* ಯುರೋ ಕಪ್‌ನಲ್ಲಿ ಅಂತಿಮ ಎಂಟರಘಟ್ಟ ಪ್ರವೇಶಿಸಿದ ಸ್ಪೇನ್‌ ಹಾಗೂ ಸ್ವಿಟ್ಜರ್‌ಲೆಂಡ್* ಯುರೋ ಕಪ್‌ 2020 ಚಾಂಪಿಯನ್‌ ಫ್ರಾನ್ಸ್‌ ತಂಡಕ್ಕೆ ರೋಚಕ ಸೋಲು* 67 ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೇರಿದ ಸ್ವಿಟ್ಜರ್‌ಲೆಂಡ್

ಕೋಪೆನ್‌ಹೇಗನ್(ಜೂ.30)‌: ಹಾಲಿ ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಯುರೋ ಕಪ್‌ 2020 ಟೂರ್ನಿಯಿಂದ ಹೊರಬಿದ್ದಿದೆ. ವಿಶ್ವಕಪ್‌ ರನ್ನರ್‌-ಅಪ್‌ ಕ್ರೊವೇಷಿಯಾ ಕೂಡ ಆಘಾತ ಅನುಭವಿಸಿದೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌, ಸ್ವಿಟ್ಜರ್‌ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡರೆ, ಹೆಚ್ಚುವರಿ ಸಮಯದಲ್ಲಿ ಸ್ಪೇನ್‌ಗೆ ಗೋಲು ಬಿಟ್ಟುಕೊಟ್ಟು ಕ್ರೊವೇಷಿಯಾ ನಿರಾಸೆ ಕಂಡಿತು.

ರೊಮೇನಿಯಾದ ರಾಜಧಾನಿ ಬುಚಾರೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ 90 ನಿಮಿಷ, ಹೆಚ್ಚುವರಿ ಸಮಯದ ಬಳಿಕ ಫ್ರಾನ್ಸ್‌ ಹಾಗೂ ಸ್ವಿಟ್ಜರ್‌ಲೆಂಡ್ ಫುಟ್ಬಾಲ್‌ ತಂಡಗಳು 3-3ರಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಸ್ವಿಟ್ಜರ್‌ಲೆಂಡ್ 5-4 ಗೋಲುಗಳ ರೋಚಕ ಗೆಲುವು ಸಾಧಿಸಿ, 67 ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೇರಿತು. ವಿಶ್ವಕಪ್‌ ಫೈನಲ್‌ನಲ್ಲಿ ಗೋಲು ಬಾರಿಸಿದ್ದ ಕಿಲಿಯಾನ್‌ ಎಂಬಾಪೆ, ಶೂಟೌಟ್‌ನಲ್ಲಿ ಗೋಲು ಬಾರಿಸಲು ವಿಫಲರಾಗಿದ್ದು, ಫ್ರಾನ್ಸ್‌ ಸೋಲಿಗೆ ಕಾರಣವಾಯಿತು.

Scroll to load tweet…

ಯುರೋ ಕಪ್‌ ಫುಟ್ಬಾಲ್: ಬೆಲ್ಜಿಯಂ, ಜೆಕ್‌ ರಿಪಬ್ಲಿಕ್‌ ಕ್ವಾರ್ಟರ್‌ಗೆ

ಇನ್ನು, ಡೆನ್ಮಾರ್ಕ್ ರಾಜಧಾನಿ ಕೋಪೆನ್‌ಹೇಗನ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ ಹಾಗೂ ಕ್ರೊವೇಷಿಯಾ ನಿಗದಿತ 90 ನಿಮಿಷಗಳ ಆಟದ ಮುಕ್ತಾಯಕ್ಕೆ 3-3 ಗೋಲುಗಳಲ್ಲಿ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಸಮಯದಲ್ಲಿ 2 ಗೋಲು ಬಾರಿಸಿದ ಸ್ಪೇನ್‌, 5-3ರಲ್ಲಿ ಗೆದ್ದು ಅಂತಿಮ 8ರ ಸುತ್ತಿಗೇರಿತು.