ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟಕ್ಕೆ ಭಾರತ ಫುಟ್ಬಾಲ್ ತಂಡ ಪ್ರಕಟಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಾಯಕ ಸುನಿಲ್ ಚೆಟ್ರಿ, ಹಿರಿಯ ಡಿಫೆಂಡರ್ ಸಂದೇಶ ಝಿಂಗನ್‌ ಹಾಗೂ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸ್ಥಾನ

ನವದೆಹಲಿ(ಆ.02): ಚೀನಾದ ಹ್ಯಾಂಗ್ಝೂನಲ್ಲಿ ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಭಾರತ ಪುಟ್ಬಾಲ್ ತಂಡದಲ್ಲಿ ನಾಯಕ ಸುನಿಲ್ ಚೆಟ್ರಿ, ಹಿರಿಯ ಡಿಫೆಂಡರ್ ಸಂದೇಶ ಝಿಂಗನ್‌ ಹಾಗೂ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ಮೊದಲು ತರಾತುರಿಯಲ್ಲಿ ಆಟಗಾರರ ಪಟ್ಟಿ ಸಲ್ಲಿಸಿದ್ದ ಭಾರತೀಯ ಫುಟ್ಬಾಲ್ ಫೆಡರೇಷನ್‌, ಈ ಮೂವರ ಹೆಸರನ್ನು ಕೈಬಿಟ್ಟಿತ್ತು ಎಂದು ವರದಿಯಾಗಿತ್ತು. ಆದರೆ ಏಷ್ಯನ್ ಗೇಮ್ಸ್‌ ಆಯೋಜಕರಿಗೆ ಮನವಿ ಮಾಡಿದ ಬಳಿಕ ಹೊಸ ಪಟ್ಟಿಯನ್ನು ಎಐಎಫ್‌ಎಫ್‌ ಪ್ರಕಟಿಸಿದೆ. ಏಷ್ಯಾಡ್‌ನಲ್ಲಿ ಅಂಡರ್-23 ತಂಡಗಳು ಕಣಕ್ಕಿಳಿಯಲಿದ್ದು, 3 ಆಟಗಾರರು 23 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅವಕಾಶವಿದೆ. ತಂಡದಲ್ಲಿ ಶಿವಶಕ್ತಿ, ಮಹೇಶ್ ಸಿಂಗ್, ಆಕಾಶ್ ಮಿಶ್ರಾ, ಅನ್ವರ್ ಅಲಿ, ರಾಹುಲ್‌ ಕೆ.ಪಿ., ಗೋಲ್‌ ಕೀಪರ್‌ಗಳಾದ ಧೀರಜ್ ಸಿಂಗ್, ಗುರುಮೀತ್ ಸಿಂಗ್ ಕೂಡಾ ಇದ್ದಾರೆ.

ಪುಟ್ಟಯ್ಯ ಮೆಮೋರಿಯಲ್‌ ಫುಟ್ಬಾಲ್‌ ಆಗಸ್ಟ್ 05ಕ್ಕೆ ಆರಂಭ

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಆಯೋಜಿಸುವ ಪುಟ್ಟಯ್ಯ ಮೆಮೋರಿಯಲ್ ಕಪ್‌ ಫುಟ್ಬಾಲ್‌ ಟೂರ್ನಿ ಆಗಸ್ಟ್ 05ರಿಂದ ಆರಂಭಗೊಳ್ಳಲಿದೆ. ಈ ಬಾರಿ ಬೆಂಗಳೂರು ಎಫ್‌ಸಿ, ಡೆಕ್ಕನ್‌ ಎಫ್‌ಸಿ ಸೇರಿದಂತೆ 12 ತಂಡಗಳು ಪಾಲ್ಗೊಳ್ಳಲಿದ್ದು, ಆಗಸ್ಟ್ 12ರಂದು ಫೈನಲ್‌ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳಿಗೆ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣ ಆತಿಥ್ಯ ವಹಿಸಿದೆ.

ಪತ್ನಿ ಆಥಿಯಾ ಶೆಟ್ಟಿ ರ‍್ಯಾಂಪ್ ವಾಕ್‌ ನೋಡಿದ ಕೆ ಎಲ್ ರಾಹುಲ್ ರಿಯಾಕ್ಷನ್‌ ಈಗ ವೈರಲ್‌..!

ಏಷ್ಯನ್‌ ಹಾಕಿ: ವಾಘಾ ಗಡಿ ಮೂಲಕ ಭಾರತಕ್ಕೆ ಪಾಕ್‌ ಎಂಟ್ರಿ

ಚೆನ್ನೈ: ಗುರುವಾರದಿಂದ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತಕ್ಕೆ ಅಟ್ಟಾರಿ-ವಾಘಾ ಗಡಿ ಮೂಲಕ ಆಗಮಿಸಿದೆ. ತಂಡ ಅಮೃತಸರಕ್ಕೆ ತೆರಳಿ ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿತು. ಭಾರತದ ಆಟಗಾರರು ಕೂಡಾ ಮಂಗಳವಾರ ಚೆನ್ನೈಗೆ ತಲುಪಿದ್ದು, ಉಭಯ ತಂಡಗಳ ನಡುವಿನ ಪಂದ್ಯ ಆಗಸ್ಟ್ 09ಕ್ಕೆ ನಡೆಯಲಿದೆ. ಭಾರತ ಹಾಕಿ ತಂಡವು ಚೀನಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದು, ಆಗಸ್ಟ್ 12ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಲಕ್ಷ್ಯ ಸೆನ್‌, ಪ್ರಣಯ್ ಜಿಗಿತ

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಎಚ್‌ ಎಸ್ ಪ್ರಣಯ್ ಹಾಗೂ ಲಕ್ಷ್ಯ ಸೆನ್ ಬಿಡಬ್ಲ್ಯೂಎಫ್‌ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಂಗಳವಾರ ಪ್ರಕಟಗೊಂಡ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪ್ರಣಯ್ ಒಂದು ಸ್ಥಾನ ಮೇಲೇರಿ 9ನೇ ಸ್ಥಾನ ಗಿಟ್ಟಿಸಿಕೊಂಡಿದ್ದರೆ, ಲಕ್ಷ್ಯ ಸೆನ್‌ ಎರಡು ಸ್ಥಾನ ಜಿಗಿತ ಕಂಡು 11ನೇ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 17ನೇ ಸ್ಥಾನದಲ್ಲಿ ಮುಂದುವರೆದಿದ್ದು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ತ್ರೀಸಾ-ಗಾಯತ್ರಿಗೆ ಜಯ

ಸಿಡ್ನಿ: ಭಾರತದ ತಾರಾ ಶಟ್ಲರ್‌ಗಳಾದ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್‌ ಆಸ್ಟ್ರೇಲಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ಕಂಚು ವಿಜೇತ, ವಿಶ್ವ ನಂ.17 ಭಾರತದ ಜೋಡಿ ಮಂಗಳವಾರ ಮಹಿಳಾ ಡಬಲ್ಸ್‌ ಮೊದಲ ಸುತ್ತಿನಲ್ಲಿ ಕೆನಡಾದ ಕ್ಯಾಥರಿನ್ ಚೊಯಿ-ಜೋಸೆಫಿನ್‌ ವು ವಿರುದ್ದ 21-16, 21-17 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿತು. 

ಇನ್ನು ಇದೇ ವೇಳೆ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಇಂಡೋನೇಷ್ಯಾ ಜೋಡಿ ವಿರುದ್ದ 11-221, 21-14, 17-21 ಗೇಮ್‌ಗಳ ಅಂತರದಲ್ಲಿ ಪರಾಭವಗೊಂಡಿತು.