ಫುಟ್ಬಾಲ್: ಇನ್ನು ಸುಖಾ ಸುಮ್ಮನೆ ಕೆಮ್ಮಿದರೆ ರೆಡ್ ಕಾರ್ಡ್!
ಕೊರೋನಾ ಭೀತಿಯ ನಡುವೆಯೇ ಕ್ರೀಡಾ ಚಟುವಟಿಕೆಗಳು ಆರಂಭವಾಗಿವೆ. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಟಗಾರನೊಬ್ಬ ಉದ್ದೇಶಪೂರ್ವಕವಾಗಿ ಕೆಮ್ಮಿದರೆ ರೆಡ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಜ್ಯೂರಿಚ್(ಆ.05): ಫುಟ್ಬಾಲ್ ಪಂದ್ಯಗಳಲ್ಲಿ ಇನ್ಮುಂದೆ ಆಟಗಾರರು ಅನವಶ್ಯಕವಾಗಿ ಎದುರಾಳಿ ಆಟಗಾರನ ಮುಂದೆ ಕೆಮ್ಮಿದರೆ, ಅಂತಹ ಆಟಗಾರನಿಗೆ ರೆಫ್ರಿ ರೆಡ್ ಕಾರ್ಡ್ ನೀಡಬಹುದಾಗಿದೆ.
ಫುಟ್ಬಾಲ್‌ನ ನಿಯಮಗಳನ್ನು ರಚಿಸಿರುವ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ, ಕೊರೋನಾ ಹಿನ್ನೆಲೆಯಲ್ಲಿ ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಎದುರಾಳಿಯ ಮೇಲೆ ಹಲ್ಲೆ ಇಲ್ಲವೇ ಅವಹೇಳನ, ಅನುಚಿತ ವರ್ತನೆ ವರ್ಗಕ್ಕೆ ಅನವಶ್ಯಕವಾಗಿ ಕೆಮ್ಮುವುದನ್ನೂ ಸೇರಿಸಲಾಗಿದೆ.
ದೇಶದ 5 ವಲಯಗಳಲ್ಲಿ ಫುಟ್ಬಾಲ್ ಪ್ರತಿಭಾನ್ವೇಷಣೆ
ನವದೆಹಲಿ: ಫಿಫಾ ವಿಶ್ವಕಪ್ಗೆ ಭಾರತ ಅರ್ಹತೆ ಗಳಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ವಿಶಿಷ್ಠ ಯೋಜನೆ ರೂಪಿಸಿದೆ. ದೇಶದ 5 ವಲಯಗಳಲ್ಲಿ ಪ್ರತಿಭಾನ್ವೇಷಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ ಘೋಷಿಸಿದ್ದಾರೆ.
ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!
ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮ ನಡೆಯಲಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರ ಹಣಕಾಸು ನೆರವು ನೀಡಲಿದೆ. ಭಾರತೀಯ ಫುಟ್ಬಾಲ್ ಫೆಡರೇಷನ್ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ‘ಮುಂದಿನ ಕೆಲ ತಿಂಗಳಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆರಂಭಿಸಲಿದ್ದೇವೆ. ಉತ್ತರ, ದಕ್ಷಿಣ, ಕೇಂದ್ರ, ಪಶ್ಚಿಮ ಹಾಗೂ ಪೂರ್ವ ವಲಯಗಳಲ್ಲಿರುವ ಪ್ರತಿಭೆಗಳನ್ನು ಹುಡುಕಲಿದ್ದೇವೆ. ಮುಂದಿನ 10-15 ವರ್ಷಗಳಲ್ಲಿ ವಿಶ್ವಕಪ್ ಇಲ್ಲವೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಮ್ಮ ಗುರಿ’ ಎಂದು ರಿಜಿಜು ಹೇಳಿದ್ದಾರೆ.