ಮಾಲ್ಡೀವ್ಸ್‌ ಎದುರು ಬಾಂಗ್ಲಾಕ್ಕೆ 3-1 ಜಯಸ್ಯಾಫ್‌ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಜಯ ದಾಖಲಿಸಿದ ಬಾಂಗ್ಲಾದೇಶ'ಬಿ' ಗುಂಪಿನ ಸೆಮೀಸ್‌ ರೇಸ್‌ ಇನ್ನಷ್ಟು ರೋಚಕ

ಬೆಂಗಳೂರು(ಜೂ.26): 14ನೇ ಆವೃತ್ತಿಯ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಮಾಲ್ಡೀವ್ಸ್‌ಗೆ ಬಾಂಗ್ಲಾದೇಶ ಸೋಲಿನ ಆಘಾತ ನೀಡಿದ್ದು, ‘ಬಿ’ ಗುಂಪಿನ ಸೆಮಿಫೈನಲ್‌ ರೇಸ್‌ ಮತ್ತಷ್ಟು ರೋಚಕತೆ ಸೃಷ್ಟಿಸಿದೆ. ಭಾನುವಾರ ಬಾಂಗ್ಲಾ 3-1 ಗೋಲುಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಉಭಯ ತಂಡಗಳು ಸದ್ಯ 2 ಪಂದ್ಯಗಳಲ್ಲಿ ತಲಾ 3 ಅಂಕಗಳನ್ನು ಸಂಪಾದಿಸಿದ್ದು, ತಮ್ಮ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾಲ್ಡೀವ್ಸ್‌ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ ಬಾಂಗ್ಲಾ ಅತ್ಯುತ್ತಮ ಹೋರಾಟ ಪ್ರದರ್ಶಿಸಿ ಪಂದ್ಯ ಕೈ ಜಾರದಂತೆ ನೋಡಿಕೊಂಡಿತು. 17ನೇ ನಿಮಿಷದಲ್ಲಿ ಹಂಝ ಮೊಹಮ್ಮದ್‌ ಮಾಲ್ಡೀವ್ಸ್‌ಗೆ ಮುನ್ನಡೆ ಒದಗಿಸಿದರೂ, ರಕೀಬ್‌ ಹೊಸೈನ್‌(42ನೇ ನಿ.), ತಾರಿಖ್‌ ಖಾಜಿ(67ನೇ ನಿ.), ಶೇಖ್‌ ಮೊರ್ಸಲಿನ್‌(90ನೇ ನಿ.) ಗೋಲು ಬಾರಿಸಿ ಬಾಂಗ್ಲಾಕ್ಕೆ ಜಯ ತಂದುಕೊಟ್ಟರು. ಬಾಂಗ್ಲಾ ಕೊನೆ ಪಂದ್ಯದಲ್ಲಿ ಜೂ.28ಕ್ಕೆ ಭೂತಾನ್‌ ವಿರುದ್ಧ ಸೆಣಸಾಡಲಿದ್ದು, ಮಾಲ್ಡೀವ್ಸ್‌ಗೆ ಲೆಬನಾನ್‌ ಸವಾಲು ಎದುರಾಗಲಿದೆ.

Scroll to load tweet…

ಲೆಬನಾನ್‌ಗೆ 2ನೇ ಗೆಲುವು

ಆರಂಭಿಕ ಪಂದ್ಯದಲ್ಲಿ ಬಾಂಗ್ಲಾವನ್ನು ಮಣಿಸಿದ್ದ ಲೆಬನಾನ್‌ ಭಾನುವಾರ ಭೂತಾನ್‌ ವಿರುದ್ಧ 4-0 ಭರ್ಜರಿ ಗೆಲುವು ಸಾಧಿಸಿತು. ಆರಂಭದಲ್ಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಲೆಬನಾನ್‌ ಯಾವ ಕ್ಷಣದಲ್ಲೂ ಭೂತಾನ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ಪಂದ್ಯ ತನ್ನದಾಗಿಸಿಕೊಂಡಿತು. ಲೆಬನಾನ್‌ ‘ಬಿ’ ಗುಂಪಿನಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದರೆ, ಭೂತಾನ್‌ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದೆ.

SAFF Cup 2023: ನೇಪಾಳವನ್ನು ಮಣಿಸಿ ಸೆಮೀಸ್‌ಗೇರಿದ ಭಾರತ

ಸ್ಯಾಫ್‌ ಕಪ್‌ ಅಂಕ​ಪ​ಟ್ಟಿ

ಗುಂಪು ‘ಎ’

ತಂಡ ​ಪಂದ್ಯ ​ಜ​ಯ ​ಸೋ​ಲು ​ಡ್ರಾ ​ಅಂಕ

ಕುವೈ​ತ್‌ 02 02 00 00 06

ಭಾರ​ತ 02 02 00 00 06

ನೇಪಾಳ 02 00 02 00 00

ಪಾಕಿ​ಸ್ತಾ​ನ 02 00 02 00 00

ಗುಂಪು ‘ಬಿ’

ತಂಡ ​ಪಂದ್ಯ ​ಜ​ಯ ​ಸೋ​ಲು ​ಡ್ರಾ ​ಅಂಕ

ಲೆಬ​ನಾ​ನ್‌ 02 02 00 00 06

ಬಾಂಗ್ಲಾ​ದೇ​ಶ 02 01 01 00 03

ಮಾಲ್ಡೀ​ವ್‌್ಸ 01 01 00 00 03

ಭೂತಾ​ನ್‌ 01 00 01 00 00

ಒಲಿಂಪಿಕ್ಸ್‌ ಡೇ ರನ್‌

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ‘ಒಲಿಂಪಿಕ್ಸ್‌ ಡೇ ರನ್‌’ ಕಾರ್ಯಕ್ರಮ ಆಯೋಜಿಲಾಗಿತ್ತು. ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು. ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಒಲಿಂಪಿಯನ್‌ ಪ್ರಮೀಳಾ ಅಯ್ಯಪ್ಪ ಹಾಗೂ ನೂರಾರು ಅಥ್ಲೀಟ್‌ಗಳು ಈ ವೇಳೆ ಹಾಜರಿದ್ದರು.

ಆಲ್ಕರಜ್‌ ಮತ್ತೆ ನಂ.1 ಪಟ್ಟ

ಲಂಡನ್‌: ಕ್ವೀನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆಲ್ಲುವ ಮೂಲಕ ತಾರಾ ಟೆನಿಸಿಗ, ಸ್ಪೇನ್‌ ಕಾರ್ಲೋಸ್‌ ಆಲ್ಕರಜ್‌ ಮತ್ತೆ ವಿಶ್ವ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ಫ್ರೆಂಚ್ ಓಪನ್‌ ಗ್ರ್ಯಾನ್‌ಸ್ಲಾಂ ಗೆದ್ದಿದ್ದ ನೋವಾಕ್‌ ಜೋಕೋವಿಚ್‌, ಆಲ್ಕರಜ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಆದರೆ ಕೆಲವೇ ದಿನಗಳಲ್ಲಿ 20 ವರ್ಷದ ಆಲ್ಕರಜ್‌ ಅಗ್ರಸ್ಥಾನ ಮರಳಿ ಪಡೆದಿದ್ದಾರೆ.