ಲಿಸ್ಬನ್‌(ಪೋರ್ಚು​ಗ​ಲ್‌)ಅ.13: ಫುಟ್ಬಾಲ್‌ ತಾರೆ ಕ್ರಿಸ್ಟಿ​ಯಾನೋ ರೊನಾಲ್ಡೊ ಶೀಘ್ರವೇ ವೃತ್ತಿ​ಜೀ​ವ​ನದ 700ನೇ ಗೋಲಿನ ಮೈಲಿ​ಗಲ್ಲು ಬರೆಯಲಿ​ದ್ದಾರೆ. ಶುಕ್ರ​ವಾರ ಯೂರೋ 2020 ಕ್ವಾಲಿ​ಫೈ​ಯರ್‌ ಪಂದ್ಯ​ದಲ್ಲಿ ಲುಕ್ಸೆ​ಮ್‌​ಬರ್ಗ್‌ ತಂಡದ ವಿರುದ್ಧ ರೊನಾಲ್ಡೋ 2 ಗೋಲು ಹೊಡೆ​ದಿ​ದ್ದ​ರು. ಇದ​ರಿಂದ ರೊನಾಲ್ಡೋ ಅಂತಾ​ರಾ​ಷ್ಟ್ರೀಯ ಹಾಗೂ ಒಟ್ಟಾರೆ ವೃತ್ತಿ​ಜೀ​ವ​ನದ ಗೋಲು​ಗಳ ಸಂಖ್ಯೆ ಕ್ರಮ​ವಾಗಿ 94 ಹಾಗೂ 699ಕ್ಕೇರಿ​ವೆ. 

ಇದನ್ನೂ ಓದಿ: ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

ಸಾರ್ವ​ಕಾ​ಲಿಕ ಅತಿ​ಹೆಚ್ಚು ಗೋಲು ಹೊಡೆದ ಆಟ​ಗಾ​ರ​ರಲ್ಲಿ 34ರ ಹರೆ​ಯದ ರೊನಾಲ್ಡೋ 6ನೇ ಸ್ಥಾನ​ದ​ಲ್ಲಿ​ದ್ದಾರೆ. ಅತಿ​ಹೆಚ್ಚು ಗೋಲು ಹೊಡೆದ ಸಕ್ರಿಯ ಆಟ​ಗಾ​ರ​ರಲ್ಲಿ ರೊನಾಲ್ಡೊ ಅಗ್ರ​ಸ್ಥಾ​ನದಲ್ಲಿದ್ದಾ​ರೆ. ಪ್ರತಿ​ಸ್ಪರ್ಧಿ ಅರ್ಜೆಂಟೀ​ನಾದ ಲಿಯೊ​ನೆಲ್‌ ಮೆಸ್ಸಿ ಈವ​ರೆಗೆ 672 ಗೋಲು​ಗ​ಳ​ನ್ನಷ್ಟೇ ಹೊಡೆ​ದಿ​ದ್ದಾ​ರೆ.

ಇದನ್ನೂ ಓದಿ: ಮೈದಾನದಲ್ಲಿಯೇ ಕಣ್ಣೀರಿಟ್ಟ ಕ್ರಿಸ್ಟಿಯಾನೋ ರೊನಾಲ್ಡೋ

34ರ ಹರೆಯದ ರೋನಾಲ್ಡೋ ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ. ಯುವೆಂಟಸ್ ಲೀಗ್ ತಂಡದ ಕೀ ಪ್ಲೇಯರ್ ಆಗಿರುವ ರೋನಾಲ್ಡೋ, ವಿಶ್ವದ  ಅತ್ಯುತ್ತಮ ಫುಟ್ಬಾಲ್ ಪಟು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಫೆಬ್ರವರಿ 5, 1985ರಲ್ಲಿ ಹುಟ್ಟಿದ ರೋನಾಲ್ಡೋ, 15ನೇ ವಯಸ್ಸಿನಲ್ಲಿ ರೇಸಿಂಗ್ ಹಾರ್ಟ್(ಹೃದಯ ಸಂಬಂಧಿ) ಕಾಯಿಲೆಯಿಂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಮ್ಮ 18ನೇ ವಯಸ್ಸಿನಲ್ಲಿ ಮ್ಯಾಂಚೆಸ್ಟರ್ ತಂಡದ ಪರ ಕಣಕ್ಕಿಳಿಯೋ ಮೂಲಕ ದಾಖಲೆ ಬರೆದಿದ್ದರು.