FIFA World Cup ಕೊರಿಯಾಕ್ಕೆ ಸೋಲುಣಿಸಿ ನಾಕೌಟ್ ರೇಸಲ್ಲಿ ಉಳಿದ ಘಾನಾ!

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಗೆಲುವು ದಾಖಲಿಸಿದ ಘಾನಾ
ನಾಕೌಟ್‌ ರೇಸ್‌ನಲ್ಲಿ ಉಳಿದುಕೊಂಡ ಘಾನಾ
ನಾಕೌಟ್‌ ರೇಸ್‌ನಿಂದ ಹೊಸ ಹೊರಬೀಳುವ ಭೀತಿಯಲ್ಲಿ ದಕ್ಷಿಣ ಕೊರಿಯಾ

FIFA World Cup 2022 Ghana beat South Korea in a five goal thriller kvn

ಅಲ್‌ ರಯ್ಯನ್‌(ನ.29): ಚೊ ಗ್ಯೂ-ಸುಂಗ್‌ರ ಸಾಹಸ ಘಾನಾ ವಿರುದ್ಧ ದಕ್ಷಿಣ ಕೊರಿಯಾ ಗೆಲ್ಲಲು ಸಾಕಾಗಲಿಲ್ಲ. ‘ಎಚ್‌’ ಗುಂಪಿನ ರೋಚಕ ಪಂದ್ಯದಲ್ಲಿ 3-2ರ ಗೆಲುವು ಸಾಧಿಸಿದ ಘಾನಾ, ನಾಕೌಟ್‌ ರೇಸ್‌ನಲ್ಲಿ ಉಳಿದರೆ, ಕೊರಿಯಾ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊಹಮದ್‌ ಸಲಿಸು 24ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಘಾನಾ ಆರಂಭಿಕ ಮುನ್ನಡೆ ಪಡೆಯಿತು. 34ನೇ ನಿಮಿಷದಲ್ಲಿ ಮೊಹಮದ್‌ ಕುಡುಸ್‌ ಮುನ್ನಡೆಯನ್ನು ಹೆಚ್ಚಿಸಿದರು. 2-0 ಮುನ್ನಡೆಯೊಂದಿಗೆ ಮೊದಲಾರ್ಧವನ್ನು ಮುಗಿಸಿದ ಘಾನಾಕ್ಕೆ ಚೊ ಗ್ಯೂ-ಸುಂಗ್‌ ಡಬಲ್‌ ಆಘಾತ ನೀಡಿದರು. 58, 61ನೇ ನಿಮಿಷದಲ್ಲಿ ಗೋಲು ಬಾರಿಸಿ ಕೊರಿಯಾ ಸಮಬಲ ಸಾಧಿಸಲು ನೆರವಾದರು. ಆದರೆ 68ನೇ ನಿಮಿಷದಲ್ಲಿ ಕುಡುಸ್‌ ಮತ್ತೊಂದು ಗೋಲು ಗಳಿಸಿ ಘಾನಾ ಒಂದು ಗೋಲಿನ ಅಂತರದಲ್ಲಿ ಪಂದ್ಯ ಗೆಲ್ಲಲು ನೆರವಾದರು.

ಸರ್ಬಿಯಾ ವಿರುದ್ಧ ಕ್ಯಾಮರೂನ್‌ 3-3 ಡ್ರಾ

ಅಲ್‌ ವಕ್ರಾ: 3 ನಿಮಿಷಗಳಲ್ಲಿ 2 ಗೋಲು ಬಾರಿಸಿದ ಕ್ಯಾಮರೂನ್‌ ವಿಶ್ವಕಪ್‌ನಿಂದ ಹೊರಬೀಳುವ ಆತಂಕದಿಂದ ಪಾರಾಯಿತು. 63ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಕ್ಯಾಮರೂನ್‌ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ 1 ಅಂಕ ಸಂಪಾದಿಸಿತು. ಪಂದ್ಯದ 29ನೇ ನಿಮಿಷದಲ್ಲಿ ಚಾರ್ಲ್ಸ್ ಕ್ಯಾಸೆಲ್ಲೆಟ್ಟೊ ಬಾರಿಸಿದ ಗೋಲಿನ ನೆರವಿನಿಂದ ಆರಂಭಿಕ ಮುನ್ನಡೆ ಪಡೆದರೂ, ಸರ್ಬಿಯಾ ಮೊದಲಾರ್ಧದ ಮುಕ್ತಾಯಕ್ಕೂ ಮೊದಲೇ 2 ಗೋಲು ದಾಖಲಿಸಿತು. 

FIFA World Cup ನಾಕೌಟ್‌ಗೆ ಬ್ರೆಜಿಲ್‌ ಲಗ್ಗೆ, ಸ್ವಿಜರ್‌ಲೆಂಡ್‌ ವಿರುದ್ಧ 1-0 ಜಯ

45+1 ನಿಮಿಷದಲ್ಲಿ ಪಾವ್ಲೊವಿಚ್‌, 45+3 ನಿಮಿಷದಲ್ಲಿ ಮಿಲಿನ್ಕೋವಿಚ್‌ ಗೋಲು ಬಾರಿಸಿದರು. ಬಳಿಕ 53ನೇ ನಿಮಿಷದಲ್ಲಿ ಮಿಟ್ರೋವಿಚ್‌ ತಂಡದ ಮುನ್ನಡೆ ಹೆಚ್ಚಿಸಿದರು. ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದ ಸರ್ಬಿಯಾಗೆ 63ನೇ ನಿಮಿಷದಲ್ಲಿ ವಿನ್ಸೆಂಟ್‌ ಅಬೂಬಕ್ಕರ್‌ ಬಾರಿಸಿದ ಗೋಲು ಆಘಾತ ನೀಡಿತು. ಆ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ 66ನೇ ನಿಮಿಷದಲ್ಲಿ ಎರಿಕ್‌ ಮ್ಯಾಕ್ಸಿಮ್‌ ಗೋಲು ಗಳಿಸಿ ಕ್ಯಾಮರೂನ್‌ ಸಮಬಲ ಸಾಧಿಸುವಂತೆ ಮಾಡಿದರು.

4-1ರಿಂದ ಜಯಿಸಿ ಕೆನಡಾವನ್ನು ಹೊರಹಾಕಿದ ಕ್ರೊವೇಷಿಯಾ

ಅಲ್‌ ರಯ್ಯನ್‌: 2ನೇ ನಿಮಿಷದಲ್ಲೇ ಅಲ್ಫಾನ್ಸೋ ಡೇವಿಸ್‌ ಬಾರಿಸಿದ ಗೋಲಿನಿಂದ ಆರಂಭಿಕ ಮುನ್ನಡೆ ಪಡೆದ ಹೊರತಾಗಿಯೂ ಕ್ರೊವೇಷಿಯಾ ವಿರುದ್ಧ 1-4ರ ಸೋಲು ಕಂಡ ಕೆನಡಾ ವಿಶ್ವಕಪ್‌ನಿಂದ ಹೊರಬಿದ್ದಿದೆ. ತಂಡಕ್ಕಿದು ಸತತ 2ನೇ ಸೋಲು. ಕ್ರೊವೇಷಿಯಾ 4 ಅಂಕಗಳೊಂದಿಗೆ ‘ಎಫ್‌’ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿದೆಯಾದರೂ, ತಂಡದ ನಾಕೌಟ್‌ ಭವಿಷ್ಯ ಅಂತಿಮ ಸುತ್ತಿನ ಬಳಿಕವಷ್ಟೇ ನಿರ್ಧಾರವಾಗಲಿದೆ.

ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಕ್ರೊವೇಷಿಯಾಗೆ ಭಾನುವಾರ ತನ್ನ ತಾರಾ ಆಟಗಾರರು ನೆರವಾದರು. 36 ಹಾಗೂ 70ನೇ ನಿಮಿಷದಲ್ಲಿ ಆ್ಯಂಡ್ರೆಜ್‌ ಕ್ರಮಾರಿಚ್‌, 44ನೇ ನಿಮಿಷದಲ್ಲಿ ಮಾರ್ಕೊ ಲಿವಾಜ, 90+4ನೇ ನಿಮಿಷದಲ್ಲಿ ಲೊವ್ರೊ ಮೇಯರ್‌ ಗೋಲು ಬಾರಿಸಿದರು. ಮೊದಲ 3 ಸ್ಥಾನಗಳಲ್ಲಿರುವ ಕ್ರೊವೇಷಿಯಾ, ಮೊರಾಕ್ಕೊ, ಬೆಲ್ಜಿಯಂ ನಡುವೆ ನಾಕೌಟ್‌ ಹಂತಕ್ಕೇರಲು ಸ್ಪರ್ಧೆ ಇದ್ದು, ಭಾರೀ ಕುತೂಹಲ ಮೂಡಿಸಿದೆ. ಕ್ರೊವೇಷಿಯಾ ಅಂತಿಮ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆಡಲಿದೆ.

Latest Videos
Follow Us:
Download App:
  • android
  • ios