ ವಿಚಾರದಲ್ಲಿ ಇಬ್ಬಗೆ ನೀತಿಗೆ ಫ್ಯಾನ್ಸ್ ಆಕ್ರೋಶ..!
ಈ ವೇಳೆ ಎರಡು ಅಭಿಮಾನಿಗಳ ಗುಂಪು ಮುಖಾಮುಖಿಯಾಗಿದೆ. ಈ ವೇಳೆ ಮರಾಮಾರಿ ನಡೆದಿದೆ. ಈ ಹೊಡೆದಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಕೋಲುಗಳಿಂದ ಎರಡು ಗುಂಪುಗಳು ಹೊಡೆದಾಟ ನಡೆಸಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮೊದಲ ಪಂದ್ಯದಲ್ಲೇ ಎಡವಿದ ಕತಾರ್!
ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ ಕತಾರ್ ಸೋಲಿನ ಆರಂಭ ಪಡೆಯಿತು. ಭಾನುವಾರದ ಉದ್ಘಾಟನಾ ಪಂದ್ಯದಲ್ಲಿ 0-2 ಗೋಲುಗಳಿಂದ ಈಕ್ವೆಡಾರ್ ವಿರುದ್ಧ ಪರಾಭವಗೊಂಡಿತು. 92 ವರ್ಷಗಳ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಆತಿಥೇಯ ತಂಡ ತನ್ನ ಮೊದಲ ಪಂದ್ಯ ಸೋತಿದ್ದು ಇದೇ ಮೊದಲು. ಈಕ್ವೆಡಾರ್ 3ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಅದು ಆಫ್‌ಸೈಡ್ ಎಂದು ರೆಫ್ರಿಗಳು ಗೋಲನ್ನು ರದ್ದುಗೊಳಿಸಿದರು. ಬಳಿಕ ಮೊದಲಾರ್ಧದಲ್ಲೇ ನಾಯಕ ಎನ್ನಾರ್ ವ್ಯಾಲೆನ್ಸಿಯಾ 2 ಗೋಲು ಬಾರಿಸಿ ಆತಿಥೇಯ ತಂಡಕ್ಕೆ ಆಘಾತ ನೀಡಿದರು. 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶವನ್ನು ಗೋಲಾಗಿಸಿದ ವ್ಯಾಲೆನ್ಸಿಯಾ, 33ನೇ ನಿಮಿಷದಲ್ಲಿ ಪ್ರಿಕಾಡಿಯೊ ನೀಡಿದ ಪಾಸ್‌ನ ನೆರವಿನಿಂದ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.
FIFA World Cup 2022: ಇಂಗ್ಲೆಂಡ್ ಆಟಗಾರರ ಪತ್ನಿಯರಿಗೆ 'ವಾರ್ಡ್‌ರೋಬ್' ಸಲಹೆ ನೀಡಿದ ಫುಟ್‌ಬಾಲ್ ಸಂಸ್ಥೆ!
ದ್ವಿತೀಯಾರ್ಧಕ್ಕೆ ಜನವೇ ಇಲ್ಲ!
ಪಂದ್ಯ ವೀಕ್ಷಣೆಗೆ ಅಲ್-ಬೇತ್ ಕ್ರೀಡಾಂಗಣದಲ್ಲಿ 67,372 ಪ್ರೇಕ್ಷಕರು ಸೇರಿದ್ದರು. ಬಹುತೇಕರು ಕತಾರ್ ಅಭಿಮಾನಿಗಳು. ಮೊದಲಾರ್ಧದಲ್ಲೇ ತಮ್ಮ ತಂಡ 2 ಗೋಲು ಬಿಟ್ಟುಕೊಟ್ಟಬಳಿಕ ದ್ವಿತೀಯಾರ್ಧಕ್ಕೂ ಮೊದಲೇ ಸಾವಿರಾರು ಮಂದಿ ಮೈದಾನ ತೊರೆದರು.
