ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸುತ್ತಿರುವ ಕ್ರಿಸ್ಟಿಯಾನೋ ರೋನಾಲ್ಡೋಗೆ ಶಾಕ್ ಎದುರಾಗಿದೆ. ಅನುಚಿತ ವರ್ತನೆ ತೋರಿದ ಪ್ರಕರಣದಿಂದ ಎರಡು ಪಂದ್ಯದಿಂದ ನಿಷೇಧ ಹಾಗೂ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಖತಾರ್(ನ.24): ಫಿಫಾ ವಿಶ್ವಕಪ್ 2022ರ ಟೂರ್ನಿಯಲ್ಲಿ ಪೋರ್ಚುಗಲ್ ತಂಡ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ನಾಯಕತ್ವದ ಪೋರ್ಚುಗಲ್ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ನಾಯಕ ರೋನಾಲ್ಡೋಗೆ ಹಿನ್ನಡೆಯಾಗಿದೆ. ಹಳೆ ಪ್ರಕರಣದಲ್ಲಿ ರೋನಾಲ್ಡೋ ನಿಯಮ ಮೀರಿ ವರ್ತಿಸಿರುವುದು ಸಾಬೀತಾಗಿದೆ. ಹೀಗಾಗಿ ಎರಡು ಪಂದ್ಯ ಆಡದಂತೆ ನಿಷೇಧಿಸಲಾಗಿದೆ. ಇಷ್ಟೇ ಅಲ್ಲ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಎರಡು ಪಂದ್ಯದ ನಿಷೇಧ ಫಿಫಾ ವಿಶ್ವಕಪ್ ಟೂರ್ನಿಗೆ ಅನ್ವಯವಾಗುವುದಿಲ್ಲ. ಕ್ಲಬ್ ಫುಟ್ಬಾಲ್ ತಂಡಕ್ಕೆ ಅನ್ವಯವಾಗಲಿದೆ. 

2022ರ ಎಪ್ರಿಲ್ ತಿಂಗಳಳಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದರು. ಲೀಗ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಎವರ್ಟನ್ ಎಫ್‍ಸಿ ವಿರುದ್ದ ಮುಗ್ಗರಿಸಿತ್ತು. 0- 1ಅಂತರದಲ್ಲಿ ಸೋಲು ಕಂಡಿತ್ತು. ಇದು ಕ್ರಿಸ್ಟಿಯಾನೋ ರೋನಾಲ್ಡೋ ಅಸಮಾಧಾನಕ್ಕೆ ಕಾರಣವಾಗಿತ್ತು. ಮೈದಾನದಿಂದ ಹೊರಹೋಗುತ್ತಿರುವ ವೇಳೆ ಫೋಟೋ ಕ್ಲಿಕ್ಕಿಸಲು ಬಂದ ಅಭಿಮಾನಿಯ ಮೇಲೂ ಸಿಟ್ಟಾದ ರೋನಾಲ್ಡೋ, ಅಭಿಮಾನಿಯ ಫೋನ್ ಕಿತ್ತು ನೆಲಕ್ಕೆ ಎಸೆದಿದ್ದರು.

FIFA World Cup ಇಂದು ಮತ್ತೆ ಬಲಿಷ್ಠ ತಂಡಗಳ ಪೈಪೋಟಿ: ಬ್ರೆಜಿಲ್, ಪೋರ್ಚುಗಲ್, ಉರುಗ್ವೆ ಶುಭಾರಂಭ ನಿರೀಕ್ಷೆ

ಈ ಘಟನೆಯನ್ನು ಲೀಗ್ ಫುಟ್ಬಾಲ್ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿತ್ತು. ಈ ಕುರಿತು ವಿಚಾರಣೆ ನಡೆಸಿದೆ. ವಿಚಾರಣೆಯಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಫುಟ್ಬಾಲ್ ಇ3 ನಿಯಮ ಮೀರಿರುವುದು ಖಚಿತವಾಗಿದೆ. ಹೀಗಾಗಿ ಇದೀಗ ಶಿಕ್ಷೆ ಪ್ರಕಟಗೊಂಡಿದೆ. 50 ಲಕ್ಷ ರೂಪಾಯಿ ದಂಡ ಹಾಗೂ 2 ಪಂದ್ಯದ ನಿಷೇಧ ಶಿಕ್ಷೆ ನೀಡಲಾಗಿದೆ. ಸದ್ಯ ಕ್ರಿಸ್ಟಿಯಾನೋ ರೋನಾಲ್ಡೋ ಮ್ಯಾಂಚೆಸ್ಟರ್ ತಂಡ ತೊರೆದಿದ್ದಾರೆ. ಶೀಘ್ರದಲ್ಲೇ ಹೊಸ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ರೋನಾಲ್ಡೋ ಯಾವ ತಂಡ ಸೇರಿಕೊಳ್ಳುತ್ತಾರೋ, ಕ್ಲಬ್ ಪರ ಆರಂಭಿಕ ಎರಡು ಪಂದ್ಯ ಆಡುವಂತಿಲ್ಲ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ರೋನಾಲ್ಡೋ ನಾಯಕತ್ವದ ಪೂರ್ಚುಗಲ್ ತಂಡ ಇಂದು ಘಾನಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ನವೆಂಬರ್ 29ರಂದು ಉರುಗ್ವೇ ಹಾಗೂ ಡಿಸೆಂಬರ್ 2 ರಂದು ದಕ್ಷಿಣ ಕೊರಿಯಾ ವಿರುದ್ದ ಪಂದ್ಯ ಆಡಲಿದೆ.

ಜಗತ್ತಿನ ಶೇ.10ರಷ್ಟು ಜನಸಂಖ್ಯೆ ಈಗ ಕ್ರಿಶ್ಚಿಯಾನೋ ರೊನಾಲ್ಡೋ ಫಾಲೋವರ್ಸ್‌

ಮ್ಯಾಂಚೆಸ್ಟರ್‌ ಯುನೈಟೆಡ್‌ ಮಾರಾಟಕ್ಕಿಟ್ಟಮಾಲೀಕರು!
ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌(ಇಪಿಎಲ್‌)ನ ಪ್ರಮುಖ ಕ್ಲಬ್‌, ಪ್ರತಿಷ್ಠಿತ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಮಾರಾಟ ಮಾಡಲು ಸಿದ್ಧವಿರುವುದಾಗಿ ತಂಡದ ಮಾಲೀಕರು ತಿಳಿಸಿದ್ದಾರೆ. ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ತಂಡದಿಂದ ನಿರ್ಗಮಿಸಿದ ಬೆನ್ನಲ್ಲೇ ತಂಡದ ಮಾರಾಟ ಸುದ್ದಿ ಹೊರಬಿದ್ದಿದೆ. ಅಮೆರಿಕ ಮೂಲದ ಗ್ಲೇಜರ್‌ ಕುಟುಂಬ ಕಳೆದ 17 ವರ್ಷಗಳಿಂದ ಯುನೈಟೆಡ್‌ ತಂಡದ ಮಾಲಿಕತ್ವ ಹೊಂದಿದ್ದು, ಈ ಕುಟುಂಬದ ಸುದೀರ್ಘ ಕಾಲದ ಅಧಿಪತ್ಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ‍್ಯ ತಂತ್ರಗಳನ್ನು ಕ್ಲಬ್‌ ಪರಿಗಣಿಸುತ್ತದೆ ಎಂದು ಮಾಲೀಕರು ತಿಳಿಸಿದ್ದಾರೆ. ಇಂಗ್ಲೆಂಡ್‌ನ ಓಲ್ಡ್‌ ಟ್ರಾಫರ್ಡ್‌ ಮೂಲದ ಯುನೈಟೆಡ್‌ ತಂಡವನ್ನು 2005ರಲ್ಲಿ ಗ್ಲೇಜರ್‌ ಕುಟುಂಬ ಖರೀದಿಸಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಇಪಿಎಲ್‌ ಲೀಗ್‌ನಲ್ಲಿ 5ನೇ ಸ್ಥಾನದಲ್ಲಿದೆ.