FIFA World Cup ಇಂದು ಜರ್ಮನಿ vs ಜಪಾನ್ ಸೇರಿದಂತೆ ದಿಗ್ಗಜ ತಂಡಗಳು ಸೆಣಸಾಟ

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಕದನ
ಶುಭಾರಂಭದ ನಿರೀಕ್ಷೆಯಲ್ಲಿ ಮಾಜಿ ಚಾಂಪಿಯನ್‌ಗಳಾದ ಜರ್ಮನಿ, ಸ್ಪೇನ್, ಬೆಲ್ಜಿಯಂ
ಬಲಿಷ್ಠ ಜರ್ಮನಿ ತಂಡಕ್ಕಿಂದು ಜಪಾನ್ ತಂಡ ಎದುರಾಳಿ

FIFA World Cup Germany vs Japan among the 3 High voltage football clash today kvn

ದೋಹಾ(ನ.23): ಫಿಫಾ ವಿಶ್ವಕಪ್‌ನಲ್ಲಿ ಬುಧವಾರ ಹಲವು ಬಲಿಷ್ಠ ತಂಡಗಳು ಕಣಕ್ಕಿಳಿಯಲಿದೆ. ಮಾಜಿ ಚಾಂಪಿಯನ್‌ಗಳಾದ ಜರ್ಮನಿ, ಸ್ಪೇನ್‌, ವಿಶ್ವ ನಂ.2 ಬೆಲ್ಜಿಯಂ, ಕಳೆದ ಬಾರಿ ರನ್ನರ್‌-ಅಪ್‌ ಕ್ರೊವೇಷಿಯಾ ತಂಡಗಳು ಸ್ಪರ್ಧಿಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿವೆ.

ಫಿಫಾ ಇತಿಹಾಸದಲ್ಲೇ ಯಶಸ್ವಿ ತಂಡಗಳಲ್ಲಿ ಒಂದಾಗಿರುವ 4 ಬಾರಿ ಚಾಂಪಿಯನ್‌ ಜರ್ಮನಿ ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಸೆಣಸಲಿದೆ. ವಿಶ್ವ ರ‍್ಯಾಂಕಿಂಗ್‌‌ನಲ್ಲಿ 11ನೇ ಸ್ಥಾನದಲ್ಲಿರುವ ಜರ್ಮನಿ ಈ ವರ್ಷ ಸಾಧಾರಣ ಪ್ರದರ್ಶನ ನೀಡಿದ್ದು, ನಿರೀಕ್ಷೆ ಉಳಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ ಏಷ್ಯಾದ ಬಲಿಷ್ಠ ತಂಡ ಜಪಾನ್‌ ಅಚ್ಚರಿಯ ಫಲಿತಾಂಶಗಳಿಗೆ ಹೆಸರುವಾಸಿಯಾಗಿದ್ದು, ಜರ್ಮನಿಗೆ ಆಘಾತ ನೀಡುವ ನಿರೀಕ್ಷೆಯಲ್ಲಿದೆ.

ಸ್ಪೇನ್‌ಗೆ ಕೋಸ್ಟರಿಕಾ ಸವಾಲು: 2010ರ ಚಾಂಪಿಯನ್‌ ಸ್ಪೇನ್‌ಗೆ ವಿಶ್ವ ನಂ.31 ಕೋಸ್ಟರಿಕಾ ಸವಾಲು ಎದುರಾಗಲಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಎದುರು ನೋಡುತ್ತಿದೆ. ಫಿಫಾ ರ‍್ಯಾಂಕಿಂಗ್‌‌ನಲ್ಲಿ 7ನೇ ಸ್ಥಾನದಲ್ಲಿರುವ ಸ್ಪೇನ್‌ ಕಳೆದ 9 ಪಂದ್ಯಗಳಲ್ಲಿ ಕೇವಲ 1ರಲ್ಲಿ ಸೋತಿದ್ದು, ವಿಶ್ವಶ್ರೇಷ್ಠ ಆಟಗಾರರ ಬಲ ತಂಡಕ್ಕಿದೆ. ಮತ್ತೊಂದೆಡೆ ಕೋಸ್ಟರಿಕಾ ಕಳೆದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ನೀಡುವ ತವಕದಲ್ಲಿದೆ.

FIFA World Cup ಅರ್ಜೆಂಟೀನಾಕ್ಕೆ ಸೌದಿ ಮರ್ಮಾಘಾತ..! ಮೆಸ್ಸಿ ಪಡೆಗೆ ನಾಕೌಟ್ ಹಾದಿ ಕಠಿಣ

ಕೆನಡಾ ಸವಾಲಿಗೆ ಬೆಲ್ಜಿಯಂ ರೆಡಿ: ಡೆ ಬ್ರುನೆ, ಲುಕಾಕು, ಹಜಾರ್ಡ್‌ ಸೇರಿದಂತೆ ಹಲವು ಶ್ರೇಷ್ಠ ಆಟಗಾರರ ದಂಡೇ ಇರುವ ಬೆಲ್ಜಿಯಂ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧ ಕಾದಾಡಲಿದೆ. ವಿಶ್ವಶ್ರೇಷ್ಠ ಗೋಲ್‌ಕೀಪರ್‌ ಕೌರ್ಟಿಸ್‌ ತಂಡದ ಆಧಾರಸ್ತಂಭವಾಗಿದ್ದು, ಕೆನಡಾಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸಬಹುದು. ಇನ್ನು, ಕೆನಡಾ 36 ವರ್ಷಗಳಲ್ಲಿ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡಲಿದ್ದು, ಗೆಲುವಿನ ಆರಂಭ ಪಡೆಯಲು ಎದುರು ನೋಡುತ್ತಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಕ್ರೊವೇಷಿಯಾ ಹಾಗೂ ಮೊರಕ್ಕೊ ಸೆಣಸಲಿವೆ.

ಟಿಕೆಟ್‌ಗಾಗಿ ಪರದಾಟ

ಫಿಫಾ ವಿಶ್ವಕಪ್ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಹಲವು ಅಭಿಮಾನಿಗಳು ಡಿಜಿಟಲ್ ಟಿಕೆಟ್‌ಗಾಗಿ ಪರದಾಡಿದರು. ಮೊಬೈಲ್ ಆ್ಯಪ್ ಮೂಲಕ ಟಿಕೆಟ್‌ ಪಡೆದಿದ್ದರೂ ಕ್ರೀಡಾಂಗಣಕ್ಕೆ ಆಗಮಿಸಿದ್ದ ವೇಳೆ ಮೊಬೈಲ್‌ನಲ್ಲಿ ಟಿಕೆಟ್ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ನೂರಾರು ಪ್ರೇಕ್ಷಕರು ಇಂಗ್ಲೆಂಡ್-ಇರಾನ್ ನಡುವಿನ ಪಂದ್ಯ ನೋಡುವ ಅವಕಾಶ ತಪ್ಪಿಸಿಕೊಂಡಿದ್ದು, ಆಯೋಜಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಿಫಾ ವಿಶ್ವಕಪ್‌ ಬಹಿಷ್ಕಾರಕ್ಕೆ ಗೋವಾ ಬಿಜೆಪಿ ವಕ್ತಾರ ಕರೆ

ಪಣಜಿ: ದ್ವೇಷ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುತ್ತಿದ್ದ ಆರೋಪಗಳನ್ನು ಹೊತ್ತುಕೊಂಡು ಭಾರತದಲ್ಲಿ ಮೋಸ್ಟ್‌ ವಾಂಟೆಡ್‌ ಎನಿಸಿಕೊಂಡಿರುವ ಝಾಕಿರ್‌ ನಾಯ್‌್ಕಗೆ ಫಿಫಾ ವಿಶ್ವಕಪ್‌ ವೇಳೆ ಪ್ರವಚನ ನೀಡಲು ಕತಾರ್‌ ಅವಕಾಶ ನೀಡಿದ್ದಕ್ಕೆ ಗೋವಾ ಬಿಜೆಪಿ ವಕ್ತಾರ ಸಾವಿಯೊ ರೋಡ್ರಿಗಸ್‌ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದು, ಫಿಫಾ ವಿಶ್ವಕಪ್‌ ಬಹಿಷ್ಕರಿಸಲು ಕೇಂದ್ರ ಸರ್ಕಾರ, ಭಾರತೀಯ ಫುಟ್ಬಾಲ್‌ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ‘ಫಿಫಾ ವಿಶ್ವಕಪ್‌ ಜಾಗತಿಕ ಟೂರ್ನಿ. ಇದರಲ್ಲಿ ಝಾಕಿರ್‌ ನಾಯ್‌್ಕಗೆ ಅವಕಾಶ ನೀಡಿದ್ದು ಉಗ್ರವಾದ ಪ್ರಚಾರಕ್ಕೆ ನೀಡಿದಂತಾಗುತ್ತದೆ. ಉಗ್ರವಾದವನ್ನು ಬೆಂಬಲಿಸುವ ಝಾಕಿರ್‌ಗೆ ಅವಕಾಶ ನೀಡಿದ್ದು ದೊಡ್ಡ ತಪ್ಪು’ ಎಂದಿದ್ದಾರೆ.

FIFA World Cup Germany vs Japan among the 3 High voltage football clash today kvn

Latest Videos
Follow Us:
Download App:
  • android
  • ios