ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ನಾಕೌಟ್ ಹಂತಕ್ಕೇರಿದ ಇಂಗ್ಲೆಂಡ್-ಅಮೆರಿಕಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಉಭಯ ತಂಡಗಳುಹಾಲಿ ಚಾಂಪಿಯನ್ ಫ್ರಾನ್ಸ್‌ಗೆ ಶಾಕ್ ನೀಡಿದ ಟ್ಯುನೀಶಿಯಾ

ಅಲ್‌ ರಯ್ಯನ್‌(ಡಿ.01): ಮಾರ್ಕಸ್‌ ರಾರ‍ಯಶ್‌ಫೋರ್ಡ್‌ರ ಡಬಲ್‌ ಗೋಲಿನ ನೆರವಿನಿಂದ ಇಂಗ್ಲೆಂಡ್‌ ವಿಶ್ವಕಪ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ವೇಲ್ಸ್‌ ವಿರುದ್ಧ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ 3-0 ಅಂತರದಲ್ಲಿ ಜಯಗಳಿಸಿತು. ಇದರೊಂದಿಗೆ 2006ರ ಬಳಿಕ ಮೊದಲ ಬಾರಿಗೆ ಗುಂಪು ಹಂತವನ್ನು ಅಗ್ರಸ್ಥಾನಿಯಾಗಿ ಮುಕ್ತಾಯಗೊಳಿಸಿತು. ಇಂಗ್ಲೆಂಡ್‌ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾನೊಂದಿಗೆ 7 ಅಂಕ ಗಳಿಸಿತು. ಇರಾನ್‌ ವಿರುದ್ಧ 6-2ರ ಗೆಲುವು ಸಾಧಿಸಿದ್ದ ಇಂಗ್ಲೆಂಡ್‌, ಅಮೆರಿಕ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತ್ತು.

ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ 50ನೇ ನಿಮಿಷದಲ್ಲಿ ರಾರ‍ಯಶ್‌ಫೋರ್ಡ್‌ ಗೋಲಿನ ಖಾತೆ ತೆರೆದರು. ಮರು ನಿಮಷದಲ್ಲೇ ಫಿಲ್‌ ಫೋಡೆನ್‌ ಇಂಗ್ಲೆಂಡ್‌ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. 68ನೇ ನಿಮಿಷದಲ್ಲಿ ರಾರ‍ಯಶ್‌ಫೋರ್ಡ್‌ ಮತ್ತೊಂದು ಗೋಲು ಬಾರಿಸಿ ಗೆಲುವು ಖಚಿತಪಡಿಸಿದರು.

ಅಮೆರಿಕವನ್ನು ಗೆಲ್ಲಿಸಿದ ಪುಲಿಸಿಚ್‌ ಗೋಲು!

ದೋಹಾ: 38ನೇ ನಿಮಿಷದಲ್ಲಿ ನಾಯಕ ಕ್ರಿಸ್ಟಿಯನ್‌ ಪುಲಿಸಿಚ್‌ ಬಾರಿಸಿದ ಗೋಲು ಅಮೆರಿಕವನ್ನು ಪ್ರಿ ಕ್ವಾರ್ಟರ್‌ ಫೈನಲ್‌ಗೇರಿಸಿತು. ಇರಾನ್‌ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 1-0 ಅಂತರದಲ್ಲಿ ಜಯ ಸಾಧಿಸಿತು. ಇದರೊಂದಿಗೆ ಸತತ 3ನೇ ಯತ್ನದಲ್ಲಿ ಅಮೆರಿಕ ನಾಕೌಟ್‌ಗೇರಲು ಯಶಸ್ವಿಯಾಗಿದೆ. 2010, 2014ರಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶ ಪಡೆದಿದ್ದ ಅಮೆರಿಕ, 2018ರ ಟೂರ್ನಿಗೆ ಅರ್ಹತೆ ಪಡೆದಿರಲಿಲ್ಲ. ತನ್ನೆಲ್ಲಾ ಶಕ್ತಿ ಬಳಸಿ ಹೋರಾಡಿದ ಅಮೆರಿಕ ಅವಕಾಶ ಕೈಜಾರದಂತೆ ನೋಡಿಕೊಂಡಿತು. ಈ ಹೋರಾಟದಲ್ಲಿ ನಾಯಕ ಪುಲಿಸಿಚ್‌ ಸೇರಿ ಕೆಲ ಆಟಗಾರರಿಗೆ ಸಣ್ಣಪುಟ್ಟಗಾಯಗಳೂ ಆದವು.

ಇಂಗ್ಲೆಂಡ್‌-ಸೆನೆಗಲ್‌, ಡಚ್‌-ಅಮೆರಿಕ ಫೈಟ್‌

ಪ್ರಿ ಕ್ವಾರ್ಟರ್‌ ಫೈನಲ್‌ನ ಎರಡು ಪಂದ್ಯಗಳ ವೇಳಾಪಟ್ಟಿಅಂತಿಮಗೊಂಡಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ನೆದರ್‌ಲೆಂಡ್‌್ಸ ಹಾಗೂ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಅಮೆರಿಕ ಮುಖಾಮುಖಿಯಾಗಲಿವೆ. ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್‌ಗೆ ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾದ ಸೆನೆಗಲ್‌ ಎದುರಾಗಲಿದೆ.

ಗೋಲಿಗೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ಪುಲಿಸಿಚ್‌!

ಹೆಚ್ಚು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಅಮೆರಿಕ ಗೋಲು ಚೆಂಡಿನ ಮೇಲೆ ನಿರಂತರವಾಗಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಿತು. ಈ ವೇಳೆ ಗೋಲು ಬಾರಿಸುವಾಗ ಇರಾನ್‌ ಗೋಲ್‌ಕೀಪರ್‌ಗೆ ಡಿಕ್ಕಿ ಹೊಡೆದ ಅಮೆರಿಕ ನಾಯಕ ಪುಲಿಸಿಚ್‌ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆದ ಬಳಿಕ ಅವರು ಆನ್‌ಲೈನ್‌ನಲ್ಲೇ ತಂಡದೊಂದಿಗೆ ಸಂಭ್ರಮಾಚರಣೆಯಲಿ ಭಾಗಿಯಾದರು.

ಚಾಂಪಿಯನ್ ಫ್ರಾನ್ಸ್‌ಗೆ ಟ್ಯುನೀಶಿಯಾ ಶಾಕ್..!

ಅಲ್‌ ರಯ್ಯನ್‌: ಒಂದು ಪಂದ್ಯ ಬಾಕಿ ಇರುವಂತೆಯೇ ಹಾಲಿ ಚಾಂಪಿಯನ್‌ ಫ್ರಾನ್ಸ್‌, ನಾಕೌಟ್‌ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದು ಲಾಭವಾಯಿತು. ಕೊನೆ ಪಂದ್ಯಕ್ಕೆ ತನ್ನ ಅದೃಷ್ಟಪರೀಕ್ಷೆಯನ್ನು ಇಟ್ಟುಕೊಂಡಿದ್ದರೆ ಹೊರಬೀಳುವ ಸಾಧ್ಯತೆ ಇರುತ್ತಿತ್ತು. ಟ್ಯುನೀಶಿಯಾ ವಿರುದ್ಧ ಬುಧವಾರ ಫ್ರಾನ್ಸ್‌ 0-1 ಗೋಲಿನ ಸೋಲು ಅನುಭವಿಸಿತು. ಆದರೂ ಮೊದಲೆರಡು ಪಂದ್ಯಗಳಲ್ಲಿ ಒಟ್ಟು 6 ಗೋಲು ಬಾರಿಸಿದ ಪರಿಣಾಮ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

FIFA World Cup ಮೆಸ್ಸಿ ಪಡೆಗೆ ನಾಕೌಟ್‌ ಕನಸು! ಪೋಲೆಂಡ್‌ ಸವಾಲು ಮೆಟ್ಟಿ ನಿಲ್ಲುತ್ತಾ ಅರ್ಜೆಂಟೀನಾ?

ಕೊನೆ ಕ್ಷಣಸಲ್ಲಿ ಆ್ಯಂಟೋನಿ ಗ್ರೀಜ್‌ಮನ್‌, ಗೋಲು ಬಾರಿಸಿ ಫ್ರಾನ್ಸ್‌ ಸೋಲುವುದನ್ನು ತಪ್ಪಿಸುವ ಪ್ರಯತ್ನ ನಡೆಸಿದರೂ, ಆಫ್‌ಸೈಡ್‌ ಆಗಿದ್ದ ಕಾರಣ ಗೋಲು ನಿರಾಕರಿಸಲಾಯಿತು. ಇದಕ್ಕೂ ಮುನ್ನ 58ನೇ ನಿಮಿಷದಲ್ಲಿ ವಹಾಬಿ ಖಾಜ್ರಿ ಟ್ಯುನೀಶಿಯಾ ಪರ ಗೋಲು ಬಾರಿಸಿದರು. ತಲಾ ಒಂದು ಗೆಲುವು, ಸೋಲು ಹಾಗೂ ಡ್ರಾ ಕಂಡ ಟ್ಯುನೀಶಿಯಾ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ವಿಶ್ವಕಪ್‌ನಿಂದ ಹೊರಬಿತ್ತು. ಡೆನ್ಮಾರ್ಕ್-ಆಸ್ಪ್ರೇಲಿಯಾ ಪಂದ್ಯ ಡ್ರಾ ಆಗಿದ್ದರೆ, ಇಲ್ಲವೇ ಆಸ್ಪ್ರೇಲಿಯಾ ಸೋತಿದ್ದರೆ ಟ್ಯುನೀಶಿಯಾ ನಾಕೌಟ್‌ ಹಂತಕ್ಕೇರಕ್ಕೇರುತ್ತಿತ್ತು.

ಆಸೀಸ್‌ಗೆ 1-0 ಜಯ

ಅಲ್‌ ರಯ್ಯನ್‌: ಮೊದಲಾರ್ಧದಲ್ಲಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದರೂ ದ್ವಿತೀಯಾರ್ಧಲ್ಲಿ ಆಸ್ಪ್ರೇಲಿಯಾಗೆ ಮೇಲುಗೈ ಸಾಧಿಸಲು ಬಿಟ್ಟಡೆನ್ಮಾರ್ಕ್ ವಿಶ್ವಕಪ್‌ನಿಂದ ಹೊರಬಿದಿದೆ. 60ನೇ ನಿಮಿಷದಲ್ಲಿ ಮ್ಯಾಥ್ಯೂ ಲೆಕಿ ಬಾರಿಸಿದ ಗೋಲಿನ ನೆರವಿನಿಂದ 1-0ಯಲ್ಲಿ ಜಯಿಸಿದ ಆಸ್ಪ್ರೇಲಿಯಾ ‘ಡಿ’ ಗುಂಪಿನಲ್ಲಿ 6 ಅಂಕಗಳೊಂದಿಗೆ 2ನೇ ಸ್ಥಾನ ಪಡೆದು ಪ್ರಿ ಕ್ವಾರ್ಟರ್‌ ಪ್ರವೇಶಿಸಿತು.