ಯುವೆಂಟುಸ್‌ ಪರ ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಪಂದ್ಯದಲ್ಲೇ ಸ್ಟಾರ್ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಆಘಾತ ಅನುಭವಿಸಿದ್ದಾರೆ. ರೊನಾಲ್ಡೋ ಮೈದಾನದಲ್ಲಿಯೇ ಕಣ್ಣಿರು ಹಾಕಿರುವ ಪ್ರಸಂಗ ನಡೆದಿದೆ. 

ಇಟಲಿ, [ಸೆ.21]: ಸ್ಟಾರ್ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಪಂದ್ಯದಲ್ಲೇ ಆಘಾತ ಅನುಭವಿಸಿದ್ದಾರೆ.

ಯುವೆಂಟುಸ್‌ ಪರ ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಆಡುತ್ತಿರುವ ರೊನಾಲ್ಡೋ, ಮ್ಯಾಚ್ ರೆಫ್ರಿ ತೆಗೆದುಕೊಂಡ ನಿರ್ಧಾರಕ್ಕೆ ಮೈದಾನದಲ್ಲಿಯೇ ಕಣ್ಣಿರು ಹಾಕಿರುವ ಪ್ರಸಂಗ ನಡೆದಿದೆ.

ನಿನ್ನೆ (ಗುರುವಾರ) ಲಾ ಲೀಗಾ ತಂಡದ ವ್ಯಾಲೆನ್ಸೇನಿಯಾ ವಿರುದ್ಧದ ಪಂದ್ಯದ 28ನೇ ನಿಮಿಷದಲ್ಲಿ ಎದುರಾಳಿ ಆಟಗಾರನನ್ನು ತಳ್ಳಿದರು ಎನ್ನುವ ಕಾರಣಕ್ಕೆ ರೆಫ್ರಿ, ರೊನಾಲ್ಡೋಗೆ ರೆಡ್‌ ಕಾರ್ಡ್‌ ನೀಡಿದ್ದಾರೆ.

ರೆಫ್ರಿ ರೆಡ್‌ ಕಾರ್ಡ್‌ ತೋರಿಸುತ್ತಿದ್ದಂತೆ ರೊನಾಲ್ಡೋ ಕಣ್ಣೀರಿಡುತ್ತಾ, ಗೋಳಾಡಿದರು. ಆ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.