FIFA World Cup: ‘ಎ’, ‘ಬಿ’ ಗುಂಪಿನ ನಾಕೌಟ್ ಭವಿಷ್ಯವಿಂದು ನಿರ್ಧಾರ
ಫಿಫಾ ವಿಶ್ವಕಪ್ ಟೂರ್ನಿಯ ‘ಎ’, ‘ಬಿ’ ಗುಂಪಿನ ನಾಕೌಟ್ ಭವಿಷ್ಯವಿಂದು ನಿರ್ಧಾರ
ನಾಕೌಟ್ ರೇಸ್‌ನಿಂದ ಹೊರಬಿದ್ದಿರುವ ಆತಿಥೇಯ ಕತಾರ್ ವಿರುದ್ಧ ನೆದರ್‌ಲೆಂಡ್ಸ್ ಸವಾಲು
ಈಕ್ವೆಡಾರ್ ಹಾಗೂ ಸೆನೆಗಲ್ ನಡುವಿನ ಸೆಣಸಾಟ ನಾಕೌಟ್ ಪಂದ್ಯ ಎನಿಸಿದೆ
ದೋಹಾ(ನ.29): ಫುಟ್ಬಾಲ್ ವಿಶ್ವಕಪ್‌ನ ಕಾವು ನಿಧಾನವಾಗಿ ಹೆಚ್ಚುತ್ತಿದ್ದು, ನಾಕೌಟ್ ಹಂತಕ್ಕೇರಲು ಪೈಪೋಟಿ ದಿನೇದಿನೇ ಜಾಸ್ತಿಯಾಗುತ್ತಿದೆ. ಮಂಗಳವಾರ ‘ಎ’ ಹಾಗೂ ‘ಬಿ’ ಗುಂಪುಗಳ ನಾಕೌಟ್ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ನಾಕೌಟ್ ರೇಸ್‌ನಿಂದ ಹೊರಬಿದ್ದಿರುವ ಆತಿಥೇಯ ಕತಾರ್ ವಿರುದ್ಧ ನೆದರ್‌ಲೆಂಡ್‌್ಸ ಸೆಣಸಲಿದೆ. ಈ ಪಂದ್ಯದಲ್ಲಿ ದೊಡ್ಡ ಗೆಲುವು ಸಾಧಿಸಿ, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡು ಅಂತಿಮ 16ರ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿದೆ.
ಇನ್ನು ಇದೇ ಗುಂಪಿನ ಈಕ್ವೆಡಾರ್ ಹಾಗೂ ಸೆನೆಗಲ್ ನಡುವಿನ ಸೆಣಸಾಟ ನಾಕೌಟ್ ಪಂದ್ಯ ಎನಿಸಿದೆ. ಗೆಲ್ಲುವ ತಂಡ ಪ್ರಿ ಕ್ವಾರ್ಟರ್‌ಗೇರಲಿದೆ. ಪಂದ್ಯ ಡ್ರಾ ಆದರೆ ಒಂದು ಅಂಕ ಅಂತರದಲ್ಲಿ ಈಕ್ವೆಡಾರ್ ಮುನ್ನಡೆಯಲಿದೆ. ಒಂದು ವೇಳೆ ಕತಾರ್ ವಿರುದ್ಧ ನೆದರ್‌ಲೆಂಡ್‌್ಸ ಸೋತರೆ, ಆಗ ಚಿತ್ರಣ ಬೇರೆ ಆಗಲಿದೆ.
ಇನ್ನು ‘ಬಿ’ ಗುಂಪಿನಲ್ಲಿ ಅಮೆರಿಕಕ್ಕೆ ಇರಾನ್ ಎದುರಾಗಲಿದ್ದು, ಈ ಪಂದ್ಯದಲ್ಲೂ ಗೆಲ್ಲುವ ತಂಡ ನಾಕೌಟ್‌ಗೆ ಪ್ರವೇಶ ಪಡೆಯಲಿದೆ. ಸದ್ಯ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್, ವೇಲ್ಸ್ ವಿರುದ್ಧ ಡ್ರಾ ಸಾಧಿಸಿದರೂ ಸಾಕು. ನಾಕೌಟ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಇಂಗ್ಲೆಂಡನ್ನು ದೊಡ್ಡ ಅಂತರದಲ್ಲಿ ಸೋಲಿಸಿದರೆ ವೇಲ್ಸ್ ಪ್ರಿ ಕ್ವಾರ್ಟರ್‌ಗೇರಬಹುದು.
ಇಂದಿನ ಪಂದ್ಯಗಳು
ಈಕ್ವೆಡಾರ್-ಸೆನೆಗಲ್, ರಾತ್ರಿ 8.30ಕ್ಕೆ
ನೆದರ್‌ಲೆಂಡ್ಸ್-ಕತಾರ್, ರಾತ್ರಿ 8.30ಕ್ಕೆ
ಇರಾನ್-ಅಮೆರಿಕ, ರಾತ್ರಿ 12.30ಕ್ಕೆ
ವೇಲ್ಸ್-ಇಂಗ್ಲೆಂಡ್, ರಾತ್ರಿ 12.30ಕ್ಕೆ
ಕತಾರ್‌ಗೆ ಪ್ರವಾಸಿಗರ ದಂಡು: ಒಂಟೆಗಳಿಗೂ ಓವರ್ ಟೈಂ!
ದೋಹಾ: ಫುಟ್ಬಾಲ್ ವಿಶ್ವಕಪ್ ವೀಕ್ಷಿಸಲು ಹಲವು ರಾಷ್ಟ್ರಗಳಿಂದ ಕತಾರ್‌ಗೆ ಆಗಮಿಸಿರುವ ಪ್ರವಾಸಿಗರು ದೋಹಾ ನಗರದ ಹೊರವಲಯಗಳಲ್ಲಿರುವ ಒಂಟೆ ಸಫಾರಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕತಾರ್ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಸಿಗರನ್ನು ನಿಭಾಯಿಸುತ್ತಿದ್ದು, ಒಂಟೆಗಳೂ ಓವರ್ ಟೈಂ ಕೆಲಸ ಮಾಡುವಂತಾಗಿದೆ.
FIFA World Cup ಕೊರಿಯಾಕ್ಕೆ ಸೋಲುಣಿಸಿ ನಾಕೌಟ್ ರೇಸಲ್ಲಿ ಉಳಿದ ಘಾನಾ!
ಅನೇಕ ಪ್ರವಾಸಿಗರಿಗೆ ಮರಳು ಭೂಮಿಯಲ್ಲಿ ಇದು ಮೊದಲ ಅನುಭವವಾಗಿದ್ದು, ಒಂಟೆ ಮೇಲೆ ಕೂತು ಸವಾರಿ ಮಾಡುವುದು, ರಣಹದ್ದುಗಳನ್ನು ಕೈಮೇಲೆ ಕೂರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಈ ಮೊದಲು ಸಾಮಾನ್ಯ ದಿನಗಳಲ್ಲಿ 20, ವಾರಾಂತ್ಯದಲ್ಲಿ 50 ರೈಡ್‌ಗಳನ್ನು ನಡೆಸುತ್ತಿದ್ದ ಒಂಟೆ ಮಾಲಿಕರು, ಈಗ ದಿನಕ್ಕೆ ಏನಿಲ್ಲವೆಂದರೂ 500 ರೈಡ್‌ಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ವೇಳೆ ಪ್ರವಾಸಿಗರ ದಂಡೇ ಬರಲಿದೆ ಎನ್ನುವ ಕಾರಣಕ್ಕೆ ಸಾವಿರಾರು ಒಂಟೆಗಳನ್ನು ಅಕ್ಕಪಕ್ಕದ ದೇಶಗಳಿಂದ ತರಿಸಿಕೊಳ್ಳಲಾಗಿದೆ ಎಂದು ಒಂಟೆ ಸಫಾರಿ ನಡೆಸುವ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.