ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡದ ಹೋರಾಟ ಅಂತ್ಯವಾಗಿದೆ. ಎಟಿಕೆ ತಂಡ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಸೆಣಸಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕೋಲ್ಕತಾ(ಮಾ.09): ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ, 6ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಿಂದ ಹೊರಬಿದ್ದಿದೆ. 

ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಪಟು ರೊನಾಲ್ಡಿನೊ ಬಂಧನ!

Scroll to load tweet…

ಭಾನುವಾರ ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ 2ನೇ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ಅಟ್ಲೆಟಿಕೊ ಡಿ ಕೋಲ್ಕತಾ ಎದುರು 3-1 ಗೋಲುಗಳಿಂದ ಸೋಲು ಅನುಭವಿಸಿತು. ಒಟ್ಟಾರೆ 2 ಗೋಲುಗಳ ಅಂತರದಲ್ಲಿ ಚಾಂಪಿಯನ್‌ ಬಿಎಫ್‌ಸಿಯನ್ನು 2-3 ಗೋಲುಗಳಿಂದ ಬಗ್ಗುಬಡಿದ ಎಟಿಕೆ ಫೈನಲ್‌ ಪ್ರವೇಶಿಸಿತು. ಮಾ.14ರಂದು ಗೋವಾದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಎಟಿಕೆ ಹಾಗೂ ಚೆನ್ನೈಯಿನ್‌ ಎಫ್‌ಸಿ ಪ್ರಶಸ್ತಿಗಾಗಿ ಸೆಣಸಲಿದೆ.

ISL 2020: ಎಟಿಕೆ ಮಣಿಸಿ ಫೈನಲ್‌ಗೆ ಒಂದು ಹೆಜ್ಜೆ ಇಟ್ಟ BFC!

Scroll to load tweet…

ಮಾ.1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮೀಸ್‌ ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ಎಟಿಕೆ ವಿರುದ್ಧ 1-0 ಯಿಂದ ಜಯ ಸಾಧಿಸಿತ್ತು. 2ನೇ ಚರಣದ ಪಂದ್ಯದಲ್ಲಿ ಎಟಿಕೆ ಫೈನಲ್‌ಗೇರಲು 2 ಗೋಲುಗಳ ಅಂತರದಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆಯಲ್ಲಿ ಕಣಕ್ಕಿಳಿದಿತ್ತು. ತವರಿನ ಲಾಭ ಪಡೆದಿದ್ದ ಎಟಿಕೆಗೆ ಬಿಎಫ್‌ಸಿ ಆರಂಭದಲ್ಲೇ ಪೆಟ್ಟು ನೀಡಿತು. ಪಂದ್ಯದ 5ನೇ ನಿಮಿಷದಲ್ಲಿ ಬಿಎಫ್‌ಸಿಯ ಆಶಿಕ್‌ ಆಕರ್ಷಕ ಫೀಲ್ಡ್‌ ಗೋಲುಗಳಿಸಿ 1-0 ಮುನ್ನಡೆ ನೀಡಿದರು. 30ನೇ ನಿಮಿಷದಲ್ಲಿ ಕೃಷ್ಣ ಎಟಿಕೆ ಪರ ಗೋಲುಗಳಿಸಿ 1-1 ರಿಂದ ಸಮಬಲ ಸಾಧಿಸಿದರು. ಡೇವಿಡ್‌ ವಿಲಿಯಮ್ಸ್‌ (63, 79ನೇ ನಿ.) ಗೋಲು ಬಾರಿಸಿ ಎಟಿಕೆ ಜಯದಲ್ಲಿ ಮಹತ್ವದ ಪಾತ್ರವಹಿಸಿದರು.