ಯುರೋ ಕಪ್ ಫುಟ್ಬಾಲ್‌: ಇಟಲಿ-ಇಂಗ್ಲೆಂಡ್‌ ಫೈನಲ್‌ಗೆ ಲಗ್ಗೆ

* ಯುರೋ ಕಪ್‌ ಫುಟ್ಬಾಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್

* ಯುರೋ ಕಪ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಇಟಲಿ-ಇಂಗ್ಲೆಂಡ್ ನಡುವೆ ಸೆಣಸಾಟ

* ಸ್ಪೇನ್ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಇಟಲಿ

Euro Cup 2020 England and Italy Football Team Sailed into Final kvn

ಲಂಡನ್(ಜು.08)‌: ಭಾರೀ ಕುತೂಹಲ ಮೂಡಿಸಿದ್ದ ಯುರೋ ಕಪ್‌ ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಿಂದ ಸ್ಪೇನ್‌ ತಂಡವನ್ನು ಮಣಿಸಿದ ಇಟಲಿ ಫೈನಲ್‌ ಪ್ರವೇಶಿಸಿತು. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ಎದರು ಇಂಗ್ಲೆಂಡ್ 2-1 ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತು.

ಇಲ್ಲಿನ ವೆಂಬ್ಲೆ ಕ್ರೀಡಾಂಗಣದಲ್ಲಿ ಮಂಗಳವಾರ ತಡರಾತ್ರಿ ನಡೆದ ಪಂದ್ಯವು ಹೆಚ್ಚುವರಿ ಸಮಯ ನೀಡಿದ ಹೊರತಾಗಿಯೂ 1-1 ಗೋಲುಗಳಿಂದ ಮುಕ್ತಾಯಗೊಂಡಿತು. ಪಂದ್ಯದ 60ನೇ ನಿಮಿಷದಲ್ಲಿ ಗೋಲು ಬಾರಿಸಿದ ಫೆಡೆರಿಕೊ ಚಿಸಾ ಇಟಲಿಗೆ 1-0 ಮುನ್ನಡೆ ತಂದುಕೊಟ್ಟರು. ಆದರೆ, ಬದಲಿ ಆಟಗಾರನಾಗಿ ಕಣಕ್ಕೆ ಇಳಿದಿದ್ದ ಸ್ಪೇನ್‌ನ ಅಲ್ವಾರೊ ಮೊರಾಟಾ 80ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ 1-1 ಸಮಬಲಕ್ಕೆ ಕಾರಣರಾದರು. ಕೊನೆಗೆ ವಿಜೇತರನ್ನು ಆಯ್ಕೆ ಮಾಡಲು ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಕಾಲ್ಚಳಕ ತೋರಿದ ಇಟಲಿ ಆಟಗಾರರು ಫೈನಲ್‌ ಪ್ರವೇಶಿಸಿದರು.

ಯುರೋ ಕಪ್ ಫುಟ್ಬಾಲ್ 2020: ಸೆಮೀಸ್‌ನಲ್ಲಿಂದು ಸ್ಪೇನ್-ಇಟಲಿ ಕಾದಾಟ

ಮತ್ತೊಂದು ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶ ಪಡೆದಿದೆ. ಹೆಚ್ಚುವರಿ ಸಮಯದಲ್ಲಿ ಹ್ಯಾರಿ ಕೇನ್‌ ಬಾರಿಸಿದ ಗೋಲಿನ ಸಹಾಯದಿಂದ ಇಂಗ್ಲೆಂಡ್ ಫುಟ್ಬಾಲ್ ತಂಡವು 1966ರ ವಿಶ್ವಕಪ್‌ ಬಳಿಕ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಗೆಲುವಿನ ಸಿಹಿಯುಂಡಿದೆ.

60 ಸಾವಿರ ಪ್ರೇಕ್ಷಕರು ಸಾಕ್ಷಿಯಾಗಿದ್ದ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ಎದುರು ಇಂಗ್ಲೆಂಡ್ 2-1 ಅಂತರದಲ್ಲಿ ಗೋಲು ದಾಖಲಿಸಿ ಯುರೋ ಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಟೂರ್ನಿ ಆರಂಭದಿಂದಲೂ ಅದ್ಭುತ ಪ್ರದರ್ಶನ ತೋರಿದ್ದ ಡೆನ್ಮಾರ್ಕ್‌ ತಂಡದ ಗೆಲುವಿನ ನಾಗಾಲೋಟ ಸೆಮಿಫೈನಲ್‌ನಲ್ಲಿಯೇ ಅಂತ್ಯವಾಗಿದೆ.
 

Latest Videos
Follow Us:
Download App:
  • android
  • ios