ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ ಗೊತ್ತಾ?

FIFA 2018 World Cup: Car collection of Cristiano Ronaldo
Highlights

ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವದ ಶ್ರೀಮಂತ ಕ್ರೀಡಾಪಟು.  ಪ್ರೈವೈಟ್ ಜೆಟ್ ವಿಮಾನ ಹೊಂದಿರೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ? ಇಲ್ಲಿದೆ ವಿವರ
 

ಪೋರ್ಚುಗಲ್(ಜೂ.24): ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಅಗ್ರಸ್ಥಾನದಲ್ಲಿದ್ದಾರೆ. ರೋನಾಲ್ಡೋ ವಾರದ ಸಂಭಾವನೆ 3.28 ಕೋಟಿ. ರಿಚೆಸ್ಟ್ ಅಥ್ಲೀಟ್ ಆಗಿರೋ ರೋನಾಲ್ಡೋ ಬಳಿ ಓಟ್ಟು 19 ದುಬಾರಿ ಕಾರುಗಳಿವೆ.

ರೋನಾಲ್ಡೋ ಬಳಿ ಬುಗಾಟಿ ವೆಯ್‌ರಾನ್, ಲ್ಯಾಂಬೋರ್ಗಿನಿ ಅವೆಂಟಡರ್, ಬೆಂಟ್ಲಿ ಜಿಟಿ ಸ್ಪೀಡ್, ಆಸ್ಟನ್ ಮಾರ್ಟಿನ್ ಡಿಬಿ9, ಆಡಿ ಆರ್8, ಫೆರಾರಿ 599 ಜಿಟಿಓ, ಫೆರಾರಿ 599 ಜಿಟಿಬಿ, ಫೆರಾರಿ ಎಫ್430, ರಾಲ್ಸ್ ರಾಯ್ಸ್ ಫ್ಯಾಂಟಮ್, ಮೆಸರಾಟಿ ಗ್ರ್ಯಾನ್‌ಕಾಬ್ರಿಯೋ , ಬಿಎಮ್‌ಡಬ್ಲೂ ಎಮ್6, ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ, ಮರ್ಸಿಡೀಸ್ ಬೆಂಝ್ ಸಿ ಕ್ಲಾಸ್ ಸ್ಪೋರ್ಟ್ಸ್, ಪೋರ್ಶೆ ಸೈಯೆನಾ, ಪೋರ್ಶೆ 911, ಪೋರ್ಶೆ ಟರ್ಬೋ, ಆಡಿ ಕ್ಯೂ7, ಆಡಿ ಆರ್‌ಎಸ್6, ಮರ್ಸಡೀಸ್ ಬೆಂಝ್ ಸಿ220 ಸೇರಿದಂತೆ 19 ದುಬಾರಿ ಕಾರುಗಳಿವೆ.

ರೋನಾಲ್ಡೋ ಬಳಿ ಕಾರು ಮಾತ್ರವಲ್ಲ, ಒಂದು ಪ್ರವೈಟ್ ಜೆಟ್ ವಿಮಾನ ಕೂಡ ಇದೆ. ಸಿಆರ್7 ಹೆಸರಿನ ಕಸ್ಟಮೈಸಡ್ ಜೆಟ್ ವಿಮಾನದಲ್ಲಿ ರೋನಾಲ್ಡೋ ಹೆಚ್ಚು ಪ್ರಯಾಣ ಮಾಡುತ್ತಾರೆ. 

loader