ಸೇಂಟ್‌ ಎಟಿಯೆನ್‌ ಎಂಬಲ್ಲಿ ನ್ಯೂಜಿಲೆಂಡ್‌ ಮಹಿಳಾ ಫುಟ್ಬಾಲಿಗರು ಅಭ್ಯಾಸ ನಿರತರಾಗಿದ್ದಾಗ ಡ್ರೋನ್‌ ಹಾರುವುದು ಕಂಡುಬಂದಿದೆ. ಕೂಡಲೇ ತಂಡದ ಅಧಿಕಾರಿಗಳು ಕ್ರೀಡಾಕೂಟದ ಆಯೋಜಕರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಡ್ರೋನ್‌ ಹಾಗೂ ಅದನ್ನು ಬಳಸುತ್ತಿದ್ದ ಕೆನಡಾ ತಂಡದ ಸಹಾಯಕ ಸಿಬ್ಬಂದಿಯೋರ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ

ಪ್ಯಾರಿಸ್‌: ಒಲಿಂಪಿಕ್ಸ್‌ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ಮಹಿಳಾ ಫುಟ್ಬಾಲ್‌ ತಂಡ ಅಭ್ಯಾಸ ನಡೆಸುತ್ತಿದ್ದಾಗ ಅದರ ದೃಶ್ಯಗಳನ್ನು ಕೆನಡಾ ತಂಡ ಡ್ರೋನ್‌ ಹಾರಿಸಿ ಸೆರೆಹಿಡಿದ ಘಟನೆ ನಡೆಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರೊಂದಿಗೆ ಜಾಗತಿಕ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ವಿವಾದ ಶುರುವಾದಂತಾಗಿದೆ.

ಸೇಂಟ್‌ ಎಟಿಯೆನ್‌ ಎಂಬಲ್ಲಿ ನ್ಯೂಜಿಲೆಂಡ್‌ ಮಹಿಳಾ ಫುಟ್ಬಾಲಿಗರು ಅಭ್ಯಾಸ ನಿರತರಾಗಿದ್ದಾಗ ಡ್ರೋನ್‌ ಹಾರುವುದು ಕಂಡುಬಂದಿದೆ. ಕೂಡಲೇ ತಂಡದ ಅಧಿಕಾರಿಗಳು ಕ್ರೀಡಾಕೂಟದ ಆಯೋಜಕರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಡ್ರೋನ್‌ ಹಾಗೂ ಅದನ್ನು ಬಳಸುತ್ತಿದ್ದ ಕೆನಡಾ ತಂಡದ ಸಹಾಯಕ ಸಿಬ್ಬಂದಿಯೋರ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕೆನಡಾ ತಂಡ ಕ್ಷಮೆಯಾಚನೆ ನಡೆಸಿದ್ದು, ಡ್ರೋನ್‌ ಹಾರಿಸಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.

5 ವರ್ಷಕ್ಕೆ ಮೆಗಾ ಹರಾಜು, ಆರು ಆಟಗಾರರು ರೀಟೈನ್‌; ಬಿಸಿಸಿಐ ಮುಂದೆ ಐಪಿಎಲ್‌ ಫ್ರಾಂಚೈಸಿ ಡಿಮ್ಯಾಂಡ್..!

ಆಸ್ಟ್ರೇಲಿಯಾದ ಐದು ಅಥ್ಲೀಟ್ಸ್‌ಗೆ ಕೋವಿಡ್‌

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಕೋವಿಡ್‌ ಕಾಟ ಶುರುವಾಗಿದ್ದು, ಆಸ್ಟ್ರೇಲಿಯಾ ಮಹಿಳಾ ವಾಟರ್‌ ಪೋಲೋ ತಂಡದ ಐವರಿಗೆ ಕೋವಿಡ್‌ ದೃಢಪಟ್ಟಿದೆ. ಇದನ್ನು ಆಸ್ಟ್ರೇಲಿಯಾ ತಂಡದ ಮುಖ್ಯಸ್ಥೆ ಅನ್ನಾ ಮೀರೆಸ್‌ ಖಚಿಪಡಿಸಿಕೊಂಡಿದ್ದು, 

‘ವಾಟರ್‌ ಪೋಲೋ ತಂಡದ ಐವರಿಗೆ ಕೋವಿಡ್‌ ಇದೆ ಎಂದಿದ್ದಾರೆ. ಅಲ್ಲದೆ, ತಂಡದಲ್ಲಿ ಅನಾರೋಗ್ಯಕ್ಕೊಳಗಾಗುವ ಎಲ್ಲರಿಗೂ ಮುನ್ನಚ್ಚರಿಕಾ ಕ್ರಮವಾಗಿ ಕೋವಿಡ್‌ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಕೋವಿಡ್‌ ದೃಢಪಟ್ಟಿರುವ ಬಗ್ಗೆ ಫ್ರಾನ್ಸ್‌ ಆರೋಗ್ಯ ಸಚಿವ ಫ್ರೆಡೆರಿಕ್‌ ಮಾತನಾಡಿದ್ದು, ‘ಕೋವಿಡ್‌ ಹರಡದಂತೆ ತಡೆಯಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆಸ್ತಿ ಎಷ್ಟು ಗೊತ್ತಾ?

ಪ್ಯಾರಿಸ್‌ನಲ್ಲಿ ಆಸೀಸ್‌ ಮಹಿಳೆಯ ಮೇಲೆ ಐವರಿಂದ ಅತ್ಯಾಚಾರ!

ಪ್ಯಾರಿಸ್‌: ಒಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರಗೈದಿರುವ ಭೀಕರ ಘಟನೆ ವರದಿಯಾಗಿದೆ.

ಫ್ರಾನ್ಸ್‌ ಮಾಧ್ಯಮ ವರದಿಗಳ ಪ್ರಕಾರ, 25 ವರ್ಷದ ಮಹಿಳೆ ಶುಕ್ರವಾರ ರಾತ್ರಿ ಬಾರ್‌ ಮತ್ತು ಕ್ಲಬ್‌ಗಳಲ್ಲಿ ಕಾಲ ಕಳೆದಿದ್ದಾರೆ. ಬಳಿಕ ಆಕೆಯನ್ನು ಕರೆದೊಯ್ದ ಐವರು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಶನಿವಾರ ಬೆಳಗ್ಗೆ ಹರಿದ ಬಟ್ಟೆಯೊಂದಿಗೆ ಪ್ಯಾರಿಸ್‌ನ ಪಿಗೆಲ್ಲೆ ಎಂಬಲ್ಲಿರುವ ರೆಸ್ಟೋರೆಂಟ್‌ ಬಳಿ ಬಂದ ಮಹಿಳೆ ಅಲ್ಲಿನ ಸಿಬ್ಬಂದಿ, ಗ್ರಾಹಕರ ಜೊತೆ ಸಹಾಯಕ್ಕೆ ಅಂಗಲಾಚಿದ್ದಾರೆ. ಮಹಿಳೆ ಸ್ಥಿತಿಯನ್ನು ಗಮನಿಸಿದ ರೆಸ್ಟೋರೆಂಟ್‌ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆ ರೆಸ್ಟೋರೆಂಟ್‌ಗೆ ಆಗಮಿಸಿ ಅಂಗಲಾಚುವ, ಆರೋಪಿಯೋರ್ವ ಆಕೆಯನ್ನು ಹಿಂಬಾಲಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.