* ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ  ಬೆಂಗಳೂರು ಯುನೈಟೆಡ್ ಸೆಮೀಸ್‌ಗೆ ಲಗ್ಗೆ* ಆರ್ಮಿ ರೆಡ್‌ ತಂಡದ ಸದಸ್ಯರಲ್ಲಿ ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಜಾಕ್‌ಪಾಟ್‌* ಗೋವಾ ಮತ್ತು ಡೆಲ್ಲಿ ಎಫ್‌ಸಿ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯವು ನಿಗದಿಯಂತೆ ಶುಕ್ರವಾರ ನಡೆಯಲಿದೆ

ಕೋಲ್ಕತಾ(ಸೆ.24): ತಂಡದ ಸದಸ್ಯರಲ್ಲಿ ಕೋವಿಡ್‌ ಪತ್ತೆಯಾದ ಹಿನ್ನೆಲೆಯಲ್ಲಿ ಆರ್ಮಿ ರೆಡ್‌ ತಂಡವು ಡುರಾಂಡ್‌ ಕಪ್‌ ಟೂರ್ನಿ(Durand Cup)ಯ ಕ್ವಾರ್ಟರ್‌ಫೈನಲ್‌ ಪಂದ್ಯದಿಂದ ಹಿಂದೆ ಸರಿದಿದ್ದು, ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ(Bengaluru United ) ಸೆಮಿಫೈನಲ್‌ ಪ್ರವೇಶಿಸಿದೆ.

‘ಆರ್ಮಿ ರೆಡ್‌(Army Red) ತಂಡದ ಸದಸ್ಯರಲ್ಲಿ ಕೋವಿಡ್‌ ಕಾಣಿಸಿಕೊಂಡ ಕಾರಣ ಶುಕ್ರವಾರ ಬೆಂಗಳೂರು ಯುನೈಟೆಡ್‌ ವಿರುದ್ಧ ನಡೆಯಬೇಕಿದ್ದ ಪಂದ್ಯ ರದ್ದುಗೊಳಿಸಲಾಗಿದೆ. ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಡುರಾಂಡ್‌ ಕಪ್‌ನ ಸ್ಥಳೀಯ ಆಯೋಜಕ ಸಮಿತಿ(ಎಲ್‌ಒಸಿ) ತಿಳಿಸಿದೆ. ಗೋವಾ ಮತ್ತು ಡೆಲ್ಲಿ ಎಫ್‌ಸಿ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯವು ನಿಗದಿಯಂತೆ ಶುಕ್ರವಾರ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Scroll to load tweet…
Scroll to load tweet…

ವಿಶ್ವ ಆರ್ಚರಿ: ಮಹಿಳಾ ತಂಡ ಫೈನಲ್‌ಗೆ ಲಗ್ಗೆ

ಯಾಂಕ್ಟನ್‌(ಅಮೆರಿಕಾ): ಸೆಮಿಫೈನಲ್‌ನಲ್ಲಿ ಆತಿಥೇಯ ಅಮೆರಿಕಾವನ್ನು 226-225 ಅಂತರದಿಂದ ಮಣಿಸಿದ ಭಾರತ ಮಹಿಳಾ ತಂಡ ಆರ್ಚರಿ(Archery) ವಿಶ್ವಕಪ್‌ನ 8ನೇ ಹಂತದ ಕಾಪೌಂಡ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದೆ. ಆದರೆ ಪುರುಷರ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ನಿರಾಸೆ ಅನುಭವಿಸಿದೆ.

8ನೇ ಆವೃತ್ತಿಯ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ವೇಳಾಪಟ್ಟಿ ಪ್ರಕಟ

ಪ್ರಿಯಾ ಗುರ್ಜರ್‌, ಮುಸ್ಕಾನ್‌ ಕಿರಾರ್‌ ಹಾಗೂ ಜ್ಯೋತಿ ಸುರೇಖಾ ಅವರನ್ನೊಳಗೊಂಡ ಮಹಿಳಾ ತಂಡ ಅಮೆರಿಕಾ ವಿರುದ್ಧ ಜಯ ಸಾಧಿಸಿತು. ಭಾರತ ಫೈನಲ್‌ನಲ್ಲಿ ಕೊಲಂಬಿಯಾದ ವಿರುದ್ಧ ಸ್ಪರ್ಧಿಸಲಿದೆ. ಅಭಿಷೇಕ್‌ ವರ್ಮಾ ನೇತೃತ್ವದ ಪುರುಷರ ತಂಡ ಆಸ್ಟ್ರಿಯಾದ ವಿರುದ್ಧ 235-238 ಅಂಕಗಳಿಂದ ಸೋಲುಂಡಿತು.

ವರ್ಮಾ ಹಾಗೂ ಸುರೇಖಾ ಅವರ ಮಿಶ್ರ ತಂಡ ಕೊರಿಯಾದ ತಂಡದ ವಿರುದ್ಧ 159-156 ಅಂತರರಿಂದ ಗೆದ್ದು ಫೈನಲ್‌ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ಕೊಲಂಬಿಯಾ ಸವಾಲನ್ನು ಭಾರತ ಎದುರಿಸಲಿದೆ.