FIFA World Cup Qatar 2022: ಇಲ್ಲಿದೆ ನೋಡಿ ಸ್ಟೇಡಿಯಂನ 'ಕೂಲ್ ಸ್ಟೋರಿ'ಯ ಇಂಟ್ರೆಸ್ಟಿಂಗ್ ಮಾಹಿತಿ
* 2022ರಲ್ಲಿ ಕತಾರ್‌ನಲ್ಲಿ ನಡೆಯಲಿದೆ ಫಿಫಾ ವಿಶ್ವಕಪ್ ಟೂರ್ನಿ
* ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯ ಸ್ಟೇಡಿಯಂನಲ್ಲಿ ನಡೆಯಲಿದೆ ಫುಟ್ಬಾಲ್ ವಿಶ್ವಕಪ್
* ಕೂಲಿಂಗ್ ಟೆಕ್ನಾಲಜಿಯ ಜನಕ ಡಾ. ಸವೊದ್ ಘನಿ ಅವರಿಂದ ಇದರ ಸೀಕ್ರೇಟ್ ಬಯಲು
ಬೆಂಗಳೂರು(ಮಾ.12): ಬಹುನಿರೀಕ್ಷಿತ 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ (FIFA World Cup 2022) ಕತಾರ್ ಆತಿಥ್ಯವನ್ನು ವಹಿಸಿದ್ದು, ನವೆಂಬರ್ 21ರಿಂದ ಡಿಸೆಂಬರ್ 18ರವರೆಗೆ ಫುಟ್ಬಾಲ್ ಮಹಾಸಂಗ್ರಾಮ ಜರುಗಲಿದೆ. ಈ ಬಾರಿಯ ಫುಟ್ಬಾಲ್ ವಿಶ್ವಕಪ್ ಟೂರ್ನಿಯು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಈ ಪೈಕಿ ಸ್ಟೇಡಿಯಂನ 'ಕೂಲ್ ' ಕೂಡಾ ಒಂದು.
ಫುಟ್ಬಾಲ್ ಸ್ಟೇಡಿಯಂನ (Football Stadium) ಕೂಲಿಂಗ್ ಟೆಕ್ನಾಲಜಿಯ ಮಾಸ್ಟರ್ ಮೈಂಡ್ ಯಾರು ಎನ್ನುವುದು ಇದೀಗ ಬಹಿರಂಗವಾಗಿದೆ. 'ಡಾ. ಕೂಲ್' ಖ್ಯಾತಿಯ ಡಾ. ಸವೊದ್ ಘನಿ ಎನ್ನುವವರೇ ಈ ಸ್ಟೇಡಿಯಂ ಕೂಲಿಂಗ್ ಟೆಕ್ನಾಲಜಿಯ ಜನಕರಾಗಿದ್ದಾರೆ. ಡಾ. ಸವೊದ್ ಘನಿ (Dr Saud Ghani), ಕತಾರ್ ವಿಶ್ವವಿದ್ಯಾನಿಲಯದ ಮೆಕಾನಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದು, ಇವರ ನೇತೃತ್ವದಲ್ಲಿ ಕತಾರ್ ನ್ಯಾಷನಲ್ ರಿಸರ್ಚ್ ಫಂಡ್(QNRF)ನಲ್ಲಿ ಸಂಶೋಧನೆ ನಡೆಸಿ ಈ ಕೂಲಿಂಗ್ ತಂತ್ರಾಜ್ಞಾನವನ್ನು ಕಂಡು ಹಿಡಿಯಲಾಗಿದ್ದು, ಇದು ಮುಂಬರುವ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಅಳವಡಿಸಲಾಗುತ್ತದೆ.
ಮುಕ್ತ ಸ್ಟೇಡಿಯಂನಲ್ಲಿ ಎಲ್ಲರಿಗೂ ಪ್ರಯೋಜನಕ್ಕೆ ಬರುವ ಹವಾನಿಯಂತ್ರಿತ ವ್ಯವಸ್ಥೆಯನ್ನು ರೂಪಿಸುವುದು ಎಲ್ಲರಿಗೂ ದೊಡ್ಡ ಸವಾಲಾಗಿತ್ತು. ಈ ಮೊದಲು ದೊಡ್ಡ ದೊಡ್ಡ ಸಂಸ್ಥೆಗಳೇ ಸ್ಟೇಡಿಯಂನಲ್ಲಿ ಹವಾನಿಯಂತ್ರಿತ ವ್ಯವಸ್ಥೆ ರೂಪಿಸಲು ಮುಂದಾಗಿರಲಿಲ್ಲ. ಹೀಗಾಗಿ ನಾವು ದೀರ್ಘಕಾಲ ಬಾಳಿಕೆ ಬರಬಲ್ಲ ತಂತ್ರಜ್ಞಾನವನ್ನು ನಾವು ಕಂಡು ಹಿಡಿದಿದ್ದೇವೆ ಎಂದು ಡಾ. ಸವೊದ್ ಘನಿ ಹೇಳಿದ್ದಾರೆ.
ಡಾ. ಸವೊದ್ ಘನಿ ಅವರದ್ದು ಮೊದಲು ಸ್ಟೇಡಿಯಂನಲ್ಲಿ ಮೈಕ್ರೋ ಕ್ಲೈಮೇಟ್ ಬಬಲ್ ವ್ಯವಸ್ಥೆಯೊಳಗೆ ಹವಾ ನಿಯಂತ್ರಿತ ವ್ಯವಸ್ಥೆಯನ್ನು ರೂಪಿಸುವುದಾಗಿತ್ತು. ಆದರೆ ಮುಕ್ತ ಸ್ಟೇಡಿಯಂನಲ್ಲಿ ಏರ್ ಕಂಡೀಷನಿಂಗ್ ರೂಪಿಸುವುದು ದಿನ ಕಳೆದಂತೆ ಅತಿ ಕಠಿಣ ಎನಿಸತೊಡಗಿತು. ಅದರಲ್ಲೂ ಮುಕ್ತ ಸ್ಟೇಡಿಯಂನಲ್ಲಿ ಏರ್ ಕಂಡೀಷನಿಂಗ್ ವ್ಯವಸ್ಥೆ ರೂಪಿಸಲು ಎದುರಾದ ದೊಡ್ಡ ಸವಾಲೆಂದರೆ, ಹೊರಗಿನಿಂದ ಬರುವ ಬಿಸಿ ಗಾಳಿಯನ್ನು ತಡೆಯುವುದಾಗಿತ್ತು. ಈ ಕುರಿತಂತೆ ಹೆಚ್ಚಿನ ಸಂಶೋದನೆಯನ್ನು ನಡೆಸಿ ಒಂದು ತೀರ್ಮಾನಕ್ಕೆ ಬರಲಾಯಿತು ಎಂದು ತಿಳಿಸಿದ್ದಾರೆ.
2022ರಲ್ಲಿ ಭಾರತದಲ್ಲಿ ಫಿಫಾ ಅಂಡರ್ 17 ವಿಶ್ವಕಪ್
ಇದಾದ ಬಳಿಕ ಡಾ. ಸವೊದ್ ಘನಿ ಅವರ ತಂಡವು ವಿಶ್ವಕಪ್ ಜರುಗುವ ಸ್ಟೇಡಿಯಂನ 3D ಪ್ರಿಟಿಂಗ್ ಪಡೆದು ಆಯ್ದ ಭಾಗಗಳಲ್ಲಿ ಗಾಳಿ ಸುರಂಗವನ್ನು ತೆರೆದು ಹೇಗೆ ಬಿಸಿ ಗಾಳಿ ಸ್ಟೇಡಿಯಂನೊಳಗೆ ಬರುವಾಗ ತಂಪು ಮಾಡಬಹುದು ಎನ್ನುವುದರ ಕುರಿತಂತೆ ಕಾರ್ಯಾಚರಣೆಯನ್ನು ಆರಂಭಿಸಿದರು. ಇದಾದ ಬಳಿಕ ನಡೆಸಿದ ಪ್ರಯೋಗದಲ್ಲಿ ಹೊರಗಿನ ಬಿಸಿ ಗಾಳಿ ಗಾಳಿ ಸುರಂಗದ ಒಳಗೆ ಬಂದ ಬಳಿಕ ಯಾವ ಪ್ರಮಾಣದಲ್ಲಿ ಒತ್ತಡದ ವೇಗವನ್ನು ಹೆಚ್ಚಿಸಿದರೆ, ಬಿಸಿ ಗಾಳಿಯ ವೇಗದ ದಿಕ್ಕನ್ನು ಬದಲಿಸಬಹುದು ಎನ್ನುವುದರ ಕುರಿತಂತೆ ಹೆಚ್ಚಿನ ಸಂಶೋದನೆಯನ್ನು ನಡೆಸಲಾಯಿತು. ಇದಾದ ಬಳಿಕ ನಾವು ಲೇಸರ್ ಶೀಟ್‌ಗಳನ್ನು ಹಾಗೂ ಕ್ಯಾಮರಾಗಳನ್ನು ಬಳಸಿ ಗಾಳಿಯ ವೇಗದ ಆಧಾರದ ಮೇಲೆ ಸ್ಟೇಡಿಯಂ ಒಳಗೆ ಬರುವ ಹಾಗೂ ಹೊರಗೆ ಹೋಗುವ ಗಾಳಿಯ ವಾತಾವರಣವನ್ನು ಕಂಡು ಹಿಡಿಯಲಾಯಿತು ಎಂದು ಡಾ. ಸವೊದ್ ಘನಿ ಹೇಳಿದ್ದಾರೆ.
ಈ ಎಲ್ಲಾ ಮಾದರಿಗಳನ್ನು ತಂತ್ರಜ್ಞಾನದಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಬಳಿಕ, ಮೊದಲ ಬಾರಿಗೆ ನಾವು ಸ್ಟೇಡಿಯಂನಲ್ಲಿ ಇದರ ಟೆಸ್ಟ್ ಆರಂಭಿಸಿದರು. ಆಗಲೇ ಡಾ. ಸವೊದ್ ಘನಿ ಅವರಿಗೆ ಅನಿಸಿದ್ದು, ಇದೊಂದು 'ಯುರೇಕಾ' ಎಂದು. ಯಾಕೆಂದರೆ ಅವರು ಮಾಡಲು ಹೊರಟಿದ್ದು ಮೈಕ್ರೋ ಕ್ಲೈಮೇಟ್ ಏರ್ ಕಂಡೀಷನಿಂಗ್. ಆದರೆ ಪ್ರಯೋಗಕ್ಕೆ ಒಳಪಡಿಸಿದ ಬಳಿಕವಷ್ಟೇ ಅವರಿಗೆ ಅರ್ಥವಾಗಿದ್ದು, ಇದರಿಂದ ಇಡೀ ಸ್ಟೇಡಿಯಂ ಕೂಲ್ ಆಗಿರಲಿದೆ ಎಂದು. ನಾವು ಈ ತಂತ್ರಜ್ಞಾನವನ್ನು ಅಳವಡಿಸಲು ಹೊರಟಾಗ ಫುಟ್ಬಾಲ್ ಮೈದಾನದಿಂದ ಎರಡು ಮೀಟರ್ ಎತ್ತರದ ವರೆಗೆ ಏರ್ ಕೂಲಿಂಗ್ ವ್ಯವಸ್ಥೆ ಮಾಡುವ ಗುರಿಯನ್ನು ಹೊಂದಿದ್ದೆವು. ಆದರೆ ಒಳಬರುವ ತಂಪಾದ ಗಾಳಿಯು ಇಡೀ ಸ್ಟೇಡಿಯಂ ಸಾಕಾಗುವಷ್ಟು ಬಳಸಿಕೊಳ್ಳಬಹುದು. ತಂಪಿನ ಪ್ರಮಾಣವನ್ನು ನಾವು ಹೆಚ್ಚಿಸಬಹುದು ಹಾಗೂ ನಿಯಂತ್ರಿಸಲೂ ಬಹುದು ಎಂದು ಡಾ. ಸವೊದ್ ಘನಿ ಹೇಳಿದ್ದಾರೆ.