Asianet Suvarna News Asianet Suvarna News

FIFA World Cup: ಈ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ಗೋಲು ರಹಿತ ಡ್ರಾಗಳು..?

ಕತಾರ್‌ನಲ್ಲಿ ಭರ್ಜರಿಯಾಗಿ ಸಾಗುತ್ತಿದೆ ಫಿಫಾ ವಿಶ್ವಕಪ್ ಟೂರ್ನಿ
ಹಲವು ಗೋಲು ರಹಿತ ಡ್ರಾ ಪಂದ್ಯಗಳಿಗೆ ಸಾಕ್ಷಿಯಾದ ಫಿಫಾ ವಿಶ್ವಕಪ್
ಒಂದು ವಾರದೊಳಗಾಗಿ ನಾಲ್ಕು ಪಂದ್ಯಗಳು ಡ್ರಾ ನಲ್ಲಿ ಅಂತ್ಯವಾಗಿವೆ

FIFA World Cup 2022 This time likely to be record breaking Goal less draw kvn
Author
First Published Nov 26, 2022, 9:50 AM IST

ದೋಹಾ(ನ.26): 2022ರ ಫಿಫಾ ವಿಶ್ವಕಪ್‌ ಶುರುವಾಗಿ ಇನ್ನೂ ಒಂದು ವಾರವಾಗಿಲ್ಲ ಆಗಲೇ ನಾಲ್ಕು ಪಂದ್ಯಗಳು ಗೋಲು ರಹಿತ ಡ್ರಾಗೊಂಡಿವೆ. ಈ ವಿಶ್ವಕಪ್‌ ಅತಿಹೆಚ್ಚು ಗೋಲು ರಹಿತ ಪಂದ್ಯಗಳಿಗೆ ಸಾಕ್ಷಿಯಾಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಶುಕ್ರವಾರ ಕತಾರ್‌-ಸೆನೆಗಲ್‌ ಪಂದ್ಯದ ವರೆಗೂ ಈ ವಿಶ್ವಕಪ್‌ನಲ್ಲಿ ಒಟ್ಟು 18 ಪಂದ್ಯಗಳು ನಡೆದಿದ್ದು, ಮೆಕ್ಸಿಕೋ-ಪೋಲೆಂಡ್‌, ಡೆನ್ಮಾರ್ಕ್-ಟ್ಯುನೀಶಿಯಾ, ಕ್ರೊವೇಷಿಯಾ-ಮೊರಾಕ್ಕೊ ಹಾಗೂ ದಕ್ಷಿಣ ಕೊರಿಯಾ-ಉರುಗ್ವೆ ಪಂದ್ಯಗಳು 0-0ಯಲ್ಲಿ ಡ್ರಾಗೊಂಡಿವೆ. ಈ ವರೆಗೂ 1982, 2006, 2010 ಹಾಗೂ 2014ರಲ್ಲಿ ತಲಾ 7 ಪಂದ್ಯಗಳು ಗೋಲು ರಹಿತ ಡ್ರಾಗೊಂಡಿದ್ದವು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಡೆನಾರ್ಕ್ ಹಾಗೂ ಫ್ರಾನ್ಸ್‌ ನಡುವಿನ ಪಂದ್ಯ ಮಾತ್ರ 0-0ಯಲ್ಲಿ ಡ್ರಾಗೊಂಡಿತ್ತು. 1930, 1934, 1938, 1950 ಹಾಗೂ 1954ರ ವಿಶ್ವಕಪ್‌ಗಳಲ್ಲಿ ಒಂದೂ ಪಂದ್ಯ ಗೋಲು ರಹಿತ ಡ್ರಾಗೊಂಡಿರಲಿಲ್ಲ.

ವಿಶ್ವ ಚೆಸ್‌: ಸೆಮೀಸ್‌ನಲ್ಲಿ ಭಾರತ ತಂಡಕ್ಕೆ ಸೋಲು

ಜೆರುಸಲೆಮ್‌: ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಭಾರತ 1-3ರ ಅಂತರದಲ್ಲಿ ಉಜ್ಬೇಕಿಸ್ತಾನ ವಿರುದ್ಧ ಸೋತು ನಿರಾಸೆ ಅನುಭವಿಸಿದೆ. ಮತ್ತೊಂದು ಸೆಮೀಸ್‌ನಲ್ಲಿ ಸ್ಪೇನ್‌ ವಿರುದ್ಧ ಚೀನಾ ಜಯಿಸಿ ಫೈನಲ್‌ ಪ್ರವೇಶಿಸಿತು. 3ನೇ ಸ್ಥಾನಕ್ಕಾಗಿ ಭಾರತ, ಸ್ಪೇನ್‌ ವಿರುದ್ಧ ಸೆಣಸಲಿದೆ.

ಪ್ರೊ ಕಬಡ್ಡಿ: 2ನೇ ಸ್ಥಾನಕ್ಕೆ ಏರಿದ ಜೈಪುರ ಪ್ಯಾಂಥ​ರ್ಸ್‌

ಹೈದರಾಬಾದ್‌: ತಮಿಳ್‌ ತಲೈವಾಸ್‌ ವಿರುದ್ಧ 41-26ರಲ್ಲಿ ಜಯಿಸಿದ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ ಪ್ರೊ ಕಬಡ್ಡಿ 9ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. 

FIFA World Cup: ಮೆಸ್ಸಿಯ ಅರ್ಜೆಂಟೀನಾಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ..!

ಕಳೆದ 5 ಪಂದ್ಯಗಳಲ್ಲಿ ತಂಡ 4ರಲ್ಲಿ ಜಯಿಸಿದೆ. ಇನ್ನು ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ 50-47ರಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿ ಹ್ಯಾಟ್ರಿಕ್‌ ಜಯ ಪೂರ್ಣಗೊಳಿಸಿತು. ತಂಡ ಮತ್ತೆ ಅಗ್ರ 6ರಲ್ಲಿ ಸ್ಥಾನ ಪಡೆದಿದ್ದು ಪ್ಲೇ-ಆಫ್‌ ಆಸೆ ಜೀವಂತವಾಗಿರಿಸಿಕೊಂಡಿದೆ.

ಇಂದಿನಿಂದ ಭಾರತ, ಆಸೀಸ್‌ ಹಾಕಿ ಸರಣಿ

ಅಡಿಲೇಡ್‌: 2023ರ ಜನವರಿಯಲ್ಲಿ ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಕೊನೆ ಹಂತದ ಅಭ್ಯಾಸ ನಡೆಸಲು ಭಾರತ ಪುರುಷರ ಹಾಕಿ ತಂಡ ಆಸ್ಪ್ರೇಲಿಯಾಗೆ ತೆರಳಿದ್ದು, ವಿಶ್ವ ನಂ.1 ತಂಡದ ವಿರುದ್ಧ 5 ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಶನಿವಾರ ನಡೆಯಲಿದೆ. ಕಾಮನ್ವೆಲ್ತ್‌ ಗೇಮ್ಸ್‌ನ ಫೈನಲ್‌ನಲ್ಲಿ 0-7ರ ಸೋಲಿನ ಬಳಿಕ ಮೊದಲ ಬಾರಿಗೆ ಆಸ್ಪ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ.

ಪಂದ್ಯ: ಬೆಳಗ್ಗೆ 11ಕ್ಕೆ, ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ ಫಸ್ಟ್‌

Vijay Hazare Trophy ಕ್ವಾರ್ಟರ್‌ಗೇರುತ್ತಾ ಕರ್ನಾಟಕ?

ಅಹಮದಾಬಾದ್‌: ವಿಜಯ್‌ ಹಜಾರೆ ಏಕದಿನ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಜಾರ್ಖಂಡ್‌ ವಿರುದ್ಧ ಸೆಣಸಲಿದೆ. ಶುಕ್ರವಾರ ಇಲ್ಲಿನ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ ಎಲೈಟ್‌ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೂ, ಅಸ್ಸಾಂ ವಿರುದ್ಧ ಸೋತಿದ್ದ ಕಾರಣಕ್ಕೆ ಕರ್ನಾಟಕ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು. 

FIFA World Cup: ಮೆಸ್ಸಿಯ ಅರ್ಜೆಂಟೀನಾಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ..!

ಗುಂಪು ಹಂತದ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ತಂಡ ಬೌಲರ್‌ಗಳ ಸಾಹಸದಿಂದ ನಾಕೌಟ್‌ ಹಂತಕ್ಕೇರಿದ್ದು, ನಿಕಿನ್‌ ಜೋಸ್‌ ಹಾಗೂ ಶ್ರೇಯಸ್‌ ಗೋಪಾಲ್‌ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ತೋರಿಲ್ಲ. ಇದು ಕರ್ನಾಟಕದ ತಲೆನೋವಿಗೆ ಕಾರಣವಾಗಿದೆ.

ಪಂದ್ಯ: ಬೆಳಗ್ಗೆ 9ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

Follow Us:
Download App:
  • android
  • ios