Asianet Suvarna News Asianet Suvarna News

Indian Super League: ಇಂದು ಬಿಎ​ಫ್‌​ಸಿ-ಎಟಿಕೆ ಫೈನಲ್‌ ಫೈಟ್

* ಇಂಡಿಯನ್ ಸೂಪರ್ ಲೀಗ್ ಫೈನಲ್ ಇಂದಿನಿಂದ ಆರಂಭ
* ಪ್ರಶಸ್ತಿಗಾಗಿ ಬಿಎಫ್‌ಸಿ-ಎಟಿಕೆ ಮೋಹನ್ ಬಗಾನ್ ಪೈಪೋಟಿ
* ಗೋವಾದ ಜವ​ಹ​ರ​ಲಾಲ್‌ ನೆಹರೂ ಕ್ರೀಡಾಂಗಣ ಆತಿಥ್ಯ

ATK Mohun Bagan face Bengaluru FC in ISL final kvn
Author
First Published Mar 18, 2023, 9:10 AM IST

ಪಣ​ಜಿ(ಮಾ.18): 9ನೇ ಆವೃ​ತ್ತಿಯ ಇಂಡಿ​ಯನ್‌ ಸೂಪರ್‌ ಲೀಗ್‌​(​ಐ​ಎ​ಸ್‌​ಎ​ಲ್‌) ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯ ಶನಿ​ವಾರ ನಡೆ​ಯ​ಲಿದ್ದು, ಮಾಜಿ ಚಾಂಪಿ​ಯ​ನ್‌​ಗ​ಳಾದ ಬೆಂಗ​ಳೂರು ಎಫ್‌ಸಿ ಹಾಗೂ ಎಟಿಕೆ ಮೋಹನ್‌ ಬಗಾನ್‌ ತಂಡ​ಗಳು ಪ್ರಶ​ಸ್ತಿ​ಗಾಗಿ ಸೆಣ​ಸಲಿವೆ. ಪಂದ್ಯಕ್ಕೆ ಗೋವಾದ ಜವ​ಹ​ರ​ಲಾಲ್‌ ನೆಹರೂ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿ​ದೆ.

2017-18ರಲ್ಲಿ ಫೈನ​ಲ್‌​ಗೇರಿ, 2018-19ರ ಆವೃತ್ತಿಯಲ್ಲಿ ಚಾಂಪಿ​ಯನ್‌ ಆಗಿದ್ದ ಬಿಎ​ಫ್‌ಸಿ ಮೂರನೇ ಬಾರಿ ಫೈನಲ್‌ ಪ್ರವೇ​ಶಿ​ಸಿದ್ದು, 2ನೇ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿದೆ. ಟೂರ್ನಿಯ ಆರಂಭ​ದಲ್ಲಿ ಸತತ ಸೋಲು​ಗ​ಳಿಂದ ಕಂಗೆ​ಟ್ಟಿದ್ದ ಬಿಎ​ಫ್‌ಸಿ ಬಳಿಕ 2023ರಲ್ಲಿ ಆಡಿದ 8 ಲೀಗ್‌ ಪಂದ್ಯ​ಗ​ಳಲ್ಲೂ ಗೆದ್ದು ನಾಕೌಟ್‌ ಪ್ರವೇ​ಶಿ​ಸಿತ್ತು. ವಿವಾ​ದ​ದೊಂದಿಗೆ ಮುಗಿ​ದಿದ್ದ ಪ್ಲೇ-ಆಫ್‌ ಪಂದ್ಯ​ದಲ್ಲಿ ಕೇರ​ಳ​ ಬ್ಲಾಸ್ಟರ್‌ ತಂಡ​ವನ್ನು ಮಣಿಸಿದ್ದ ಬಿಎ​ಫ್‌ಸಿ ಸೆಮಿ​ಫೈ​ನ​ಲ್‌​ನಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಅತಿ ರೋಚ​ಕ​ವಾಗಿ ಗೆದ್ದು ಪ್ರಶಸ್ತಿ ಸುತ್ತಿ​ಗೇ​ರಿದೆ.

ಮತ್ತೊಂದೆಡೆ 2014ರ ಚೊಚ್ಚಲ ಆವೃ​ತ್ತಿ, 2016 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿ​ರುವ ಎಟಿಕೆಗೆ ಇದು 5ನೇ ಫೈನಲ್‌. ಲೀಗ್ ಹಂತ​ದಲ್ಲಿ 3ನೇ ಸ್ಥಾನಿ​ಯಾ​ಗಿದ್ದ ಕೋಲ್ಕ​ತಾದ ತಂಡ ಪ್ಲೇ-ಆಫ್‌​ನಲ್ಲಿ ಒಡಿಶಾ ವಿರುದ್ಧ ಗೆದ್ದಿತ್ತು. ಬಳಿಕ ಸೆಮಿ​ಫೈ​ನ​ಲ್‌​ನಲ್ಲಿ ಹಾಲಿ ಚಾಂಪಿ​ಯನ್‌ ಹೈದ​ರಾ​ಬಾದ್‌ ಎಫ್‌ಸಿ ತಂಡ​ವನ್ನು ಮಣಿಸಿ ಫೈನ​ಲ್‌​ಗೇ​ರಿದೆ.

ಪಂದ್ಯ: ಸಂಜೆ 7.30ಕ್ಕೆ
ನೇರ​ಪ್ರ​ಸಾ​ರ: ಸ್ಟಾರ್‌ ​ಸ್ಪೋರ್ಟ್ಸ್

ಆಲ್‌ ಇಂಗ್ಲೆಂಡ್‌: ಸೆಮೀ​ಸ್‌ ತಲು​ಪಿದ ತ್ರೀಸಾ-ಗಾಯ​ತ್ರಿ

ಬರ್ಮಿಂಗ್‌​ಹ್ಯಾ​ಮ್‌: ಭಾರ​ತದ ತಾರಾ ಶಟ್ಲ​ರ್‌​ಗ​ಳಾದ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿ​ಚಂದ್‌ ಪ್ರತಿ​ಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ ಸತತ 2ನೇ ಬಾರಿ ಸೆಮಿ​ಫೈ​ನ​ಲ್‌ಗೆ ಲಗ್ಗೆ ಇಟ್ಟಿ​ದ್ದಾರೆ. ಇದೊಂದು ವಿಭಾಗ ಹೊರತುಪಡಿಸಿ ಉಳಿದ ನಾಲ್ಕೂ ವಿಭಾಗಗಳಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಕಳೆದ ವರ್ಷ ಸೆಮೀ​ಸ್‌​ನಲ್ಲಿ ಸೋತು ಹೊರ​ಬಿ​ದ್ದಿದ್ದ ತ್ರೀಸಾ-ಗಾಯತ್ರಿ ಜೋಡಿ ಈ ಬಾರಿ ಚಿನ್ನದ ಪದ​ಕದ ಮೇಲೆ ಕಣ್ಣಿ​ಟ್ಟಿ​ದೆ.

ಶುಕ್ರ​ವಾರ ಮಹಿಳಾ ಡಬಲ್ಸ್‌ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಭಾರ​ತದ ಜೋಡಿ ಚೀನಾದ ಲೀ ವೆನ್‌ ಮೆಯ್‌-ಲಿಯು ಕ್ಷಾನ್‌ ಜೋಡಿ ವಿರುದ್ಧ 21-14, 18-21, 21-12 ಗೇಮ್‌​ಗ​ಳಲ್ಲಿ ಗೆಲುವು ಸಾಧಿ​ಸಿತು. ಸೆಮೀ​ಸ್‌​ನಲ್ಲಿ ಭಾರ​ತದ ಜೋಡಿ ಚೈನೀಸ್‌ ತೈಪೆಯ ಬೀಕ್‌ ಹಾನಾ-ಲೀ ಹೀ ಜೋಡಿ ವಿರುದ್ಧ ಸೆಣ​ಸಾ​ಡ​ಲಿ​ದೆ. 

ಆಸ್ಟ್ರೇಲಿಯಾ ವಿರುದ್ಧ ರಾಹುಲ್ -ಜಡೇಜಾ ಹೋರಾಟ, ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!

ಇದಕ್ಕೂ ಮೊದಲು ಗುರು​ವಾರ ರಾತ್ರಿ ಪುರು​ಷರ ಸಿಂಗ​ಲ್ಸ್‌​ನ 2ನೇ ಸುತ್ತಿ​ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ಜಪಾ​ನ್‌ನ ಕಡಾಯಿ ನರೋಕಾ ವಿರುದ್ಧ 17-21, 15-21 ಅಂತ​ರ​ದಲ್ಲಿ ಸೋತರೆ, ಎಚ್‌.ಎ​ಸ್‌.​ಪ್ರ​ಣಯ್‌ ಇಂಡೋ​ನೇ​ಷ್ಯಾದ ಆ್ಯಂಟನಿ ಗಿಂಟಿಂಗ್‌ ವಿರುದ್ಧ 20-22, 21-15, 17-21 ಗೇಮ್‌​ಗ​ಳಲ್ಲಿ ಪರಾ​ಭ​ವ​ಗೊಂಡ​ರು.

ಮಹಿಳಾ ವಿಶ್ವ ಬಾಕ್ಸಿಂಗ್‌: ಜ್ಯಾಸ್ಮೀನ್‌, ಶಶಿಗೆ ಜಯ

ನವ​ದೆ​ಹ​ಲಿ: 13ನೇ ಆವೃ​ತ್ತಿಯ ಮಹಿಳಾ ಬಾಕ್ಸಿಂಗ್‌ ವಿಶ್ವ​ ಚಾಂಪಿ​ಯ​ನ್‌​ಶಿ​ಪ್‌​ನ 2ನೇ ದಿನವೂ ಭಾರ​ತೀಯ ಬಾಕ್ಸ​ರ್‌​ಗಳು ಉತ್ತಮ ಪ್ರದ​ರ್ಶನ ತೋರಿದ್ದು, ಜ್ಯಾಸ್ಮೀನ್‌, ಶಶಿ ಚೋಪ್ರಾ 2ನೇ ಸುತ್ತಿಗೆ ಲಗ್ಗೆ ಇಟ್ಟಿ​ದ್ದಾರೆ. ಆದರೆ ಶ್ರುತಿ ಯಾದವ್‌ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿ​ದ್ದಾ​ರೆ.

ಶುಕ್ರ​ವಾರ 60 ಕೆ.ಜಿ. ವಿಭಾ​ಗ​ದ ಸ್ಪರ್ಧೆ​ಯಲ್ಲಿ ಜ್ಯಾಸ್ಮೀನ್‌ ತಾನ್ಜಾ​ನಿ​ಯಾದ ನ್ಯಾಮ್ಬೆಗಾ ಆ್ಯಂಬ್ರೋ​ಸ್‌ ವಿರುದ್ಧ ತಾಂತ್ರಿ​ಕ ಪ್ರಾಬಲ್ಯದೊಂದಿಗೆ ಗೆಲುವು ಸಾಧಿ​ಸಿ​ದರು. ಜ್ಯಾಸ್ಮೀ​ನ್‌ರ ಪಂಚ್‌ಗಳಿಗೆ ಉತ್ತರಿಸಲು ಎದುರಾಳಿಗೆ ಸಾಧ್ಯ​ವಾ​ಗು​ತ್ತಿಲ್ಲ ಎನ್ನು​ವು​ದನ್ನು ಮನ​ಗಂಡ ರೆಫ್ರಿ ಮೊದಲ ಸುತ್ತಲ್ಲೇ ಪಂದ್ಯ ನಿಲ್ಲಿ​ಸಿ ಜ್ಯಾಸ್ಮೀನ್‌ ಗೆದ್ದಿ​ರುವು​ದಾಗಿ ಘೋಷಿ​ಸಿ​ದ​ರು. ಇನ್ನು ಶಶಿ ಚೋಪ್ರಾ(63 ಕೆ.ಜಿ.​) ಕೀನ್ಯಾದ ಮ್ವಾಂಗಿ ವಾಂಜಿರು ವಿರುದ್ಧ 5-0 ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ ಫೈನ​ಲ್‌​ಗೇ​ರಿ​ದರು. ಇದೇ ವೇಳೆ ಕೂಟ ಆರಂಭಕ್ಕೂ ಹಿಂದಿನ ದಿನ ಸನಾ​ಮಚಾ ಚಾನು ಬದ​ಲಿ​ಗ​ರಾಗಿ ಆಯ್ಕೆ​ಯಾ​ಗಿದ್ದ ಶ್ರುತಿ 70 ಕೆ.ಜಿ. ವಿಭಾ​ಗದಲ್ಲಿ ಚೀನಾದ ಝೊಯು ಪಾನ್‌ ಎದುರು 0-5 ಅಂತ​ರ​ದಲ್ಲಿ ಪರಾ​ಭ​ವ​ಗೊಂಡರು. ಕೂಟ​ದಲ್ಲಿ ಇದು ಭಾರ​ತಕ್ಕೆ ಮೊದಲ ಸೋಲು.
 

Follow Us:
Download App:
  • android
  • ios