ಫುಟ್ಬಾಲ್: ಕತಾರ್ ವಿರುದ್ದ ಭಾರತಕ್ಕೆ ವಿರೋಚಿತ ಸೋಲು..!
* ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡಕ್ಕೆ ವಿರೋಚಿತ ಸೋಲು
* ಏಷ್ಯಾ ಚಾಂಪಿಯನ್ ಕತಾರ್ ವಿರುದ್ದ ಭಾರತ ತಂಡಕ್ಕೆ 1-0 ಅಂತರದ ಸೋಲು
* ಕೇವಲ 10 ಆಟಗಾರರೊಂದಿಗೆ ಆಡಿಯೂ ಭಾರತದಿಂದ ಉತ್ತಮ ಪ್ರದರ್ಶನ
ದೋಹಾ(ಜೂ.05): ಇಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್, ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ ಕತಾರ್ ವಿರುದ್ಧ ಭಾರತ 1-0 ಗೋಲುಗಳ ವೀರೋಚಿತ ಸೋಲು ಕಂಡಿದೆ.
ಕತಾರ್ ಪರ ಅಬ್ದೆಲ್ ಅಜೀಜ್ 33ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ 18ನೇ ನಿಮಿಷದಲ್ಲಿ 2ನೇ ಬಾರಿ ಹಳದಿ ಕಾರ್ಡ್ ಪಡೆದ ಕಾರಣ, ರಾಹುಲ್ ಮೈದಾನದಿಂದ ಹೊರನಡೆದರು. ಹೀಗಾಗಿ ಭಾರತ, ಉಳಿದ ಪಂದ್ಯವನ್ನು 10 ಆಟಗಾರರಿಂದಲೇ ಆಡಿದರೂ, ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯಿತು.
ಹೀಗಿತ್ತು ನೋಡಿ ಅಜೀಜ್ ಗೋಲು ಬಾರಿಸಿದ ಕ್ಷಣ:
ಕೊರೋನಾದಿಂದ ಕನಸು ನುಚ್ಚುನೂರು; ದಿನಗೂಲಿಯಿಂದ ಸಾಗುತ್ತಿದೆ ಭಾರತ ಫುಟ್ಬಾಲ್ ಆಟಗಾರ್ತಿ ಜೀವನ!
ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಅವರು ಎದುರಾಳಿ ತಂಡ ಗೋಲು ಹೊಡೆಯುವ 9 ಅವಕಾಶಗಳನ್ನು ತಡೆದು ಅದ್ಭುತ ಪ್ರದರ್ಶನ ನೀಡಿದರು. ಭಾರತ ಫುಟ್ಬಾಲ್ ತಂಡ ಕೊನೆಯಲ್ಲಿ ಆಕ್ರಮಣಕಾರಿ ಆಟದ ಮೊರೆ ಹೋಯಿತಾದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.