* ಯುರೋ ಕಪ್‌ ಫುಟ್ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಟಲಿ-ಸ್ಪೇನ್‌ ಮುಖಾಮುಖಿ* ಯುರೋಪ್ ಖಂಡದ ಎರಡು ಬಲಿಷ್ಠ ಫುಟ್ಬಾಲ್ ತಂಡಗಳು ಮುಖಾಮುಖಿ* ಸ್ಪೇನ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ

ಲಂಡನ್‌(ಜು.06): ಬಹು ನಿರೀಕ್ಷಿತ 2020 ಯುರೋ ಕಪ್‌ ಫುಟ್ಬಾಲ್‌ ಟೂರ್ನಿಯ ಉಪಾಂತ್ಯಕ್ಕೆ ವೇದಿಕೆ ಸಿದ್ಧವಾಗಿದ್ದು, ರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಂಗಳವಾರ ತಡರಾತ್ರಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಯುರೋಪ್ ಖಂಡದ ಎರಡು ಬಲಿಷ್ಠ ಫುಟ್ಬಾಲ್ ತಂಡಗಳಾದ ಸ್ಪೇನ್‌ ಹಾಗೂ ಇಟಲಿ ಮುಖಾಮುಖಿ ಆಗಲಿವೆ. ಗೆದ್ದ ತಂಡವು ಫೈನಲ್‌ ಪ್ರವೇಶಿಸಲಿದೆ. ಆರಂಭಿಕ ಆಘಾತದ ಬಳಿಕ ಪುಟಿದೆದ್ದ ಸ್ಪೇನ್‌ ಯುರೋ ಕಪ್‌ ಪಂದ್ಯಾವಳಿಯುದ್ದಕ್ಕೂ ಬಲಿಷ್ಠ ಪ್ರದರ್ಶನ ತೋರಿದೆ. ಕಳೆದ ಮೂರು ಪಂದ್ಯಗಳಲ್ಲಿ 11 ಗೋಲು ದಾಖಲಿಸಿದ್ದು, ಲೂಯಿಸ್ ಎನ್ರಿಕ್‌ ಪ್ರಮುಖ ಟ್ರಂಪ್ ಕಾರ್ಡ್‌ ಆಟಗಾರನಾಗಿದ್ದಾರೆ. 

Scroll to load tweet…

ಯುರೋ ಕಪ್‌: ಸೆಮೀಸ್‌ಗೆ ಇಂಗ್ಲೆಂಡ್‌, ಡೆನ್ಮಾರ್ಕ್ ಲಗ್ಗೆ

ಎರಡು ತಂಡಗಳು ಇದುವರೆಗೂ 34 ಬಾರಿ ಮುಖಾಮುಖಿ ಆಗಿದ್ದು, ಸ್ಪೇನ್‌ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇಟಲಿ 9 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, ಉಳಿದ 13 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಲಂಡನ್‌ನ ವೆಂಬ್ಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಪಂದ್ಯ ಆರಂಭ: ರಾತ್ರಿ 12.30