ಪೋರ್ಚುಗಲ್(ಆ.03): ಯುವೆಂಟಸ್ ಫುಟ್ಬಾಲ್ ಕ್ಲಬ್ ತಂಡ ನಾಯಕ, ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಹಲವು ದುಬಾರಿ ಕಾರುಗಳಿವೆ. ಈ ಸಾಲಿಗೆ ಮತ್ತೊಂದು ಕಾರು ಸೇರಿಕೊಂಡಿದೆ. ವಿಶ್ವದಲ್ಲೇ ಈ ಕಾರು ಕೇವಲ 10 ಮಂದಿಯಲ್ಲಿ ಮಾತ್ರವಿದೆ. ಹೌದು. ಬುಗಾಟಿ ಲಾ ವೊಯ್ಚರ್ ನೊಯ್ರ್ ಕಾರನ್ನು ಕ್ರಿಸ್ಟಿಯಾನೋ ರೋನಾಲ್ಡೋ ಖರೀದಿಸಿದ್ದಾರೆ. 

ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

ಬುಗಾಟಿ ಲಾ ವೊಯ್ಚರ್ ನೊಯ್ರ್  ಕಾರಿನ ಬೆಲೆ ಬರೋಬ್ಬರಿ 8.5 ಮಿಲಿಯನ್ ಯುರೋ. ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಸರಿಸುಮಾರು 75 ಕೋಟಿ ರೂಪಾಯಿ. ಈ ಕಾರು ಖರೀದಿಸಿದ ಬಳಿಕ ಕ್ರಿಸ್ಟಿಯಾನೋ ರೋನಾಲ್ಡ್ ಬಳಿ ಇರುವ ಕಾರಿನ ಒಟ್ಟು ಮೌಲ್ಯ 30 ಮಿಲಿಯನ್ ಯುರೋ. ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 264 ಕೋಟಿ ರೂಪಾಯಿ.

 

 
 
 
 
 
 
 
 
 
 
 
 
 

You choose the view 😉😅

A post shared by Cristiano Ronaldo (@cristiano) on Jul 31, 2020 at 9:32am PDT

ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ ಗೊತ್ತಾ?.

ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಇರುವ ದುಬಾರಿ ಕಾರು:
ಬುಗಾಟಿ ವೆಯ್ರಾನ್ ಗ್ರ್ಯಾಂಡ್ ಸ್ಪೋರ್ಟ್ಸ್, ಫೆರಾರಿ 599 GTO, ಲ್ಯಾಂಬೋರ್ಗಿನಿ ಅವೆಂಟಡೂರ್, ಮೆಕ್ಲೆರೆನ್  MP4 12C ಸೇರಿದಂತೆ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರು ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಇವೆ. ಇಷ್ಟೇ ಅಲ್ಲ ಪ್ರವೇಟ್ ಜೆಟ್ ಕೂಡ ಹೊಂದಿದ್ದಾರೆ. 53 ಕೋಟಿ ರೂಪಾಯಿ ಮೌಲ್ಯದ ವಿಹಾರ ನೌಕೆ ಕೂಡ ರೋನಾಲ್ಡೋ ಬಳಿ ಇದೆ.

ಕ್ರಿಸ್ಟಿಯಾನೋ ರೋನಾಲ್ಡೋ ಸದ್ಯ ಇಟಲಿಯ ಪ್ರಖ್ಯಾತ ಕ್ಲಬ್ ಯುವೆಂಟಸ್ ಪರ ಆಡುತ್ತಿದ್ದಾರೆ. ಯುವೆಂಟಸ್ ಸತತ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕ್ರಿಸ್ಟಿಯಾನೋ ರೋನಾಲ್ಡೋ  ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಂಡ ಇತ್ತೀಚೆಗೆ 36ನೇ ಚಾಂಪಿಯನ್‌ಶಿಪ್ ಗೆದ್ದುಕೊಂಡಿತ್ತು. ಇದರ ಬೆನ್ನಲ್ಲೇ ರೋನಾಲ್ಡೋ ಈ ಕಾರು ಖರೀದಿಸಿದ್ದಾರೆ.