ಇಂದಿನಿಂದ ಐಎಸ್‌ಎಲ್ ಫುಟ್ಬಾಲ್ ಟೂರ್ನಿ ಆರಂಭ
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಆರನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಟೂರ್ನಿಯ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...
ಕೊಚ್ಚಿ(ಅ.20): 6ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಗೆ ಭಾನುವಾರ ಇಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಂಡಗಳಾದ ಅಟ್ಲೆಟಿಕೊ ಡಿ ಕೋಲ್ಕತಾ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಸೋಮವಾರ ತನ್ನ ತವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಮಾರ್ಚ್ 2020ರಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 10 ತಂಡಗಳು ಸೆಣಸಲಿದ್ದು, ಲೀಗ್ ಹಂತದ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳನ್ನು ಗಳಿಸುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ರಾಂಚಿ ಟೆಸ್ಟ್: ರೋಹಿತ್ ಶರ್ಮಾ ಭರ್ಜರಿ ಡಬಲ್ ಸೆಂಚುರಿ
ಲೀಗ್ ಹಂತದಲ್ಲಿ ಪ್ರತಿ ತಂಡ ಒಟ್ಟು 18 ಪಂದ್ಯಗಳನ್ನು ಆಡಲಿದೆ. ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಒಟ್ಟು 9 ಪಂದ್ಯಗಳನ್ನು ಆಡಲಿದ್ದು, ಚೆಟ್ರಿ ಪಡೆ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿದೆ.
BFCಗೆ ಯಶ್ ಬೆಂಬಲ:
ಇಂಡಿಯನ್ ಸೂಪರ್ ಲೀಗ್ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್’ಸಿ ತಂಡವನ್ನು ನಟ ಯಶ್ ಬೆಂಬಲಿಸಿದ್ದಾರೆ. ಶನಿವಾರ ಯಶ್ ಹೆಸರಿನ ಜೆರ್ಸಿಯನ್ನು ಬಿಎಫ್’ಸಿ ತಂಡ ಹಸ್ತಾಂತರಿಸಿತು. ಯಶ್ ಬಿಎಫ್’ಸಿ ಗೆ ಬೆಂಬಲ