Asianet Suvarna News Asianet Suvarna News

ಭಾರತದಲ್ಲಿ ಹೇಗಿತ್ತು ಫಿಫಾ ವಿಶ್ವಕಪ್ ಜ್ವರ? ವೀಕ್ಷಕರ ಸಂಖ್ಯೆಯಲ್ಲಿ ಹಿಂದೆಂದೂ ಕಾಣದ ದಾಖಲೆ!

2022ರ ಫಿಫಾ ವಿಶ್ವಕಪ್ ಫುಟ್ಬಾಲ್ ವಿಶ್ವದಲ್ಲೇ ಅತೀ ಹೆಚ್ಚು ಮಂದಿ ವೀಕ್ಷಿಸಿದ, ಅತೀ ಹೆಚ್ಚು ಮಂದಿ ಸರ್ಚ್ ಮಾಡಿದ ಸೇರಿದಂತೆ ಹಲವು ದಾಖಳೆ ಬರೆದಿದೆ. ವಿಶೇಷ ಅಂದರೆ ಭಾರತದಲ್ಲೂ ಫಿಫಾ ವಿಶ್ವಕಪ್ ಫುಟ್ಬಾಲ್ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.

Fifa World cup fever in India record viewership on JioCinema for Argentina vs France Grand Finale ckm
Author
First Published Dec 19, 2022, 8:06 PM IST

ನವದೆಹಲಿ(ಡಿ.19):  ಫಿಫಾ ವಿಶ್ವಕಪ್ 2022ರ ಟೂರ್ನಿಗೆ ತೆರೆ ಬಿದ್ದಿದೆ. ಆದರೆ ಅರ್ಜೆಂಟಿನಾ ಸಂಭ್ರಮಕ್ಕೆ ಸದ್ಯಕ್ಕೆ ತೆರೆ ಬೀಳುವ ಲಕ್ಷಣಗಳಿಲ್ಲ. ಫ್ರಾನ್ಸ್ ವಿರುದ್ದ ಗೆದ್ದು ಬೀಗಿದ ಲಿಯೋನಲ್ ಮೆಸ್ಸಿ ಪಡೆ ಟ್ರೋಫಿ ಹಿಡಿದು ಕುಣಿದು ಕುಪ್ಪಳಿಸುತ್ತಿದೆ. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಹಾಗೂ ಫೈನಲ್ ಪಂದ್ಯ ಹಲವು ದಾಖಲೆ ಬರೆದಿದೆ. ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಫಿಫಾ ಫುಟ್ಬಾಲ್ ವೀಕ್ಷಿಸಿದ್ದಾರೆ. ಫೈನಲ್ ಪಂದ್ಯವನ್ನು ಅತೀ ಹೆಚ್ಚು ಮಂದಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಇದರ ಜೊತೆಗೆ ಭಾರತದಲ್ಲಿ ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ. ಕ್ರಿಕೆಟ್ ಫ್ರೆಂಡ್ಲಿ ರಾಷ್ಟ್ರ ಭಾರತದಲ್ಲಿ ಅತೀ ಹೆಚ್ಚು ಮಂದಿ ಫಿಫಾ ವಿಶ್ವಕಪ್ ಟೂರ್ನಿ ವೀಕ್ಷಿಸಿದ್ದಾರೆ. ಜಿಯೋ ಸಿನಿಮಾದಲ್ಲಿ ಬರೋಬ್ಬರಿ 110 ಮಿಲಿಯನ್ ವೀಕ್ಷಕರು ಈ ಬಾರಿ ಫುಟ್ಬಾಲ್ ಪಂದ್ಯಗಳನ್ನು ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಿದ್ದಾರೆ. ಇದು ದಾಖಲೆಯಾಗಿದೆ.

ಭಾರತದಲ್ಲಿ ಫುಟ್ಬಾಲ್ ಕ್ರೇಜ್ ಹೆಚ್ಚಾಗುತ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ. 110 ಮಿಲಿಯನ್ ವೀಕ್ಷಕರು ಫಿಫಾ ಪುಟ್ಬಾಲ್(Fifa World cup 2022) ಟೂರ್ನಿ ಪಂದ್ಯ ವೀಕ್ಷಿಸಿದ್ದಾರೆ. ಅರ್ಜೆಂಟೀನಾ ಹಾಗೂ ಫ್ರಾನ್ಸ್(Argentina vs France) ನಡುವಿನ ಫೈನಲ್ ಪಂದ್ಯವನ್ನು ಜಿಯೋಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ 32 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದೂ ಕೂಡ ದಾಖಲೆಯಾಗಿದೆ.

ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಕ್ಕೆ ದೀಪಿಕಾ ಪಡುಕೋಣೆಯನ್ನೇ ಆಯ್ಕೆ ಮಾಡಿದ್ದೇಕೆ?

ಫಿಫಾ ವಿಶ್ವಕಪ್ ಟೂರ್ನಿ ಭಾರತದಲ್ಲಿ ಬರೋಬ್ಬರಿ 40 ಮಿಲಿಯನ್ ನಿಮಿಷಗಳ ವೀಕ್ಷಣೆ ಕಾಣುವ ಮೂಲಕ ಜಿಯೋ ಸಿನಿಮಾ ಹಾಗೂ ಸ್ಪೋರ್ಟ್ಸ್ 18 ಹೊಸ ದಾಖಲೆ ಬರೆದಿದೆ. ಇದರ ಜೊತೆಗೆ ಜಿಯೋಸಿನಿಮಾ ಹಾಗೂ ಸ್ಪೋರ್ಟ್ಸ್ 18 ಅತೀ ಹೆಚ್ಚು ಡೌನ್ಲೋಡ್ ಕಂಡಿರುವ ಆ್ಯಪ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಫಿಫಾ ವಿಶ್ವಕಪ್ ಟೂರ್ನಿ ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ಹೊಸ ದಾಖಲೆ ಬರೆದಿರುವ ಸ್ಪೋರ್ಟ್ಸ್ 18 ಜಿಯೋ ಸಿನಿಮಾ ಸಾಧನೆಗೆ ಸ್ಪೋರ್ಟ್ಸ್ 18 ಸಿಇಒ ಅನಿಲ್ ಜಯರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಫಿಫಾ ವಿಶ್ವಕಪ್ 2022ರ ಪಂದ್ಯಗಳನ್ನು ಅಷ್ಟೇ ಅತ್ಯುತ್ತಮ ಗುಣಮಟ್ಟದಲ್ಲಿ ಪ್ರಸಾರ ಮಾಡುವುದು ಹಾಗೂ ಗ್ರಾಹಕರಿಗೆ ಸುಲಭವಾಗಿ ಪಂದ್ಯ ವೀಕ್ಷಣೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೇವು. ಈ ಭರವಸೆಯನ್ನು ಪೂರೈಸಿದ್ದೇವೆ. ಗ್ರಾಹಕರಿಗೆ ವಿಶ್ವದರ್ಜೆ ಮಟ್ಟದಲ್ಲಿ ಪಂದ್ಯಗಳನ್ನು ಸ್ಟ್ರೀಮಿಂಗ್ ಮಾಡಿದ್ದೇವೆ. ಭಾರತದಲ್ಲಿ ಅತೀ ಹೆಚ್ಚು ಮಂದಿ ಡಿಜಿಟಲ್ ವೀಕ್ಷಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ವಿಶೇಷ ಅಂದರೆ ಭಾರತ ಪಾಲ್ಗೊಳ್ಳದಿರುವ ಕ್ರೀಡಾಕೂಟಗಳ ಪೈಕಿ ಅತೀ ಹೆಚ್ಚು ಮಂದಿ ವೀಕ್ಷಣೆ ಪಡೆದ ಕ್ರೀಡೆ ಇದಾಗಿದೆ ಎಂದು ಅನಿಲ್ ಜಯರಾಜ್ ಹೇಳಿದ್ದಾರೆ.

ಗೆಲುವಿನ ಬೆನ್ನಲ್ಲೇ ಹೃದಯ ಸ್ಪರ್ಶಿ ಸಂದೇಶ ರವಾನಿಸಿದ ಲಿಯೋನೆಲ್ ಮೆಸ್ಸಿ ಮಡದಿ..!

2026ರ ವಿಶ್ವಕಪ್‌: 48 ತಂಡ ಕಣಕ್ಕೆ!
2026ರ ವಿಶ್ವಕಪ್‌ ಮೂಲಕ ಅಭಿಮಾನಿಗಳಿಗೆ ಕಾಲ್ಚೆಂಡಿನ ಮಹಾಸಮರದ ಹೊಸ ಮಾದರಿ ದರ್ಶನವಾಗಲಿದೆ. ಈ ಬಾರಿ ಸೇರಿದಂತೆ ಕಳೆದ 7 ಆವೃತ್ತಿಗಳಲ್ಲಿ ತಲಾ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡರೆ, 2026ರ ವಿಶ್ವಕಪ್‌ನಲ್ಲಿ 48 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ 64ರ ಬದಲು 80ಕ್ಕೆ ಏರಿಕೆಯಾಗಲಿವೆ. ಟೂರ್ನಿಗೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಲಿದ್ದು, 16 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಬಾರಿಗೆ 3 ದೇಶಗಳು ವಿಶ್ವಕಪ್‌ ಆತಿಥ್ಯ ವಹಿಸಲಿವೆ. 2002ರಲ್ಲಿ ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಜಂಟಿ ಆತಿಥ್ಯ ವಹಿಸಿದ್ದವು. ಆ ಬಳಿಕ ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ದೇಶ ಒಂದು ಆವೃತ್ತಿಗೆ ಆತಿಥ್ಯ ನೀಡಲಿವೆ.


 

Follow Us:
Download App:
  • android
  • ios