ಪಂದ್ಯದ ನಡುವೆ ಆಟಗಾರರ ವಶಕ್ಕೆ ಪಡೆದ ಅಧಿಕಾರಿಗಳು..!

* ಕೋವಿಡ್‌ ನಿಯಮ ಉಲ್ಲಂಘಿಸಿದ ತಪ್ಪಿಗಾಗಿ ಪಂದ್ಯವೇ ರದ್ದು

* ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಸುತ್ತಿನ ಬ್ರೆಜಿಲ್‌-ಅರ್ಜೆಂಟಿನಾ ನಡುವಿನ ಪಂದ್ಯ

* ಅರ್ಜೆಂಟೀನಾದ ನಾಲ್ವರು ಆಟಗಾರರು ಕೋವಿಡ್ ನಿಯಮ ಉಲ್ಲಂಘನೆ

FIFA World Cup 2022 Qualifiers Brazil vs Argentina Football clash abandoned following COVID 19 controversy kvn

ಸಾವೊಪೌಲೊ(ಸೆ.07‌): ಆಟಗಾರರು ಕೋವಿಡ್‌ ನಿಯಮ ಉಲ್ಲಂಘಿಸಿದ ಕಾರಣ ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಸುತ್ತಿನ ಬ್ರೆಜಿಲ್‌-ಅರ್ಜೆಂಟಿನಾ ನಡುವಿನ ಪಂದ್ಯವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. 

ಅರ್ಜೆಂಟೀನಾದ ನಾಲ್ವರು ಆಟಗಾರರು ಇಂಗ್ಲೆಂಡ್‌ನಿಂದ ಬ್ರೆಜಿಲ್‌ಗೆ ಬರುವ ಮೊದಲು ಕ್ವಾರಂಟೈನ್‌ ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಪಂದ್ಯ ನಡೆಯುತ್ತಿರುವಾಗಲೇ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೈದಾನಕ್ಕೆ ಆಗಮಿಸಿ ಪಂದ್ಯವನ್ನು ನಿಲ್ಲಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಫುಟ್ಬಾಲ್‌: ಡುರಾಂಡ್‌ ಕಪ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ಸ್ಪರ್ಧೆ

ಡುರಾಂಡ್‌ ಕಪ್‌: ಬೆಂಗಳೂರು ಯುನೈಟೆಡ್‌ ಶುಭಾರಂಭ

ಕೋಲ್ಕತ್ತಾ: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್‌ ಪಂದ್ಯಾವಳಿ ಎನಿಸಿರುವ ಡುರಾಂಡ್‌ ಕಪ್‌ನಲ್ಲಿ, ಚೊಚ್ಚಲ ಬಾರಿಗೆ ಸ್ಪರ್ಧಿಸಿರುವ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಗೆಲುವಿನ ಶುಭಾರಂಭ ಮಾಡಿದೆ.

ಪೆಡ್ರೊ ಮಾಂಜಿ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಸಿಆರ್‌ಪಿಎಫ್‌ ವಿರುದ್ಧ 1-0 ಅಂತರದಿಂದ ಬೆಂಗಳೂರು ಯುನೈಟೆಡ್‌ ಜಯ ಸಾಧಿಸುವ ಮೂಲಕ, ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು. ಬೆಂಗಳೂರು ಯುನೈಟೆಡ್‌ ಸೆ.9ರಂದು ಭಾರತೀಯ ವಾಯು ಸೇನೆ ವಿರುದ್ಧ ಮುಂದಿನ ಪಂದ್ಯ ಆಡಲಿದೆ.
 

Latest Videos
Follow Us:
Download App:
  • android
  • ios