ಜೂನಿಯರ್ ಮಹಿಳಾ ಫುಟ್ಬಾಲ್ ವಿಶ್ವಕಪ್ ಮತ್ತೆ ಮುಂದಕ್ಕೆ..?
ಭಾರತದಲ್ಲಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ಫೀಫಾ ಅಂಡರ್ 17 ಮಹಿಳಾ ವಿಶ್ವಕಪ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಸೆ.24): ಭಾರತದಲ್ಲಿ ಆಯೋಜಿಸಲಾಗಿರುವ ಅಂಡರ್-17 ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನು ಮತ್ತೆ ಮುಂದೂಡುವುದು ಬಹುತೇಕ ಖಚಿತವಾಗಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇದೇ ನ.2ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದಿನ ವರ್ಷದ ಫ್ರೆಬವರಿಗೆ ಮುಂದೂಡಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಆಫ್ರಿಕಾ, ಉತ್ತರ ಮತ್ತು ಮಧ್ಯ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ನಡೆಯಬೇಕಿರುವ ಅರ್ಹತಾ ಪಂದ್ಯಗಳು ಇನ್ನೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಅಂಡರ್-17 ಮಹಿಳಾ ವಿಶ್ವಕಪ್ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಮೂಲಗಳು ತಿಳಿಸಿವೆ.
ಐಎಸ್‌ಎಲ್: 6 ಫುಟ್ಬಾಲಿಗರಿಗೆ ಸೋಂಕು
ಪುಣೆ: ಇದೇ ನ.21ರಿಂದ ಆರಂಭವಾಗಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಗೆ ಆರಂಭದಲ್ಲೇ ಆಘಾತ ಎದುರಾಗಿದ್ದು, 6 ಆಟಗಾರರಿಗೆ ಕೊರೋನಾ ಸೋಂಕಿರುವುದು ಖಚಿತವಾಗಿದೆ.
100+ ಗೋಲು ಬಾರಿಸಿ ಅಪರೂಪದ ದಾಖಲೆ ಬರೆದ ಕ್ರಿಸ್ಟಿಯಾನೋ ರೋನಾಲ್ಡೋ
ಎಟಿಕೆ ಮೋಹನ್ ಬಗಾನ್ (ಕೋಲ್ಕತಾ), ಗೋವಾ ಎಫ್‌ಸಿ, ಹೈದ್ರಾಬಾದ್ ಎಫ್‌ಸಿ ತಂಡದ ಆಟಗಾರರಿಗೆ ಸೋಂಕು ತಗುಲಿದ್ದು, ಆಟಗಾರರ ಹೆಸರನ್ನು ಆಯೋಜಕರು ಬಹಿರಂಗ ಪಡಿಸಿಲ್ಲ. ಬಿಎಫ್‌ಸಿ ಹಾಗೂ ಕೇರಳ ಎಫ್‌ಸಿ ತಂಡದ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಜೆಮ್ಶೆಡ್‌ಪುರ, ಚೆನ್ನೈಯನ್, ಮುಂಬೈ ಸಿಟಿ, ಒಡಿಶಾ ಹಾಗೂ ನಾರ್ತ್-ಈಸ್ಟ್ ಯುನೈಟೆಡ್ ಎಫ್‌ಸಿ ಆಟಗಾರರು ಇನ್ನೂ ಕೊರೋನಾ ಪರೀಕ್ಷೆಗೆ ಒಳಗಾಗಿಲ್ಲ ಎಂದು ಹೇಳಲಾಗಿದೆ.