ಡುರಾಂಡ್ ಕಪ್: ಸೆಮೀಸ್‌ನಲ್ಲಿ ಬಿಎಫ್‌ಸಿಗೆ ಸೋಲು, ಫೈನಲ್‌ಗೆ ಲಗ್ಗೆಯಿಟ್ಟ ಗೋವಾ
* ಡುರಾಂಡ್ ಕಪ್ ಸೆಮೀಸ್‌ನಲ್ಲಿ ಮುಗ್ಗರಿಸಿ ಬಿಎಫ್‌ಸಿ
* ಗೋವಾ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡ ಚೆಟ್ರಿ ಪಡೆ
* ಸೆಮೀಸ್‌ನಲ್ಲೇ ಹೊರಬಿದ್ದ ಬೆಂಗಳೂರಿನ 2 ತಂಡಗಳು
ಕೋಲ್ಕತ(ಸೆ.30): ಡುರಾಂಡ್ ಕಪ್ (Durand Cup) ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ (Bengaluru FC) ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 6-7ರ ಅಂತರದಲ್ಲಿ ಎಫ್‌ಸಿ ಗೋವಾ (FC Goa) ವಿರುದ್ಧ ಸೋತು ಹೊರಬಿದ್ದಿದೆ. ಡುರಾಂಡ್ ಕಪ್ ಟೂರ್ನಿಯಲ್ಲಿ ಗೋವಾ ಎಫ್‌ಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ
ನಿಗದಿತ 90 ನಿಮಿಷಗಳಲ್ಲಿ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದವು. 30 ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಗೋವಾ ತಂಡವು ಭರ್ಜರಿ ಗೆಲುವು ಸಾಧಿಸುವ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಡುರಾಂಡ್ ಕಪ್: ಸೆಮೀಸ್‌ನಲ್ಲಿ ಎಫ್‌ಸಿ ಬೆಂಗ್ಳೂರಿಗೆ ಸೋಲು..!
ಬೆಂಗಳೂರಿನ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿವೆ. ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮೆಡನ್ ಸ್ಪೂರ್ಟಿಂಗ್ ಕ್ಲಬ್ ಎದುರು ಶರಣಾಗಿತ್ತು. ಇದೀಗ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಗೋವಾ ಎದುರು ತಲೆಬಾಗಿದೆ. ಇದೀಗ ಅಕ್ಟೋಬರ್ 3ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮೊಹಮೆಡನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಎಫ್‌ಸಿ ಗೋವಾ ಸೆಣಸಲಿವೆ.
ಬಾಸ್ಕೆಟ್‌ಬಾಲ್: ಭಾರತ ತಂಡಕ್ಕೆ 3ನೇ ಸೋಲು
ಅಮ್ಮಾನ್(ಜೋರ್ಡನ್): ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭಾರತ ತಂಡ ಸತತ 3ನೇ ಸೋಲು ಅನುಭವಿಸಿದೆ. ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 49-109 ಅಂಕಗಳಲ್ಲಿ ಸೋಲು ಅನುಭವಿಸಿತು. 8 ತಂಡಗಳ ಟೂರ್ನಿಯಲ್ಲಿ ಭಾರತ 7 ಇಲ್ಲವೇ 8ನೇ ಸ್ಥಾನಕ್ಕಾಗಿ ಸೆಣಸಲಿದೆ.