* ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಚಾಂಪಿಯನ್* ಅರ್ಜೆಂಟೀನಾ ಗೋಲ್‌ಕೀಪಕ್ ಎಮಿಲಿಯಾನೊ ಮಾರ್ಟಿನೆಜ್ ಅಶ್ಲೀಲ ಸಂಭ್ರಮ ವೈರಲ್* ವೇದಿಕೆಯಲ್ಲೇ ಮರ್ಮಾಂಗದ ಬಳಿ ಟ್ರೋಫಿಯನ್ನಿಟ್ಟುಕೊಂಡು ಅಶ್ಲೀಲವಾಗಿ ವರ್ತನೆ
ದೋಹಾ(ಡಿ.20): ಫೈನಲ್ ಪಂದ್ಯದ ಗೆಲುವಿನ ಬಳಿಕ ಅರ್ಜೆಂಟೀನಾ ಗೋಲ್‌ಕೀಪಕ್ ಎಮಿಲಿಯಾನೊ ಮಾರ್ಟಿನೆಜ್ ಅವರು ಅಶ್ಲೀಲವಾಗಿ ಸಂಭ್ರಮಿಸಿದ್ದು, ಭಾರೀ ಟೀಕೆಗೆ ಕಾರಣವಾಗಿದೆ. ಟೂರ್ನಿಯ ಶ್ರೇಷ್ಠ ಗೋಲ್‌ಕೀಪರ್ ಆಗಿ ಹೊಮ್ಮಿದ ಮಾರ್ಟಿನೆಜ್ ಗೋಲ್ಡನ್ ಗ್ಲೌಸ್ ಪ್ರಶಸ್ತಿಯನ್ನು ಸ್ವೀಕರಿಸದ ಬಳಿಕ ವೇದಿಕೆಯಲ್ಲೇ ಮರ್ಮಾಂಗದ ಬಳಿ ಟ್ರೋಫಿಯನ್ನಿಟ್ಟುಕೊಂಡು ಅಶ್ಲೀಲವಾಗಿ ವರ್ತಿಸಿ, ತಮ್ಮನ್ನು ಕೆಣಕುತ್ತಿದ್ದ ಫ್ರಾನ್ಸ್ ಅಭಿಮಾನಿಗಳಿಗೆ ತಿರುಗೇಟು ನೀಡಿದರು.
ಈ ವಿಶ್ವಕಪ್‌ನ ಟಾಪ್ 5 ವಿವಾದಗಳು
1. ಸಲಿಂಗಕಾಮ ಬೆಂಬಲಿಸಿ ಯುರೋಪಿನ ತಂಡಗಳು ಕೈಪಟ್ಟಿಧರಿಸಲು ನಿರ್ಧರಿಸಿತ್ತು. ಫಿಫಾ ಇದನ್ನು ನಿಷೇಧಿಸಿ, ಆಟಗಾರರಿಗೆ ಹಳದಿ ಕಾರ್ಡ್ ನೀಡುವುದಾಗಿ ಎಚ್ಚರಿಸಿತು.
2. ಪಂದ್ಯದ ವೇಳೆ ಕ್ರೀಡಾಂಗಣಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಕತಾರ್ ನಿಷೇಧಿಸಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
3. ಸಲಿಂಗಕಾಮದ ವಿರುದ್ಧ ಕತಾರ್ ನೀತಿ ಖಂಡಿಸಿ ಜರ್ಮನಿ ಆಟಗಾರರು ಜಪಾನ್ ವಿರುದ್ಧ ಪಂದ್ಯಕ್ಕೂ ಮುನ್ನ ಬಾಯಿಗೆ ಕೈ ಇಟ್ಟು ಪ್ರತಿಭಟನೆ ನಡೆಸಿದರು.
FIFA World Cup ಸಂಭ್ರಮದಲ್ಲಿ ಮಿಂದೆದ್ದ ಚಾಂಪಿಯನ್ ಅರ್ಜೆಂಟೀನಾ!
4. ಉರುಗ್ವೆ ವಿರುದ್ಧ ಪೋರ್ಚುಗಲ್‌ನ ಹೆಡ್ಡರ್ ಗೋಲು ವಿವಾದ ಸೃಷ್ಟಿಸಿತು. ರೊನಾಲ್ಡೋ ತಲೆಗೆ ಬಾಲ್ ತಾಗದ ಕಾರಣ ಗೋಲು ಫೆರ್ನಾಂಡೆಸ್ ಖಾತೆಗೆ ಸೇರಿತು.
5. ಅರ್ಜೆಂಟೀನಾ-ನೆದರ್‌ಲೆಂಡ್‌್ಸ ಕ್ವಾರ್ಟರ್ ಪಂದ್ಯದಲ್ಲಿ ರೆಫ್ರಿ ಲೊಹೊಜ್ 15 ಹಳದಿ ಕಾರ್ಡ್ ನೀಡಿದರು. ಇದೇ ಕಾರಣಕ್ಕೆ ಅವರು ಟೂರ್ನಿಯಿಂದಲೇ ಹೊರಬಿದ್ದರು.
3 ದೇಶಗಳಲ್ಲಿ 2026ರ ವಿಶ್ವಕಪ್: 48 ತಂಡ ಕಣಕ್ಕೆ!
2026ರ ವಿಶ್ವಕಪ್ ಮೂಲಕ ಅಭಿಮಾನಿಗಳಿಗೆ ಕಾಲ್ಚೆಂಡಿನ ಮಹಾಸಮರದ ಹೊಸ ಮಾದರಿ ದರ್ಶನವಾಗಲಿದೆ. ಈ ಬಾರಿ ಸೇರಿದಂತೆ ಕಳೆದ 7 ಆವೃತ್ತಿಗಳಲ್ಲಿ ತಲಾ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡರೆ, 2026ರ ವಿಶ್ವಕಪ್‌ನಲ್ಲಿ 48 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ 64ರ ಬದಲು 80ಕ್ಕೆ ಏರಿಕೆಯಾಗಲಿವೆ. ಟೂರ್ನಿಗೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಲಿದ್ದು, 16 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಬಾರಿಗೆ 3 ದೇಶಗಳು ವಿಶ್ವಕಪ್ ಆತಿಥ್ಯ ವಹಿಸಲಿವೆ. 2002ರಲ್ಲಿ ಜಪಾನ್ ಹಾಗೂ ದಕ್ಷಿಣ ಕೊರಿಯಾ ಜಂಟಿ ಆತಿಥ್ಯ ವಹಿಸಿದ್ದವು. ಆ ಬಳಿಕ ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ದೇಶ ಒಂದು ಆವೃತ್ತಿಗೆ ಆತಿಥ್ಯ ನೀಡಲಿವೆ.
ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಕ್ಕೆ ದೀಪಿಕಾ ಪಡುಕೋಣೆಯನ್ನೇ ಆಯ್ಕೆ ಮಾಡಿದ್ದೇಕೆ?
ಈ ಮಾದರಿಯ ಬಗ್ಗೆ ಹಲವರು ಅಪಸ್ವರವೆತ್ತಿದ್ದು, ತಂಡಗಳ ಸಂಖ್ಯೆ ಏರಿಕೆ ಮಾಡುವುದರಿಂದ ವಿಶ್ವಕಪ್‌ನ ಗುಣಮಟ್ಟ ಕಡಿಮೆಯಾಗಲಿದೆ. ಕನಿಷ್ಠ ಒಂದೂವರೆ ತಿಂಗಳು ವಿಶ್ವಕಪ್ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದ್ದು, ಆಯೋಜನಾ ವೆಚ್ಚ ಸೇರಿದಂತೆ ಎಲ್ಲವೂ ಏರಿಕೆಯಾಗಲಿದೆ ಎಂದಿದ್ದಾರೆ. ಟೂರ್ನಿಯನ್ನು ಈಗಿರುವಂತೆ 32 ತಂಡಗಳಿಗೇ ಸೀಮಿತಗೊಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆಯಾದರೂ ಫಿಫಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
