ನವ​ದೆ​ಹ​ಲಿ(ಜೂ.27): ಕೊರೋನಾ ಸೋಂಕಿ​ನಿಂದಾಗಿ ಜಾಗ​ತಿಕ ಮಟ್ಟ​ದಲ್ಲಿ ಫುಟ್ಬಾಲ್‌ ಕ್ರೀಡೆ ಆರ್ಥಿಕ ಸಂಕ​ಷ್ಟಕ್ಕೆ ಗುರಿ​ಯಾ​ಗಿದ್ದು, ತನ್ನ 211 ಸದಸ್ಯ ರಾಷ್ಟ್ರಗಳ ನೆರ​ವಿಗೆ ಅಂತಾ​ರಾ​ಷ್ಟ್ರೀಯ ಫುಟ್ಬಾಲ್‌ ಫೆಡ​ರೇ​ಷನ್‌ (ಫಿಫಾ) ಧಾವಿ​ಸಿದೆ. 

1.5 ಬಿಲಿ​ಯನ್‌ ಅಮೆ​ರಿ​ಕನ್‌ ಡಾಲರ್‌ (ಅಂದಾಜು 11 ಸಾವಿರ ಕೋಟಿ ರು.) ನೆರ​ವು ಘೋಷಿ​ಸಿ​ರುವ ಫಿಫಾ, ಪ್ರತಿ ಸದಸ್ಯ ರಾಷ್ಟ್ರಕ್ಕೆ ತಲಾ 1 ಮಿಲಿ​ಯನ್‌ ಡಾಲರ್‌ (ಅಂದಾಜು 7.5 ಕೋಟಿ ರು.) ನೀಡು​ವು​ದಾಗಿ ತಿಳಿ​ಸಿದೆ. ಅಲ್ಲದೇ ಸದಸ್ಯ ರಾಷ್ಟ್ರಗಳ ಫುಟ್ಬಾಲ್‌ ಸಂಸ್ಥೆಗಳು ಬಡ್ಡಿ ರಹಿತ ಸಾಲಕ್ಕೆ ಅರ್ಜಿ ಸಲ್ಲಿ​ಸ​ಬ​ಹು​ದಾ​ಗಿದೆ. ಸಂಸ್ಥೆಗಳ ವಾರ್ಷಿಕ ಆದಾ​ಯದ ಶೇ.35ರಷ್ಟು ಮೊತ್ತವನ್ನು ಸಾಲವಾಗಿ ನೀಡು​ವು​ದಾಗಿ ಫಿಫಾ ತಿಳಿ​ಸಿದೆ. ಇದೇ ವೇಳೆ ಅಭಿ​ವೃದ್ಧಿಗಾಗಿ ಮೀಸ​ಲಿ​ಟ್ಟಿ​ರುವ ಹಣವನ್ನು ನೆರವು ಕಾರ್ಯ​ಗ​ಳಿಗೆ ಬಳ​ಸಿ​ಕೊ​ಳ್ಳಲು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಫಿಫಾ ಅನು​ಮತಿ ನೀಡಿದೆ.

6 ವರ್ಷದಲ್ಲೇ ಸಿಕ್ಸ್‌ ಪ್ಯಾಕ್‌ ; ನಾನು ಮೆಸ್ಸಿಯಂತಾಗುತ್ತೇನೆ ಎಂದ ಪೋರ..!

ಖರ್ಚಿನ ಮೇಲೆ ನಿಗಾ: ಆರ್ಥಿಕ ನೆರವು ಪಡೆ​ಯುವ ರಾಷ್ಟ್ರಗಳು, ಹಣವನ್ನು ಸೂಕ್ತ ರೀತಿ​ಯಲ್ಲಿ ಬಳ​ಸಿ​ಕೊ​ಳ್ಳ​ಬೇಕು ಎಂದು ಫಿಫಾ ಸೂಚಿ​ಸಿದೆ. ಖರ್ಚಿನ ಮೇಲೆ ಫಿಫಾ ಕಣ್ಣಿ​ಡ​ಲಿದ್ದು, ಅವ್ಯ​ವ​ಹಾರ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊ​ಳ್ಳು​ವು​ದಾಗಿ ಎಚ್ಚ​ರಿ​ಸಿದೆ.