* ಇಂಗ್ಲೆಂಡ್ ಮಣಿಸಿ ಯುರೋ ಕಪ್‌ ಚಾಂಪಿಯನ್‌ ಆದ ಇಟಲಿ ಫುಟ್ಬಾಲ್ ತಂಡ* ಪೆನಾಲ್ಟಿ ಶೂಟೌಟ್‌ ಮೂಲಕ ಗೆದ್ದ ಇಟಲಿ ತಂಡ* ಟ್ರೋಫಿಯೊಂದಿಗೆ ರೋಮ್‌ಗೆ ಮರಳಿದ ಇಟಲಿ ತಂಡಕ್ಕೆ ಅಭಿಮಾನಿಗಳಿಂದ ಭವ್ಯ ಸ್ವಾಗತ

ರೋಮ್‌(ಜು.13): 53 ವರ್ಷಗಳ ಬಳಿಕ ಯುರೋ ಕಪ್‌ ಗೆದ್ದ ಇಟಲಿ ತಂಡ ಸೋಮವಾರ ತವರಿಗೆ ವಾಪಸಾಯಿತು. ಇಂಗ್ಲೆಂಡ್ ವಿರುದ್ದ ನಡೆದ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ ಮೂಲಕ ಇಟಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಎರಡನೇ ಬಾರಿಗೆ ಇಟಲಿ ತಂಡವು ಯುರೋ ಕಪ್‌ ಚಾಂಪಿಯನ್ ಆಗಿ ಹೊರಹೊಮ್ಮಿತು.

ರೋಮ್‌ ನಗರದ ಬೀದಿ ಬೀದಿಗಳಲ್ಲಿ ಭಾನುವಾರ ರಾತ್ರಿಯಿಂದಲೇ ಭರ್ಜರಿ ಸಂಭ್ರಮಾಚರಣೆಯಿಂದ ತೊಡಗಿದ್ದ ಸಾವಿರಾರು ಫುಟ್ಬಾಲ್‌ ಅಭಿಮಾನಿಗಳು, ಚಾಂಪಿಯನ್‌ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಿದರು. ನಾಯಕ ಜಾರ್ಜಿಯೊ ಚಿಯೆಲಿನಿ ಟ್ರೋಫಿಯನ್ನು ಅಭಿಮಾನಿಗಳತ್ತ ತೋರಿಸಿ ಸಂಭ್ರಮದಲ್ಲಿ ಭಾಗಿಯಾದರು.

Scroll to load tweet…
Scroll to load tweet…

ಇಂಗ್ಲೆಂಡ್ ಮಣಿಸಿ ಯುರೋ ಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿ

ಕೋವಿಡ್‌ ಬಳಿಕ ಇಟಲಿಯಲ್ಲಿ ಈ ರೀತಿಯ ಜನಸಾಗರ ಕಂಡುಬಂದಿದ್ದು ಇದೇ ಮೊದಲು. ಸಾವಿರಾರು ಜನ ಒಂದೇ ಕಡೆ ಸೇರಿ ಕುಣಿದು ಕುಪ್ಪಳ್ಳಿಸಿದ್ದು ಕೊರೋನಾ ಆತಂಕವನ್ನು ಮತ್ತಷ್ಟುಹೆಚ್ಚಿಸಿತು.

ಟಿಕೆಟ್‌ ಇಲ್ಲದವರೂ ಕ್ರೀಡಾಂಗಣಕ್ಕೆ ನುಗಿದರು!

Scroll to load tweet…

ಫೈನಲ್‌ ಪಂದ್ಯದ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದವು. ಟಿಕೆಟ್‌ ಖರೀದಿಸದೆ ಇರುವ ನೂರಾರು ಅಭಿಮಾನಿಗಳು ವೆಂಬ್ಲಿ ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದರು. ಕೆಲವರು ಯಶಸ್ವಿಯಾದರೆ, ಇನ್ನೂ ಕೆಲವರನ್ನು ಭದ್ರತಾ ಸಿಬ್ಬಂದಿ ತಡೆದು ಹೊರಗಟ್ಟಿದರು.ಇನ್ನು ಕ್ರೀಡಾಂಗಣದ ಸುತ್ತ ಮುತ್ತಲಿನ ರಸ್ತೆಗಳಲ್ಲೂ ಸಾವಿರಾರು ಜನ ನೆರೆದಿದ್ದರು. ಮದ್ಯಪಾನ ಮಾಡಿ ರಸ್ತೆಗಳಲ್ಲೇ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ಕಂಡುಬಂತು.